ಸುಳ್ಯದ ಮಹಿಳೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು!
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕನಕಮಜಲು ಮೂಲದ ಮಹಿಳೆಯೋರ್ವರು ಬೆಂಗಳೂರಿನಲ್ಲಿ ಸಾವಿಗೆ ಶರಣಾಗಿದ್ದಾರೆ.
ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಶ್ರೀಮತಿ ಉಷಾ ದಂಪತಿಯ ಪುತ್ರಿ ಶ್ರೀಮತಿ ಐಶ್ವರ್ಯ(23) ಅವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಐಶ್ವರ್ಯ ಅವರನ್ನು ಕೆಲವು ವರ್ಷದ ಹಿಂದೆ ಕನಕಮಜಲು ಗ್ರಾಮದ , ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಗಿರಿಯಪ್ಪ ಗೌಡ ಅವರ ಪುತ್ರ ರಾಜೇಶ್ ಅವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಖಾಸಾಗಿ ಕಂಪೆನಿಯಲ್ಲಿ ಕೆಲಸಕಿದ್ದ ಐಶ್ವರ್ಯ ಮನೆಯಲ್ಲಿ ಯಾರು ಇಲ್ಲದ ಸಮಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ತಂದೆ ಸುಬ್ರಹ್ಮಣ್ಯ ಗೌಡ ಮದುವೆ ಗದ್ದೆ, ತಾಯಿ ಶ್ರೀಮತಿ ಉಷಾ , ಪತಿ ರಾಜೇಶ್ ಕಾಪಿಲ, ಸಹೋದರ ಸೂರ್ಯ, ಮಾವ ಗಿರಿಯಪ್ಪ ಗೌಡ ಕಾಪಿಲ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ. ಐಶ್ವರ್ಯ ಅವರ ಮೃತದೇಹ ಸುಳ್ಯಕ್ಕೆ ಬರಲಿದ್ದು, ಕನಕಮಜಲಿನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ತಿಳಿದುಬಂದಿದೆ.
ಮಂಗಳೂರು : ಹಿಂದುಳಿದ ವರ್ಗದ ಹಾಸ್ಟೆಲ್‌ನಲ್ಲಿ ರಾತ್ರಿ ಕಳೆದ IAS ಅಧಿಕಾರಿ..!
ಮಂಗಳೂರು : ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ರಾತ್ರಿ ಕಳೆದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾ. ಪಿ.ಮಣಿವಣ್ಣನ್ ಐಎಎಸ್ ಇವರು ಕದ್ರಿ ಪಾಕ್೯ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಜೊತೆಗೆ ಮಲಗಿ ಅಲ್ಲಿದ್ದವರನ್ನು ಆಶ್ಚರ್ಯಚಕಿತರನ್ನಾಗಿಸಿ, ಸರಳತೆಯನ್ನು ಮೆರೆದಿದ್ದಾರೆ.ದಕ್ಷಿಣ ಕನ್ನಡ ಭೇಟಿಯಲ್ಲಿದ್ದ ಅವರು ಇಂದು ರಾತ್ರಿ 9.30 ಕ್ಕೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, ಸಕ್ರ್ರ್ಯುಟ್ ಹೌಸ್ ನಲ್ಲಿ ಬುಕಿಂಗ್ ಆಗಿದ್ದ ರೂಮನ್ನು ತ್ಯಜಿಸಿ ನೇರವಾಗಿ ಸಮೀಪದಲ್ಲೇ ಇರುವ ತಮ್ಮ ಅಧೀನದ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಮಲಗಿದ್ದಾರೆ. ಇಂದು ಬೆಳಿಗ್ಗೆ ರೈಲಿನಲ್ಲಿ ಬಂದು ನೆಟ್ಟಣ ನಿಲ್ದಾಣದಲ್ಲಿ ಇಳಿದು ಸುಳ್ಯ, ಸುಬ್ರಹ್ಮಣ್ಯ ಬಳಿಯ ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ನಿಲಯಗಳಿಗೆ ಭೇಟಿ ನೀಡುವವರಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಅದು ಭೇಟಿ ಮೊಟಕುಗೊಳಿಸಿದ್ದರು. ಆದರೆ ಸಂಜೆ ವೇಳೆ ವಿಮಾನದ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ. ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಹಾಗೂ ನ್ಯಾಯಾಲಯದಲ್ಲಿ ನಡೆಯುವ ಕಲಾಪದಲ್ಲಿ ಭಾಗವಹಿಸಲಿದ್ದಾರೆ. ಸರಳ ವ್ಯಕ್ತಿತ್ವದ ಐಎಎಸ್ ಅಧಿಕಾರಿ ಜನಮನ್ನಣೆ ಪಡೆದುಕೊಂಡವರು. ಕೊರೊನಾ ಸಂದರ್ಭ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭ ಕಾರ್ಮಿಕರ ಹಿತಗಳ ಕುರಿತು ಕಠಿಣ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆ ಅಂದಿನ ಸರಕಾರ ತರಾತುರಿಯಲ್ಲಿ ವರ್ಗಾವಣೆ ಕೂಡ ನಡೆಸಿತ್ತು. ಈ ವೇಳೆ ಕಾರ್ಮಿಕರು ಬ್ರಿಂಗ್ ಬ್ಯಾಕ್ ಕ್ಯಾಪ್ಟನ್ ಅನ್ನೋ ಅಭಿಯಾನವನ್ನು ಕೈಗೊಂಡಿದ್ದರು.