ಸೋಮವಾರ, ಮೇ 13, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೆಎಸ್ಆರ್ಟಿಸಿ(ksrtc) ವತಿಯಿಂದ ನವರಾತ್ರಿ ವಿಶೇಷವಾಗಿ ಗೆಜ್ಜೆಗಿರಿಗೆ ಹೊರಡಲಿದೆ ವಿಶೇಷ ಪ್ಯಾಕೇಜ್ ಟೂರ್ ಬಸ್

Twitter
Facebook
LinkedIn
WhatsApp
ಕೆಎಸ್ಆರ್ಟಿಸಿ(ksrtc) ವತಿಯಿಂದ ನವರಾತ್ರಿ ವಿಶೇಷವಾಗಿ ಗೆಜ್ಜೆಗಿರಿಗೆ ಹೊರಡಲಿದೆ ವಿಶೇಷ ಪ್ಯಾಕೇಜ್ ಟೂರ್ ಬಸ್

ಮಂಗಳೂರು: ಕೆಎಸ್ಆರ್ಟಿಸಿ ವತಿಯಿಂದ ನವರಾತ್ರಿ ದೇವಸ್ಥಾನದ ಪ್ಯಾಕೇಜ್ ಟೂರ್ ವತಿಯಿಂದ ವಿಶೇಷ ಬಸ್ ನಾಳೆಯಿಂದ ಮಂಗಳೂರಿಂದ ಆರಂಭಗೊಳ್ಳಲಿದೆ.

ದಕ್ಷಿಣ ಕನ್ನಡದ ವಿವಿಧ ದೇವಸ್ಥಾನಗಳಿಗೆ ತೆರಳರಿರುವ ಈ ಬಸ್ ಕರಾವಳಿಯ ಪ್ರಮುಖ ದೇವಸ್ಥಾನ ಗೆಜ್ಜೆಗಿರಿ ಕ್ಷೇತ್ರಕ್ಕೆ ಈ ಪ್ಯಾಕೇಜ್ ವ್ಯವಸ್ಥೆಯ ಬಸ್ ಸಂಚಾರಿಸಲಿದೆ.

ಮಂಗಳೂರು ಬಿಜೈ ಬಸ್ ನಿಲ್ದಾಣದಿಂದ ಈ ಬಸ್ಸುಗಳು ಹೊರಡಲಿವೆ ಎಂದು ತಿಳಿದುಬಂದಿದೆ.

ಗೆಜ್ಜೆ ಗಿರಿ ಅಲ್ಲದೆ ವಿಟ್ಲ ಪಂಚಲಿಂಗೇಶ್ವರ, ಪುತ್ತೂರು ಮಹಾಲಿಂಗೇಶ್ವರ, ಹನುಮಗಿರಿ, ಉಮಾಮಹೇಶ್ವರಿ, ಮೃತ್ಯುಂಜೇಶ್ವರ ದೇವಸ್ಥಾನಗಳಿಗೂ ಈ ಬಸ್ಸು ಪ್ಯಾಕೇಜ್ ಬಸ್ ಹೊರಡಲಿದೆ.

ಕಾರ್ಕಳ: ಪರಶುರಾಮ ಪ್ರತಿಮೆ ವಿವಾದ: ಶಾಸಕರು ಸುಳ್ಳು ಹೇಳುವುದು ನಿಲ್ಲಿಸಿ ಜನತೆಯಲ್ಲಿ ಕ್ಷಮೆಯಾಚಿಸಬೇಕು- ಶುಭದ ರಾವ್ ಆಗ್ರಹ

ಕಾರ್ಕಳ, ಅ 19 :ಬೈಲೂರು ಸಮೀಪದ ಉಮಿ ಕಲ್ಲು ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪರಶುರಾಮ ಮೂರ್ತಿ ಮಾಯವಾಗಿದ್ದು ಈ ದೃಶ್ಯ ಡ್ರೋಣ್ ಕ್ಯಾಮರಾ ಮೂಲಕ ಸೆರೆಯಾಗಿದೆ.

ಇನ್ನು ಈ ಹಿಂದೆ ಥೀರ್ಮ್ ಪಾರ್ಕ್‌ನ ಉದ್ಘಾಟನೆಗೂ ಮುನ್ನವೇ ಪರಶುರಾಮ ಮೂರ್ತಿ ಅಸಲಿಯೋ, ನಕಲಿಯೋ ಅನ್ನುವ ಆರೋಪಗಳು ಕೇಳಿ ಬಂದಿತ್ತು. ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎನ್ನಲಾಗಿತ್ತು. ಆ ಬಳಿಕ ಶಾಸಕ ಸುನೀಲ್ ಕುಮಾರ್‍ ವಿರುದ್ಧ ರಾಜಕೀಯ ಪಕ್ಷ ಹಾಗು ವಿವಿಧ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮಾತ್ರವಲ್ಲ ಪ್ರತಿಭಟನೆಗಳೂ ಕೂಡ ನಡೆದಿತ್ತು.

ಇದೀಗ ಮತ್ತೆ ಕಾಂಗ್ರೆಸ್ ನಾಯಕ ಶುಭದ ರಾವ್ ಈ ಪ್ರಕರಣದಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಪರಶುರಾಮನ ಪ್ರತಿಮೆಯ ಒಂದು ಭಾಗ ಸಿಕ್ಕಿದ್ದು ಇದರಿಂದ ಸತ್ಯ ಅನಾವರಣವಾಗಿದೆ. ನಮ್ಮ ಎಂಎಲ್ ಸಿ ಮಂಜುನಾಥ್ ಭಂಡಾರಿಯವರು ಬೆಟ್ಟಕ್ಕೆ ಭೇಟಿ ಕೊಟ್ಟಾಗ ಇಲಾಖೆಯವರು ಬಂದಿದ್ದಾರೆ. ಮೂರ್ತಿಯ ಮೇಲೆ ಇರುವ ಟರ್ಪಾಲ್ ಗಳನ್ನು ತೆಗೆದಿದ್ದೇವೆ. ಅದು ಕಂಚು ಅಲ್ಲ ಫೈಬರ್ ನದ್ದು ಎಂದು ಆರೋಪಿಸಿದ್ದಾರೆ.


ಇದ್ರಲ್ಲಿ ಜನತೆಗೆ ಎಂತಹ ದ್ರೋಹ ಮಾಡಿದ್ದಾರೆ ಅನ್ನುವುದು ಗೊತ್ತಾಗುತ್ತದೆ ಎಂದು ಆರೋಪಿಸಿದ್ದಾರೆ.ಮೂರ್ತಿ ಕಾಲು ಭಾಗದಷ್ಟು ಕಂಚಿನದ್ದು ಆಗಿರಬಹುದು. ಆದ್ರೆ ಬಹುತೇಕ ಉಳಿದ ಎಲ್ಲ ಭಾಗಗಳು ಫೈಬರ್ ನದ್ದು ಆಗಿದೆ. ಇನ್ನೂ ಏನಾದ್ರೂ ಇವರಿಗೆ ಸಮರ್ಥನೆ ಮಾಡುವುದಕ್ಕೆ ಇದ್ದರೆ ಇನ್ನೂ ಕೂಡ ಸಮರ್ಥನೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

ಜೊತೆಗೆ ಇಲ್ಲಿಯೇ ಪರುಶುರಾಮನ ಉಬ್ಬು ಶಿಲ್ಪಾಕೃತಿಯನ್ನು ನಿರ್ಮಾಣ ಮಾಡಲಾಗಿದೆ.ಆ ಪರಶುರಾಮನ ಉಬ್ಬು ಶಿಲ್ಪಾಕೃತಿಯ ಕಾಲಿನ ಕೆಳಗೆ ತುಳುನಾಡಿನ ದೈವಗಳ ಉಬ್ಬು ಶಿಲ್ಪಾಕೃತಿಯನ್ನು ನಿರ್ಮಾಣ ಮಾಡಿ ತುಳುನಾಡಿನ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದು ದೈವಗಳೇ ಸುನೀಲ್ ಕುಮಾರ್‍ ಅವರ ವರ್ತನೆಗೆ ಉತ್ತರ ಕೊಟ್ಟಿದೆ.ಎಲ್ಲ ತಪ್ಪುಗಳು ಬಹಿರಂಗವಾಗಿದೆ. ಇನ್ನಾದ್ರೂ ಶಾಸಕರು ಸುಳ್ಳು ಹೇಳುವುದು ನಿಲ್ಲಿಸಿ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು