ಮಂಗಳವಾರ, ಮೇ 21, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಕಡಬದಲ್ಲಿ ರೈತರಿಂದ ಪ್ರತಿಭಟನೆ!

Twitter
Facebook
LinkedIn
WhatsApp
ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಕಡಬದಲ್ಲಿ ರೈತರಿಂದ ಪ್ರತಿಭಟನೆ!

ಕಡಬ: ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ನಡೆಯುವ ಆನೆ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕು ಆನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರೂ ಸೇರಿದಂತೆ ಜಿಲ್ಲೆಯೆ ಶಾಸಕರು ವಿಧಾನ ಸಭೆಯಲ್ಲಿ ಈಗಾಗಲೇ ಅಗ್ರಹ ಹಾಗೂ ಹಕ್ಕೊತ್ತಾಯವನ್ನು ಮಂಡಿಸಿದ್ದಾರೆ. ಅರಣ್ಯ ಸಚಿವರಿಗೂ ಮನವಿ ಮಾಡಲಾಗಿದ್ದು  ಸರಕಾರದಿಂದ ಸೂಕ್ತ ಭರವಸೆ ಕೂಡಾ ದೊರೆತಿದೆ ಎಂದು ವಿಧಾನ ಸಭಾ ಸದಸ್ಯ ಹರೀಶ್ ಕುಮಾರ್ ಭರವಸೆ ನೀಡಿದರು.

ಅವರು ಗುರುವಾರ ಕಡಬದಲ್ಲಿ ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿ ಐತ್ತೂರು-ಮರ್ಧಾಳ ಜಾಗೃತ ರೈತ ಕುಟುಂಬಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವುದು, ರೈತರ ಹಿತ ಕಾತಯುವುದು ಸರಕಾರದ ಕರ್ತವ್ಯ. ಅದು ಯಾವುದೇ ಸರಕಾರ ಬಂದರೂ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹಾಗಿಲ್ಲ. ಸರಕಾರ ಈಗಾಗಲೇ ಮೂಡಿಗೆರೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಬೇಲಿ ನಿರ್ಮಾಣ ಮಾಡಿ ಆನೆಗಳ ಹಾವಳಿಯನ್ನು ತಗ್ಗಿಸಿದೆ, ಅದೇ ತಂತ್ರಜ್ಞಾನ ಅಥವಾ ರೈಲ್ವೇ ಕಂಬಿ ಬೇಲಿ ನಿರ್ಮಾಣ ಮಾಡಿ ಆನೆಗಳಿಗೆ ಕಡಿವಾಣ ಹಾಕಬಹುದಾ ಎಂದು ತಜ್ಞರಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದರು.

ಐತ್ತೂರು ಮರ್ಧಾಳ ಜಾಗೃತ ರೈತ ಕುಟುಂಬಗಳ ಒಕ್ಕೂಟದ ಅಧ್ಯಕ್ಷ ಅತ್ಯಡ್ಕ ನಾರಾಯಣ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಪಿ,ವರ್ಗೀಸ್ , ಕೃಷ್ಣ ಶೆಟ್ಟಿ ಕಡಬ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ|ಅನಿಲ್ ಈಶೋ ಮತ್ತಿತರರು ಮಾತನಾಡಿ ಕಡಬ ತಾಲೂಕಿನ ಬಿಳಿನೆಲೆ, ಕೈಕಂಬ , ಕೊಂಬಾರು, ಸಿರಿಬಾಗಿಲು, ರೆಂಜಲಾಡಿ, ನೂಜಿಬಾಳ್ತಿಲ, ಕೌಕ್ರಾಡಿ, ಇಚ್ಲಂಪಾಡಿ, ಸುಬ್ರಹ್ಮಣ್ಯ, ಐನೆಕಿದು ಮುಂತಾದ ಗ್ರಾಮದ ಜನ ಆನೆ ಹಾವಳಿಯಿಂದಾಗಿ ಭೀತಿಯಿಂದ ಬದುಕುವಂತಾಗಿದೆ ಎಂದರು.

ಸರಕಾರ ಕೂಡಲೇ ಎಚ್ಚೆತ್ತು, ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು, ರೈಲ್ವೇ ಕಂಬಿಯ ಬೇಲಿ ನಿರ್ಮಾಣ ಮಾಡಬೇಕು, ವೈಜ್ಞಾನಿಕವಾಗಿ ಅಗಲು ನಿರ್ಮಾಣ ಮಾಡಬೇಕು ಆನೆ ದಾಳಿಯಿಂದ ಕೃಷಿ ಹಾನಿ ಹಾಗೂ ಪ್ರಾಣ ಹಾನಿಗೆ ಸೂಕ್ತ ಪರಿಹಾರ ದೊರೆಯಬೆಕು ಎಂದು ಅಗ್ರಹಿಸಿದರು.

ಕಡಬ ಕೃಷಿಪತ್ತಿನ ಸಹಕಾರಿ ಸಂಘದ ಕಛೇರಿಯ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಡಬ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಆಡಳಿತ ಸೌಧದ ಎದರು ಸಮಾಪನಗೊಂಡರು. ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಮನವಿ ಸ್ವೀಕರಿಸಿದರು. ಒಕ್ಕೂಟದ ಪದಾಧಿಕಾರಿ ತಮ್ಮಯ್ಯ ಗೌಡ ಮನವಿ ಓದಿದರು. ಉಮೇಶ್ ಶೆಟ್ಟಿ ಸಾಯಿರಾಮ್ ಕಾರ್ಯಕ್ರಮ ನಿರೂಪಿಸಿದರು. ಕಾಂಗ್ರೆಸ್,ಬಿಜೆಪಿ,ಜೆಡಿಯಸ್ ಮುಖಂಡರು,ಕಾರ್ಯಕರ್ತರು,ರೈತರು  ಪಾಲ್ಗೊಂಡಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು