ಬುಧವಾರ, ಮೇ 8, 2024
ಲಂಚ ಸ್ವೀಕಾರ; ರೆಂಡ್ ಆ್ಯಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PDO-ಐದನೇ ಬಾರಿ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾಡಿಮಿರ್ ಪುಟಿನ್-ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಇನ್ನಿಲ್ಲ-ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ; ಇಲಾಖೆಯಿಂದ ಯಾವುದೇ ವೇತನ ಬಾಕಿ ಇಲ್ಲ - ದಿನೇಶ್‌ ಗುಂಡೂರಾವ್‌-ಡಿಕೆಶಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲಿ : ಎಚ್‌ಡಿ ಕುಮಾರಸ್ವಾಮಿ-ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಿಕ್ಕಾಪಟ್ಟೆ ಟ್ರೋಲ್!!-ಹರಿಯಾಣ ಸರ್ಕಾರ ಬೆಂಬಲಿಸುತ್ತಿದ್ದ ಮೂವರು ಶಾಸಕರು ಕಾಂಗ್ರೆಸ್ ಸೇರ್ಪಡೆ..!-ಟಿ-20 ವಿಶ್ವಕಪ್ ಗೆ ಪ್ರಕಟಗೊಂಡ ಎಲ್ಲಾ ತಂಡದಲ್ಲಿ ಯಾರೆಲ್ಲಾ ಆಟಗಾರರಿದ್ದಾರೆ? ಬಲಿಷ್ಠ ತಂಡ ಯಾವುದು?-ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಬರೋಕೆ ರೆಡಿಯಾದ್ರಾ ಡಾಕ್ಟರ್ ಬ್ರೊ...!

Twitter
Facebook
LinkedIn
WhatsApp
ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಬರೋಕೆ ರೆಡಿಯಾದ್ರಾ ಡಾಕ್ಟರ್ ಬ್ರೊ...!

‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭಕ್ಕೆ ಬಾಕಿ ಉಳಿದುಕೊಂಡಿರೋದು ಕೇವಲ ಒಂದು ದಿನ ಮಾತ್ರ. ದೊಡ್ಮನೆಗೆ ಯಾರೆಲ್ಲ ಪ್ರವೇಶ ಪಡೆಯುತ್ತಾರೆ ಎನ್ನುವ ಬಗ್ಗೆ ವೀಕ್ಷಕರಿಗೆ ಸಾಕಷ್ಟು ಕುತೂಹಲ ಮೂಡಿದೆ. ಸಂಭಾವ್ಯರ ಪಟ್ಟಿ ಕೂಡ ಹರಿದಾಡುತ್ತಿದೆ. ಈ ಮೊದಲು ಗಗನ್ ಶ್ರೀನಿವಾಸ್ (Gagan Srinivas) ಅಲಿಯಾಸ್ ಡಾಕ್ಟರ್ ಬ್ರೋ (Dr Bro) ಕೂಡ ಬಿಗ್ ಬಾಸ್​ಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಡಾಕ್ಟರ್ ಬ್ರೋ ಅವರು ಬೇರೆಯದೇ ಅಪ್​ಡೇಟ್ ನೀಡಿದ್ದಾರೆ.

ಮೊದಲು ಬಿಗ್ ಬಾಸ್​ಗೆ ಕಲಾವಿದರನ್ನು ಮಾತ್ರ ಕರೆತರಲಾಗುತ್ತಿತ್ತು. ಈಗ ಸೋಶಿಯಲ್ ಮೀಡಿಯಾದ ಬಳಕೆ ಹೆಚ್ಚಿದೆ. ಯೂಟ್ಯೂಬರ್​ಗಳ ಪರಿಚಯವೂ ಅನೇಕರಿಗೆ ಇರುತ್ತದೆ. ಇಂಥವರಿಗೂ ಬಿಗ್ ಬಾಸ್​ ಕಡೆಯಿಂದ ಅವಕಾಶ ನೀಡಲಾಗುತ್ತಿದೆ. ಹಲವು ದೇಶಗಳನ್ನು ಸುತ್ತಿ ಫೇಮಸ್ ಆದವರು ಡಾಕ್ಟರ್ ಬ್ರೋ. ಅವರು ಯೂಟ್ಯೂಬ್ ಕಂಟೆಂಟ್​ಗಳು ಲಕ್ಷಾಂತರ ಬಾರಿ, ಕೋಟ್ಯಾಂತರ ಬಾರಿ ವೀಕ್ಷಣೆ ಕಾಣುತ್ತವೆ. ಈ ಕಾರಣದಿಂದ ಅವರು ಕೂಡ ಬಿಗ್ ಬಾಸ್​ಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಸ್ಟಾರ್ ಸ್ಪೋರ್ಟ್ಸ್ ಕನ್ನಡಕ್ಕೆ ಹೋಗುತ್ತಿದ್ದಾರೆ!

ಬಿಗ್ ಬಾಸ್ ಆರಂಭಕ್ಕೂ ಮೊದಲೇ ವಿಶ್ವಕಪ್ ಆರಂಭ ಆಗಿದೆ. ಭಾನುವಾರ ಭಾರತ vs ಆಸ್ಟ್ರೇಲಿಯಾ ಮ್ಯಾಚ್ ನಡೆಯಲಿದೆ. ವಿಶ್ವಕಪ್​ನ ಮೊದಲ ಭಾರತದ ಮ್ಯಾಚ್ ಇದು. ಚೆನ್ನೈನಲ್ಲಿ ಈ ಪಂದ್ಯ ನಡೆಯುತ್ತಿದೆ. ಸ್ಟಾರ್​ ಸ್ಪೋರ್ಟ್ಸ್ ಈ ಮ್ಯಾಚ್​ನ ಪ್ರಸಾರದ ಹಕ್ಕನ್ನು ಹೊಂದಿದೆ. ಕನ್ನಡದಲ್ಲೂ ಕಾಮೆಂಟರಿ ಪ್ರಸಾರ ಕಾಣಲಿದೆ.

‘ಸರ್ಪ್ರೈಸ್ ಹೇಗಿತ್ತು ಫ್ರೆಂಡ್ಸ್. ಡಾಕ್ಟರ್ ಬ್ರೋ ಇನ್ಮೇಲೆ ಎಲ್ಲಾ ಅಪ್ಡೇಟ್ಸ್ ಕೊಡ್ತಾರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನೋಡೋದು ಮರಿಬೇಡಿ’ ಎಂದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕ್ಯಾಪ್ಶನ್ ನೀಡಿದೆ.

`ನಾನು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​​ಗೆ ಬಂದಿದ್ದೇನೆ. ಹೊಸ ಮಿಷನ್​ಗೆ ಹೋಗ್ತಾ ಇದೀನಿ’ ಎಂದರು ಡಾಕ್ಟರ್ ಬ್ರೋ. ಆ ಬಳಿಕ ಅವರು ಲ್ಯಾಂಡ್ ಆಗಿದ್ದು ಚೆನ್ನೈಗೆ. ಸ್ಟಾರ್​ ಸ್ಪೋರ್ಟ್ಸ್ ಕನ್ನಡದಲ್ಲಿ ಕುಳಿತು ಡಾಕ್ಟರ್ ಬ್ರೋ ಅಪ್​ಡೇಟ್ ನೀಡಲಿದ್ದಾರೆ. ‘ನಾನು ಗಂಟುಮೂಟೆ ಹೊತ್ತುಕೊಂಡು ಎಲ್ಲೆಲ್ಲಿ ಮ್ಯಾಚ್ ನಡೆಯುತ್ತದೆಯೋ ಅಲ್ಲಿಗೆ ಹೋಗ್ತೀನಿ’ ಎಂದಿದ್ದಾರೆ ಅವರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ