ಖಾಸಗಿ ಬಸ್‌ನಿಂದ ರಸ್ತೆಗೆ ಬಿದ್ದ ಕಂಡಕ್ಟರ್, ಆಸ್ಪತ್ರೆಗೆ ದಾಖಲು

ಬ್ರಹ್ಮಾವರ: ಚಲಿಸುತ್ತಿದ್ದ ಬಸ್‌ನಿಂದ ರಸ್ತೆಗೆ ಬಿದ್ದು ಕಂಡಕ್ಟರ್ ತೀವ್ರ ಗಾಯಗೊಂಡ ಘಟನೆ ಉಪ್ಪೂರು ಬಳಿ ನಡೆದಿದೆ.
ಉಡುಪಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನ್ನು ಚಾಲಕ ಒಮ್ಮೆಲೆ ಬಲ ಭಾಗದಿಂದ ಎಡಕ್ಕೆ ತಿರುಗಿಸಿದ ಪರಿಣಾಮ ಹಿಂಬದಿಯ ಪ್ರಯಾಣಿಕರ ಸೀಟಿನ ಬಳಿ ಟಿಕೆಟ್ ನೀಡುತ್ತಿದ್ದ ಕಂಡಕ್ಟರ್ ನಾಗರಾಜ ಅವರು ನಿಯಂತ್ರಣ ತಪ್ಪಿ ಫುಟ್‌ಬೋರ್ಡ್ ಮೇಲೆ ಬಿದ್ದು ಅಲ್ಲಿಂದ ರಸ್ತೆಗೆ ಬಿದ್ದರು.
ತತ್‌ಕ್ಷಣ ಪ್ರಯಾಣಿಕರು ಕಿರುಚಿಕೊಂಡಾಗ ಚಾಲಕ ಬಸ್‌ನ್ನು ನಿಲ್ಲಿಸಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ ನಾಗರಾಜ ಅವರನ್ನು ಕೂಡಲೇ ಪ್ರಯಾಣಿಕರು ಉಪಚರಿಸಿದರು. ತಲೆಗೆ ತೀವ್ರ ಹಾಗೂ ಇತರೆಡೆ ತರಚಿದ ಗಾಯಗಳಾದ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangaluru: ದರೋಡೆ ಪ್ರಕರಣ -ತಲೆಮೆರೆಸಿಕೊಂಡಿದ್ದ ಆರೋಪಿ ಬಂಧನ..!
ಮಂಗಳೂರು: ದರೋಡೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರಿನ ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನಗರದ ಪಣಂಬೂರು ಸಮೀಪದ ಕಸಬಾ ಬೇಂಗ್ರೆಯ ನಿವಾಸಿ ಮಹಮ್ಮದ್ ಆಸಿಫ್ (27) ಎಂದು ಗುರುತಿಸಲಾಗಿದೆ.
ಆರೋಪಿ ಆಸಿಫ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡಿದ್ದು, ಕದ್ರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ವಿರುದ್ಧ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆ ಉಳ್ಳಾಲ, ಪೊಲೀಸ್ ಠಾಣೆ ಉಪ್ಪಿನಂಗಡಿ, ಪಣಂಬೂರು, ಚಿಕ್ಕಮಂಗಳೂರು ನಗರ ಹಾಗೂ ಇತರ ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.