ಮಂಗಳವಾರ, ಮೇ 21, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

7 ಓವರ್, 7 ಮೇಡನ್, 7 ವಿಕೆಟ್​ ಐಪಿಎಲ್​ ಆರಂಭಕ್ಕೆ ಮುನ್ನ ಸುನಿಲ್ ನರೈನ್ ಸ್ಪಿನ್​ ಮೋಡಿ

Twitter
Facebook
LinkedIn
WhatsApp
7 ಓವರ್, 7 ಮೇಡನ್, 7 ವಿಕೆಟ್​ ಐಪಿಎಲ್​ ಆರಂಭಕ್ಕೆ ಮುನ್ನ ಸುನಿಲ್ ನರೈನ್ ಸ್ಪಿನ್​ ಮೋಡಿ

ಐಪಿಎಲ್​ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸುನಿಲ್ ನರೈನ್ ಅವರ ಈ ಸ್ಪಿನ್​ ಮೋಡಿಯು ಇದೀಗ ಎಲ್ಲರು ನಿಬ್ಬೆರಗಾಗುವಂತೆ ಮಾಡಿದೆ. 7 ಓವರ್​ನಲ್ಲಿ ಒಂದೇ ಒಂದು ರನ್​ ನೀಡದೇ 7 ವಿಕೆಟ್ ಪಡೆಯಲು ಸಾಧ್ಯವೇ? ಕ್ರಿಕೆಟ್​ ಅಂಗಳದಲ್ಲಿ ಅಸಾಧ್ಯ ಎನಿಸುವ ಸಾಧನೆಯನ್ನು ಮಾಡಿ ತೋರಿಸಿದ್ದಾರೆ ವೆಸ್ಟ್ ಇಂಡೀಸ್​ನ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್.

ವೆಸ್ಟ್ ಇಂಡೀಸ್​ನ ಪೋರ್ಟ್-ಆಫ್-ಸ್ಪೇನ್‌ನಲ್ಲಿ ಟಿ ಅ್ಯಂಡ್ ಟಿ ಬೋರ್ಡ್​ ಪ್ರೀಮಿಯರ್‌ಶಿಪ್ ಡಿವಿಷನ್ I ಟೂರ್ನಿ ನಡೆಯುತ್ತಿದ್ದು, ಈ ಟೂರ್ನಿಯಲ್ಲಿ ಕ್ವೀನ್ಸ್ ಪಾರ್ಕ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದ ಸುನಿಲ್ ನರೈನ್ ಏಳು ಮೇಡನ್ ಓವರ್‌ಗಳನ್ನು ಎಸೆದು 7 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಲಾರ್ಕ್ ರೋಡ್ ಯುನೈಟೆಡ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ನಿರೀಕ್ಷೆಯಲ್ಲಿತ್ತು. ಆದರೆ ಸುನಿಲ್ ನರೈನ್ ದಾಳಿಗಿಳಿಯುತ್ತಿದ್ದಂತೆ ತಂಡದ ಲೆಕ್ಕಾಚಾರಗಳು ತಲೆಕೆಳಗಾದವು. 

ಮೊದಲ ಓವರ್​ನಲ್ಲೇ ಜಾನ್ ರಸ್ ಜಗ್ಗೇಸರ್ ಮತ್ತು ಸಿಯಾನ್ ಹ್ಯಾಕೆಟ್ ವಿಕೆಟ್ ಪಡೆದ ನರೈನ್, ಆ ಬಳಿಕ ಡಿಜೋರ್ನ್ ಚಾರ್ಲ್ಸ್, ನಿಕೋಲಸ್ ಸೂಕ್‌ಡಿಯೋಸಿಂಗ್ ಮತ್ತು ಜೋಶುವಾ ಪರ್ಸಾಡ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಇದಾದ ಬಳಿಕ ಮತ್ತೆರಡು ವಿಕೆಟ್ ಉರುಳಿಸುವ ಮೂಲಕ 7 ಮೇಡನ್ ಓವರ್​ಗಳಲ್ಲಿ 7 ವಿಕೆಟ್​ಗಳ ಸಾಧನೆ ಮಾಡಿದರು. 

ಸುನಿಲ್ ನರೈನ್ ಅವರ ಸ್ಪಿನ್ ಮೋಡಿಗೆ ತತ್ತರಿಸಿದ ಕ್ಲಾರ್ಕ್ ರೋಡ್ ಯುನೈಟೆಡ್ ತಂಡವು ಕೇವಲ 24 ಓವರ್‌ಗಳಲ್ಲಿ 76 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಈ ಏಳು ವಿಕೆಟ್​ಗಳ ಸಾಧನೆಯೊಂದಿಗೆ ಈ ಟೂರ್ನಿಯಲ್ಲಿ ಸತತ 4ನೇ ಬಾರಿಗೆ 5 ವಿಕೆಟ್​ಗಳನ್ನು ಪಡೆದ ವಿಶೇಷ ದಾಖಲೆಯನ್ನು ಕೂಡ ಸುನಿಲ್ ನರೈನ್ ನಿರ್ಮಿಸಿದ್ದಾರೆ.

ಐಪಿಎಲ್​ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸುನಿಲ್ ನರೈನ್ ಅವರ ಈ ಸ್ಪಿನ್​ ಮೋಡಿಯು ಇದೀಗ ಎಲ್ಲರು ನಿಬ್ಬೆರಗಾಗುವಂತೆ ಮಾಡಿದೆ. ಏಕೆಂದರೆ ಈ ಬಾರಿ ಕೂಡ ನರೈನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದು, ಭಾರತೀಯ ಸ್ಪಿನ್ ಸ್ನೇಹಿ ಪಿಚ್​ಗಳಲ್ಲಿ ವಿಂಡೀಸ್ ಸ್ಪಿನ್ ಮಾಂತ್ರಿಕ ಮೋಡಿ ಮಾಡುವ ನಿರೀಕ್ಷೆಯಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ