ಮಂಗಳವಾರ, ಮೇ 21, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೋದಿ ಫೋಟೋ ಸ್ಟೇಟಸ್ ಹಾಕಿದ್ದ ಯವಕನಿಗೆ ಹಲ್ಲೆ – ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್‌

Twitter
Facebook
LinkedIn
WhatsApp
pic 12

ಗದಗ: ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಸ್ಟೇಟಸ್ ಇಟ್ಟು, ಫೇಸ್‌ಬುಕ್‌ನಲ್ಲಿ ಲೈಕ್,‌ ಕಾಮೆಂಟ್ ಮಾಡಿದ್ದಕ್ಕೆ ಆತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಬಿಂಕದಕಟ್ಟಿ ಗ್ರಾಮದ ರಾಘವೇಂದ್ರ ಪೂಜಾರ ಎಂಬಾತನ ಮೇಲೆ 8 ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಗ್ರಾಮದ ಮುಖ್ಯ ಬಜಾರ್ ರಸ್ತೆ ರಾಘವೇಂದ್ರನೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾರೆ. ನಾನು ಸ್ಟೇಟಸ್ ಹಾಕಿಲ್ಲ ಎಂದು ಹೇಳಿದರೂ, ಕೇಳದೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದರೂ ಮನೆಗೆ ನುಗ್ಗಿ ಚಾಕು, ಕಲ್ಲುಗಳ ಮೂಲಕ ಹಲ್ಲೆಗೆ ಯತ್ನಿಸಿದರು. ಅಲ್ಲದೇ ಹೀಗೆ ಮುಂದುವರಿದರೇ ಬೇರೆ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಬೆದರಿಕೆ ಹಾಕಿದ್ದಾರೆ ಎಂದು ರಾಘವೇಂದ್ರ ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ರಾಘವೇಂದ್ರನ ಜೊತೆಗೆ ಬಿಜೆಪಿ ಮುಖಂಡ ರಾಜು ಕುರುಡಗಿ ಸೇರಿದಂತೆ ಅನೇಕರು ಪೊಲೀಸ್ ಠಾಣೆಯ ಎದುರು ಜಮಾವಣೆಗೊಂಡರು. ಘಟನೆ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರಾದ ಮಲ್ಲರಡ್ಡಿ ಅಗಸಿನಕೊಪ್ಪ, ಶ್ರೀನಿವಾಸ ಅಗಸಿನಕೊಪ್ಪ ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ