ಶುಕ್ರವಾರ, ಮೇ 10, 2024
ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಕ್ಯಾಮೆರಾಗಳ ಮುಂದೆನೇ ನಾಯಕ ಕೆ ಎಲ್ ರಾಹುಲ್ ಗೆ ತರಾಟೆಗೆ ತೆಗೆದುಕೊಂಡ LSG ಮಾಲೀಕ ; ಅಭಿಮಾನಿಗಳು ಆಕ್ರೋಶ..!-ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ-SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?-Gold Price: ದುಬಾರಿಯಾಗಿದ್ದ ಚಿನ್ನದ ದರ ಇಂದು ಹೇಗಿದೆ.?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಧವೆಯರಿಗೆ ಪೆನ್ಷನ್, ರೇಷನ್ ಕಾರ್ಡ್ ತಂದಿದ್ದು ಇಂದಿರಾಗಾಂಧಿ ನೇತೃತ್ವದ ಸರ್ಕಾರ: ಉಮಾಶ್ರೀ

Twitter
Facebook
LinkedIn
WhatsApp
WhatsApp Image 2023 03 20 at 9.32.36 AM 1

ಮಂಡ್ಯ: ವಿಧವೆಯರಿಗೆ ಪೆನ್ಷನ್ ಮಾಡಿದ್ದು ಇಂದಿರಾಗಾಂಧಿ, ರೇಷನ್ ಕಾರ್ಡ್ (Ration Card) ತಂದಿದ್ದು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government). ರೇಷನ್ ಕಾರ್ಡ್ ಕೊಟ್ಟಿದ್ದು ಬಿಜೆಪಿ, ಜೆಡಿಎಸ್ ನಿಂದ ಅಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ (Umashree) ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಉಳುವವನೇ ಭೂಮಿಯ ಒಡೆಯ ಎಂದ್ರು. ಅವರು ಇಂದು ನಮ್ಮ ಜೊತೆ ಇಲ್ಲ. ಬಡವರನ್ನ ಎಬ್ಬಿಸಿದ ಆ ತಾಯಿಯನ್ನ ನಾವು ನೆನೆಯಬೇಕು. ಮಹಾತ್ಮಗಾಂಧಿಗೆ ಗುಂಡೇಟು ಹೊಡೆದ ಜನರೇ ಇಂದಿರಾಗಾಂಧಿ ಕೊಂದರು. ಆ ತಾಯಿಗೆ 18 ಗುಂಡುಗಳನ್ನ ಹೊಡೆದ್ರು. ಇಡೀ ದೇಶದ ಜನರಿಂದ ಕಣ್ಣೀರ ಕೋಡಿ ಹರಿಯಿತು. ಅಂತಹ ನಾಯಕಿಯನ್ನ ನಾವು ಇಂದು ನೆನಪಿಸಿಕೊಳ್ಳಬೇಕು ಎಂದರು. 

ಕಾಂಗ್ರೆಸ್ ಪಕ್ಷಕ್ಕೆ ಮತಹಾಕಬೇಕು. ಕೋಮುವಾದ ಸೃಷ್ಟಿಮಾಡುವ ಬಿಜೆಪಿ ಇಡೀ ದೇಶವನ್ನ ಛಿದ್ರ ಮಾಡಿಬಿಟ್ಟರು. ಬಿಜೆಪಿ ಪಕ್ಷದವರು ಜಾತಿ-ಜಾತಿ, ಧರ್ಮ ಧರ್ಮಗಳ ನಡುವೆ ನಂಜುಕಾರುವ ಆಗೆ ಮಾಡಿದ್ದಾರೆ. ಬಿಜೆಪಿ ಇರುವವರೆಗೂ ಬಡವರು, ರೈತರು ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರವನ್ನ ಹಿಟ್ಲರ್ ಆಡಳಿತಕ್ಕೆ ಉಮಾಶ್ರೀ ಹೋಲಿಸಿದರು.

ಧರ್ಮ, ಸುಳ್ಳುಗಳ ಮೇಲೆ ಬಿಜೆಪಿ ಆಡಳಿತ ನಡೆಸುತ್ತಿದೆ. ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಕಥೆ. ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ಕಥೆ ಕಟ್ತಾರೆ. ಇನ್ನೊಂದು ಕಡೆ ಹಿಜಬ್ ತರ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಬಿಜೆಪಿಗೆ ಉರಿ. ಆದ್ದರಿಂದ ಜನರ ಮನಸ್ಸನಲ್ಲಿ ಕಥೆ ಕಟ್ಟಿ ಬೇರೆ ಕಡೆ ತಿರುಗಿಸುತ್ತಾರೆ ಎಂದು ಹೇಳಿದರು.

ಗೌಡರು ಬೇಡ, ಲಿಂಗಾಯರು ಬೇಕಾಗಿಲ್ಲ. ಎಲ್ಲ ಜಾತಿಗಳನ್ನ ಛಿದ್ರಮಾಡಬೇಕು, ಮತವಿಭಜನೆ ಮಾಡಬೇಕೆಂಬುದೆ ಬಿಜೆಪಿ (BJP) ತಂತ್ರ. ಬಂಡವಾಳ ಶಾಹಿಗಳನ್ನ ಮೇಲೆ ತರಲು ಈ ರೀತಿ ವಿಷಯ ತರುತ್ತಿದ್ದಾರೆ. ತೇಜಸ್ವಿ ಸೂರ್ಯ ರೈತರ ಸಾಲ ಮಾಡಿದ್ರೆ ದೇಶಕ್ಕೆ ಕಂಟಕ ಅಂತಾರೆ. ಅಯ್ಯೋ ಪುಣ್ಯಾತ್ಮ ನಿನಗೆ ಏನು ಗೊತ್ತಪ್ಪ ಎಂದು ಉಮಾಶ್ರೀ ಪ್ರಶ್ನಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ