ಬುಧವಾರ, ಮೇ 8, 2024
ಟಿ-20 ವಿಶ್ವಕಪ್ ಗೆ ಪ್ರಕಟಗೊಂಡ ಎಲ್ಲಾ ತಂಡದಲ್ಲಿ ಯಾರೆಲ್ಲಾ ಆಟಗಾರರಿದ್ದಾರೆ? ಬಲಿಷ್ಠ ತಂಡ ಯಾವುದು?-ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!-ಮಂಜೇಶ್ವರ: ಕಾರು ಮತ್ತು ಅಂಬುಲೆನ್ಸ್ ನಡುವೆ ಭೀಕರ ಅಪಘಾತ; ಮೂವರು ಸಾವು.!-ಬಂಟ್ವಾಳ: ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!-Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ.!-ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ-ಆಘಾತಕಾರಿ ಘಟನೆ; ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಗ್ಗಿ ಹೇಳಲಿಲ್ಲ ಎಂದು ವಿದ್ಯಾರ್ಥಿಯ ಕೈಯನ್ನು ಡ್ರಿಲ್​ ಮಷಿನ್​ನಿಂದ ಕೊರೆದ ಶಿಕ್ಷಕ!

Twitter
Facebook
LinkedIn
WhatsApp
ಮಗ್ಗಿ ಹೇಳಲಿಲ್ಲ ಎಂದು ವಿದ್ಯಾರ್ಥಿಯ ಕೈಯನ್ನು ಡ್ರಿಲ್​ ಮಷಿನ್​ನಿಂದ ಕೊರೆದ ಶಿಕ್ಷಕ!

ಕಾನ್ಪುರ : ಐದನೇ ತರಗತಿಯ ವಿದ್ಯಾರ್ಥಿಯೊಬ್ಬ ಎರಡರ ಮಗ್ಗಿ ತಪ್ಪಾಗಿ ಹೇಳಿದ್ದಾನೆ ಎಂದು ಕೋಪಗೊಂಡು ವಿದ್ಯಾರ್ಥಿಯ ಕೈಯನ್ನು ಡ್ರಿಲ್ ಮಷಿನ್​ನಿಂದ ಕೊರೆದು ಗಾಯಗೊಳಿಸಿದ ಘಟನೆ ಕಾನ್ಪುರದಲ್ಲಿರುವ ಶಾಲೆಯಲ್ಲಿ ಶನಿವಾರ ನಡೆದಿದೆ.

ಕಾನ್ಪುರ ಜಿಲ್ಲೆಯ ಪ್ರೇಮ್‌ನಗರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಗ್ರಂಥಾಲಯದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿತ್ತು ದುರಸ್ಥಿ ಕಾರ್ಯವನ್ನು ನೋಡಲು ಶಿಕ್ಷಕರು ಹೋಗಿದ್ದರು ಈ ವೇಳೆ ಐದನೇ ತರಗತಿ ವಿದ್ಯಾರ್ಥಿ ಅಲ್ಲಿ ಹಾದು ಹೋಗಿದ್ದಾನೆ ಇದನ್ನು ಕಂಡ ಶಿಕ್ಷಕ ಹತ್ತಿರ ಕರೆದು ವಿದ್ಯಾರ್ಥಿಯಲ್ಲಿ ಎರಡರ ಮಗ್ಗಿ ಹೇಳುವಂತೆ ಹೇಳಿದ್ದಾರೆ ಆದರೆ ವಿದ್ಯಾರ್ಥಿಗೆ ಸರಿಯಾಗಿ ಮಗ್ಗಿ ಹೇಳಲು ಬರಲಿಲ್ಲ, ಇದರಿಂದ ಕೋಪಗೊಂಡ ಶಿಕ್ಷಕ ಅಲ್ಲೇ ಇದ್ದ ಡ್ರಿಲ್ ಮಷಿನ್​ ಹಿಡಿದು ಐದನೇ ತರಗತಿಯಲ್ಲಿ ಇದ್ದೀಯಾ ಎರಡರ ಮಗ್ಗಿ ಬರುವುದಿಲ್ಲವೇ ಎಂದು ವಿದ್ಯಾರ್ಥಿಯ ಎಡಕೈಯನ್ನು ಕೊರೆದಿದ್ದಾರೆ ಈ ವೇಳೆ ವಿದ್ಯಾರ್ಥಿ ಬೊಬ್ಬೆ ಹಾಕಿದ್ದು ಇದನ್ನು ಕೇಳಿದ್ದ ಇನ್ನೊಬ್ಬ ವಿದ್ಯಾರ್ಥಿ ಅಲ್ಲಿಗೆ ಬಂದಾಗ ಶಿಕ್ಷಕ ವಿದ್ಯಾರ್ಥಿಯ ಕೈಗೆ ಡ್ರಿಲ್ ಮಷಿನ್​ನಿಂದ ಕೊರೆದಿರುವುದು ಬೆಳಕಿಗೆ ಬಂದಿದೆ ಆ ಕೂಡಲೇ ಎಚ್ಚೆತ್ತ ವಿದ್ಯಾರ್ಥಿ ಡ್ರಿಲ್ ಮಷಿನ್​ ನ ಸ್ವಿಚ್ ಆಫ್ ಮಾಡಿದ್ದಾನೆ.

ಗಾಯಗೊಂಡ ವಿದ್ಯಾರ್ಥಿ ಮನೆಯವರಿಗೆ ವಿಷಯ ತಿಳಿಸಿದ್ದಾನೆ ಕೂಡಲೇ ಪೋಷಕರು ಶಾಲೆಗೆ ಬಂದು ಶಿಕ್ಷಕರ ವಿರುದ್ಧ ಕಿಡಿಕಾರಿದ್ದಾರೆ ಬಳಿಕ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಳಿಕ ಶಿಕ್ಷಣಾಧಿಕಾರಿಗಳಿಗೂ ದೂರು ನೀಡಲಾಗಿದ್ದು ಘಟನೆಯ ಕುರಿತು ಮಾತನಾಡಿದ ಕಾನ್ಪುರ ನಗರದ ಮೂಲ ಶಿಕ್ಷಾಧಿಕಾರಿ ಸುಜಿತ್ ಕುಮಾರ್ ಸಿಂಗ್, “ಈ ಸಂಪೂರ್ಣ ಘಟನೆಯ ತನಿಖೆಗೆ ಸಮಿತಿಯನ್ನು ರಚಿಸಲಾಗಿದೆ, ಪ್ರೇಮ್ ನಗರ ಮತ್ತು ಶಾಸ್ತ್ರಿನಗರದ ಬ್ಲಾಕ್ ಶಿಕ್ಷಣ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ವರದಿ ಕಳುಹಿಸುತ್ತಾರೆ. ತನಿಖೆಯಲ್ಲಿ ಶಿಕ್ಷಕನ ತಪ್ಪು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ವಿದ್ಯಾರ್ಥಿ ಕೈಗೆ ಸಣ್ಣ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಡಲಾಗಿದೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ