ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಡೆಬಿಟ್ ಕಾರ್ಡ್ ಇಲ್ಲದೆಯೂ ಫೋನ್​ ಪೇ ಆ್ಯಕ್ಟಿವೇಟ್ ಮಾಡಬಹುದು; ಹೇಗೆಂಬ ವಿವರ ಇಲ್ಲಿದೆ

Twitter
Facebook
LinkedIn
WhatsApp
ಡೆಬಿಟ್ ಕಾರ್ಡ್ ಇಲ್ಲದೆಯೂ ಫೋನ್​ ಪೇ ಆ್ಯಕ್ಟಿವೇಟ್ ಮಾಡಬಹುದು; ಹೇಗೆಂಬ ವಿವರ ಇಲ್ಲಿದೆ

ಇನ್ನು ಡೆಬಿಟ್ ಕಾರ್ಡ್ (Debit Card) ಸಹಾಯವಿಲ್ಲದೆ, ಆಧಾರ್ (Aadhaar) ಆಧಾರಿತ ಒಟಿಪಿ ದೃಢೀಕರಣದ ಮೂಲಕ ಫೋನ್​ ಪೇ (PhonePe) ಯುಪಿಐ ಆ್ಯಪ್ ಆ್ಯಕ್ಟಿವೇಟ್ ಮಾಡಬಹುದು. ಈ ಕುರಿತು ಫೋನ್​ ಪೇ ಮಾಹಿತಿ ನೀಡಿದೆ. ಆಧಾರ್ ಆಧಾರಿತ ಆ್ಯಕ್ಟಿವೇಷನ್ ಆಯ್ಕೆ ನೀಡಿದ ಮೊದಲ ಯುಪಿಐ ಆ್ಯಪ್ ತಾನೆಂದು ಫೋನ್​ ಪೇ ಹೇಳಿಕೊಂಡಿದೆ. ಜತೆಗೆ, ಕೋಟ್ಯಂತರ ಭಾರತೀಯರು ಸುರಕ್ಷಿತವಾಗಿ ಯುಪಿಐ ಪ್ಲಾಟ್​ಫಾರ್ಮ್​ ಸೇರಿಕೊಳ್ಳಬಹುದು ಎಂದು ಹೇಳಿದೆ. ಈ ಹಿಂದೆ ಫೋನ್​ ಪೇನಲ್ಲಿ ಯುಪಿಐ ಪಿನ್ ಸೆಟ್ ಮಾಡಬೇಕಿದ್ದರೆ ಡೆಬಿಟ್ ಕಾರ್ಡ್ ವಿವರಗಳನ್ನು ನಮೂದಿಸಬೇಕಿತ್ತು. ಡೆಬಿಟ್ ಕಾರ್ಡ್ ಇಲ್ಲದವರಿಗೆ ಯುಪಿಐ ಪಿನ್ ಸೆಟ್ ಮಾಡುವ ಅಥವಾ ಫೋನ್ ಪೇ ಆ್ಯಪ್ ಬಳಸುವ ಅವಕಾಶ ಸಿಗುತ್ತಿರಲಿಲ್ಲ. ಆದರೆ, ಇನ್ನು ಈ ಸಮಸ್ಯೆ ಎದುರಾಗದು. ಆಧಾರ್ ಆಧಾರಿತ ಕೆವೈಸಿ ಮೂಲಕ ಜನರು ಯುಪಿಐ ಆ್ಯಪ್ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು ಎಂದು ಫೋನ್ ಪೇ ಹೇಳಿದೆ.

ಫೋನ್ ಪೇನಲ್ಲಿ ಆಧಾರ್ ಕಾರ್ಡ್ ಆಯ್ಕೆಯನ್ನು ಆಯ್ದುಕೊಂಡು, ಆಧಾರ್​ನ ಕೊನೆಯ ಆರು ಸಂಖ್ಯೆಗಳನ್ನು ನಮೂದಿಸುವ ಮೂಲಕ ಪಿನ್ ಜನರೇಟ್ ಮಾಡಬಹುದು. ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಬಳಕೆದಾರರ ನೋಂದಾಯಿತ ಮೊಬೈಲ್​​ಗೆ ಯುಐಡಿಎಐ ಹಾಗೂ ಬ್ಯಾಂಕ್​ನಿಂದ ಒಟಿಪಿ ಬರಲಿದೆ.

  1. ನಿಮ್ಮ ಮೊಬೈಲ್​ನಲ್ಲಿ ಫೋನ್ ಪೇ ಆ್ಯಪ್ ಓಪನ್ ಮಾಡಿ.
  2. ಫೋನ್ ಪೇ ಪ್ರೊಫೈಲ್ ಪೇಗ್​ಗೆ ವಿಸಿಟ್ ಮಾಡಿ.
  3. ಪೇಮೆಂಟ್ಸ್ ಇನ್​ಸ್ಟ್ರುಮೆಂಟ್ಸ್ ಟ್ಯಾಬ್​ನಲ್ಲಿ ‘ಆ್ಯಡ್ ಬ್ಯಾಂಕ್ ಅಕೌಂಟ್’ ಆಯ್ಕೆಯನ್ನು ಪ್ರೆಸ್ ಮಾಡಿ.
  4. ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಿ.
  5. ಒಟಿಪಿ ದೃಢೀಕರಣದ ಮೂಲಕ ಮೊಬೈಲ್​ ಸಂಖ್ಯೆಯನ್ನು ದೃಢೀಕರಿಸಿ.
  6. ಫೋನ್​ ಪೇ ಬ್ಯಾಂಕ್ ಖಾತೆ ವಿವರಗಳನ್ನು ಪಡೆಯುತ್ತದೆ. ಅವುಗಳನ್ನು ಯುಪಿಐ ಜತೆ ಲಿಂಕ್ ಮಾಡಿ.
  7. ಯುಪಿಐ ಪಿನ್ ಜನರೇಟ್ ಮಾಡುವ ಆಪ್ಷನ್ ಅನ್ನು ಪ್ರೆಸ್ ಮಾಡಿ. ಅಷ್ಟರಲ್ಲಿ ನಿಮಗೆ ಡೆಬಿಟ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ವಿವರ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ.
  8. ಆಧಾರ್ ಕಾರ್ಡ್ ವಿವರ ಎಂಬ ಆಪ್ಷನನ್ನು ಆಯ್ಕೆ ಮಾಡಿ ಆಧಾರ್​ನ ಕೊನೆಯ ಆರು ಸಂಖ್ಯೆಗಳನ್ನು ನಮೂದಿಸಿ.ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
  9. ಒಟಿಪಿ ನಮೂದಿಸಿದ ನಂತರ ಯುಪಿಐ ಪಿನ್ ಸೆಟ್ ಮಾಡಿ.
  10. ಯುಪಿಐ ಆ್ಯಕ್ಟಿವೇಟ್ ಆಗುತ್ತದೆ. ಪಾವತಿಗಳನ್ನು ಮಾಡಲು ನೀವು ಅರ್ಹರಾಗಿರುತ್ತೀರಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ