ಮಂಗಳವಾರ, ಮೇ 7, 2024
ಶೀಘ್ರದಲ್ಲೇ SSLC ಪಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ.!-ಮೇ 7 ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮನ..?-ಮದುವೆಗೆ ತೆರಳಿದ್ದ 5 ಮಂದಿ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ನಲ್ಲಿ ಮುಳುಗಿ ಸಾವು!-ಚಾಲಕ ನಿಯಂತ್ರಣ ತಪ್ಪಿ 5 ವಿದಾರ್ಥಿಗಳ ದುರಂತ ಅಂತ್ಯ..!-ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ಆದೇಶ.!-ಮೂಡಬಿದರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿ ಆತ್ಮಹತ್ಯೆ..!-ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ ನಿಧನ..!-Rain Alert : ನಾಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ನಿರೀಕ್ಷೆ..!-ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

50 ಕೋಟಿ ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ – ಭಾರೀ ಮೊತ್ತಕ್ಕೆ ಸೇಲ್!

Twitter
Facebook
LinkedIn
WhatsApp
50 ಕೋಟಿ ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ – ಭಾರೀ ಮೊತ್ತಕ್ಕೆ ಸೇಲ್!

ನವದೆಹಲಿ: ಇಲ್ಲಿಯವರೆಗೆ ಕೇಳರಿಯದ ಭಾರೀ ದೊಡ್ಡ ಮಟ್ಟದ ಡೇಟಾ ಸೋರಿಕೆ (Data Leak) ಪ್ರಕರಣ ಬೆಳಕಿಗೆ ಬಂದಿದೆ. ವಿಶ್ವದಾದ್ಯಂತ ಸುಮಾರು 50 ಕೋಟಿ ವಾಟ್ಸಪ್ (WhatsApp) ಬಳಕೆದಾರರ ಡೇಟಾ ಸೋರಿಕೆಯಾಗಿದ್ದು, ಅದನ್ನು ಮಾರಾಟಕ್ಕಿಡಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸೈಬರ್ ನ್ಯೂಸ್ ವರದಿ ತಿಳಿಸಿದೆ.

ಜನಪ್ರಿಯ ಹ್ಯಾಕಿಂಗ್ ವೇದಿಕೆಯೊಂದು 50 ಕೋಟಿ ವಾಟ್ಸಪ್ ಬಳಕೆದಾರರ ದೂರವಾಣಿ ಸಂಖ್ಯೆಯನ್ನು ಮಾರಾಟಕ್ಕೆ ಇಟ್ಟಿದೆ. ಇದರಲ್ಲಿ 84 ದೇಶಗಳ ವಾಟ್ಸಪ್ ಬಳಕೆದಾರರ ಖಾಸಗಿ ಮಾಹಿತಿ ಒಳಗೊಂಡಿದೆ. ಈಜಿಪ್ಟ್, ಇಟಲಿ, ಫ್ರಾನ್ಸ್, ಬ್ರಿಟನ್, ರಷ್ಯಾ ಹಾಗೂ ಭಾರತವೂ ಸೇರಿದಂತೆ ಲಕ್ಷಾಂತರ ಬಳಕೆದಾರರ ಸಂಖ್ಯೆಗಳು ಇದರಲ್ಲಿ ಸೇರಿವೆ ಎನ್ನಲಾಗಿದೆ.

ವರದಿಗಳ ಪ್ರಕಾರ, 84 ದೇಶಗಳ ಪೈಕಿ ಈಜಿಪ್ಟ್‌ನ ಅತಿ ಹೆಚ್ಚು ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, 4.5 ಕೋಟಿ ಜನರ ಮಾಹಿತಿ ಇದರಲ್ಲಿ ಸೇರಿವೆ. ಇಟಲಿಯ 3.5 ಕೋಟಿ ಹಾಗೂ ಅಮೆರಿಕದ 3.2 ಕೋಟಿ ಜನರ ಮಾಹಿತಿ ಸೋರಿಕೆಯಾಗಿದೆ. ಭಾರತದ 60 ಲಕ್ಷ ಬಳಕೆದಾರರ ಮಾಹಿತಿಯೂ ಸೋರಿಕೆಯಾಗಿದೆ ಎಂಬುದನ್ನು ವರದಿ ತಿಳಿಸಿದೆ.

ವಾಟ್ಸಪ್ ಬಳಕೆದಾರರ ಮಾಹಿತಿಗಳನ್ನು ಮಾರಾಟಕ್ಕಿಟ್ಟಿರುವ ವ್ಯಕ್ತಿ ವಿವಿಧ ದೇಶಗಳ ಬಳಕೆದಾರರ ಡೇಟಾಗಳ ಬೆಲೆಯನ್ನೂ ನಿಗದಿಪಡಿಸಿದ್ದಾನೆ. ಅಮೆರಿಕದ ಬಳಕೆದಾರರ ಡೇಟಾಗಾಗಿ 5.61 ಲಕ್ಷ ರೂ., ಬ್ರಿಟನ್ ಬಳಕೆದಾರರ ಡೇಟಾಗೆ 1.61 ಲಕ್ಷ ರೂ. ಹಾಗೂ ಜರ್ಮನಿಯ ಬಳಕೆದಾರರ ಡೇಟಾಗಳಿಗಾಗಿ 2.04 ಲಕ್ಷ ರೂ. ನಿಗದಿಪಡಿಸಿದ್ದಾನೆ. ಆದರೆ ಹ್ಯಾಕರ್ (Hacker) ಈ ಡೇಟಾಗಳನ್ನು ಹೇಗೆ ಪಡೆದಿದ್ದಾನೆ ಎಂಬ ಬಗ್ಗೆ ಮಾಹಿತಿಯಿಲ್ಲ.

ಡೇಟಾ ಸೋರಿಕೆಯಿಂದಾಗಿ ಮೆಟಾ ಮಾಲೀಕತ್ವದ ಪ್ಲಾಟ್‌ಫಾರ್ಮ್ಗಳಿಗೆ ಹೊಡೆತ ಬಿದ್ದಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ, ಭಾರತದ 60 ಲಕ್ಷ ದಾಖಲೆಗಳು ಸೇರಿದಂತೆ 50 ಕೋಟಿ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಡೇಟಾ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದೆ. ಸೋರಿಕೆಯಾದ ಡೇಟಾಗಳಲ್ಲಿ ಫೋನ್ ನಂಬರ್ ಮತ್ತು ಇತರ ವಿವರಗಳು ಒಳಗೊಂಡಿತ್ತು ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ