ಮಂಗಳವಾರ, ಮೇ 14, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್

Twitter
Facebook
LinkedIn
WhatsApp
ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್

ವಾಷಿಂಗ್ಟನ್: ಆಪಲ್ ಕಂಪನಿ ತನ್ನ ಐಫೋನ್, ಐ ಪ್ಯಾಡ್, ಹಾಗೂ ಮ್ಯಾಕ್ ಸಾಧನಗಳಿಗಾಗಿ ಹೊಸ ಭದ್ರತಾ ಫೀಚರ್‌ಅನ್ನು ಹೊರತರುತ್ತಿದೆ. ಇದು ಮುಖ್ಯವಾಗಿ ಉನ್ನತ ಪ್ರೊಫೈಲ್ ಬಳಕೆದಾರರ ಮೇಲಿನ ಉದ್ದೇಶಿತ ಸೈಬರ್ ಅಟ್ಯಾಕ್‌ಗಳನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ.

ಲಾಕ್‌ಡೌನ್ ಮೋಡ್ ಹೆಸರಿನ ಹೊಸ ಐಚ್ಛಿಕ(ಆಪ್ಶನಲ್) ಫೀಚರ್, ಕೆಲವು ಉನ್ನತ ವ್ಯಕ್ತಿಗಳು ತಮ್ಮ ಆಪಲ್ ಡಿವೈಸ್‌ಗಳಲ್ಲಿ ಬಳಸಬಹುದಾಗಿದ್ದು, ಇದು ಸೈಬರ್ ಅಟ್ಯಾಕ್‌ಗಳಿಂದ ರಕ್ಷಣೆ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಇದು ಬಳಕೆದಾರರ ಸಾಧನಗಳನ್ನು ಹ್ಯಾಕ್ ಮಾಡುವುದನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದೆ.

ಕಳೆದ ಹಲವು ವರ್ಷಗಳಿಂದ ಉನ್ನತ ವ್ಯಕ್ತಿಗಳ ಡಿವೈಸ್‌ಗಳನ್ನು ಹ್ಯಾಕ್ ಮಾಡಿರುವಂತಹ ಹಲವು ಪ್ರಕರಣಗಳು ವರದಿಯಾಗಿವೆ. ಮುಖ್ಯವಾಗಿ ಕಂಪನಿ ಸ್ಪೈವೇರ್ ನಂತಹ ದಾಳಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಫೀಚರ್ ಅನ್ನು ಹೊರತಂದಿದೆ ಎಂದು ತಿಳಿಸಿದೆ.

ಪ್ರಪಂಚದಾದ್ಯಂತ ಸುಮಾರು 150 ದೇಶಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳನ್ನು ಗುರಿಪಡಿಸಿಕೊಂಡು ಸೈಬರ್ ದಾಳಿಗಳು ನಡೆಯುತ್ತವೆ. ಇದಕ್ಕಾಗಿ ಲಾಕ್‌ಡೌನ್ ಮೋಡ್ ಫೀಚರ್ ಅನ್ನು ತರಲಾಗಿದ್ದು, ಇದನ್ನು ಬಳಕೆದಾರರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದೆ.

ವರದಿಗಳ ಪ್ರಕಾರ ಲಾಕ್‌ಡೌನ್ ಮೋಡ್, ಆಪಲ್ ಡಿವೈಸ್‌ಗಳಲ್ಲಿ ಮೆಸೇಜಿಂಗ್ ಆಪ್‌ಗಳ ಅಟ್ಯಾಚ್‌ಮೆಂಟ್‌ಗಳನ್ನು ಬ್ಲಾಕ್ ಮಾಡುತ್ತದೆ. ಇವು ಹ್ಯಾಕರ್‌ಗಳಿಗೆ ಡಿವೈಸ್‌ಗಳನ್ನು ಹ್ಯಾಕ್‌ಮಾಡಲು ಲಭ್ಯವಿರುವ ಸುಲಭದ ಹಾಗೂ ಮುಖ್ಯವಾದ ವಿಧಾನವಾಗಿದೆ.

ಆಪಲ್ ಮುಂಬರುವ ಐಒಎಸ್ 16, ಐಪ್ಯಾಡ್ ಐಎಸ್ 16 ಹಾಗೂ ಮ್ಯಾಕ್ ಒಎಸ್‌ಗಳಲ್ಲಿ ನವೀಕರಣದ ಭಾಗವಾಗಿ ಲಾಕ್‌ಡೌನ್ ಮೋಡ್‌ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. ಈ ಫೀಚರ್ ಸದ್ಯ ಬೀಟಾ ಆವೃತ್ತಿಯಲ್ಲಿ ಪರೀಕ್ಷೆ ನಡೆಯುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

100 ಶೇಕಡ ಫಲಿತಾಂಶ - ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಅಪ್ಪಟ

ಅಂಕಣ