ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಮ್ಯಾ ನಿರ್ಮಾಣದ ಸಿನಿಮಾದಿಂದ ರಮ್ಯಾನೇ ಔಟ್ : ಕೈ ಜಾರಿತಾ ಸ್ವಾತಿ ಮುತ್ತು?

Twitter
Facebook
LinkedIn
WhatsApp
ರಮ್ಯಾ ನಿರ್ಮಾಣದ ಸಿನಿಮಾದಿಂದ ರಮ್ಯಾನೇ ಔಟ್ : ಕೈ ಜಾರಿತಾ ಸ್ವಾತಿ ಮುತ್ತು?

ಈ ಹಿಂದೆ ರಮ್ಯಾ ಅವರ ಪ್ರೊಡಕ್ಷನ್ ಹೌಸ್ ಆ್ಯಪಲ್ ಬಾಕ್ಸ್ ತಿಳಿಸಿದಂತೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swati Muttina Malehaniye) ಸಿನಿಮಾವನ್ನು ರಮ್ಯಾ ಅವರೇ ನಿರ್ಮಾಣ ಮಾಡಿ, ಅವರೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ನಾಯಕಿಯ ಸ್ಥಾನವನ್ನು ಬೇರೊಬ್ಬರು ತುಂಬಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಸಿರಿ ರವಿಕುಮಾರ್ ಲೀಡ್ ಪಾತ್ರದಲ್ಲಿ ಮಾಡಲಿದ್ದಾರೆ ಎಂದು ಸ್ವತಃ ರಮ್ಯಾ ಅವರ ಪ್ರೊಡಕ್ಷನ್ ಹೌಸ್ ತಿಳಿಸಿದೆ. 

ಆ್ಯಪಲ್ ಬಾಕ್ಸ್ (apple box) ಅಧಿಕೃತ ಪೇಜಿನಲ್ಲಿ ಹಾಕಿರುವಂತೆ, ‘ಸಿರಿ ರವಿಕುಮಾರ್ (Siri Ravikumar) ನಮ್ಮ ನಿರ್ಮಾಣದ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಆದರೆ, ರಮ್ಯಾ ಬೆಳ್ಳಿಪರದೆಯ ಮೇಲೆ ಆದಷ್ಟು ಬೇಗ ಮರಳಲಿದ್ದಾರೆ’ ಎಂದು ಬರೆಯಲಾಗಿದೆ. ಅಲ್ಲಿಗೆ ರಮ್ಯಾ ಕೇವಲ ನಿರ್ಮಾಪಕಿಯಾಗಿ ಮಾತ್ರ ಉಳಿಯಲಿದ್ದಾರಾ ಅಥವಾ ಇಬ್ಬರು ನಾಯಕಿಯರು ಈ ಸಿನಿಮಾದಲ್ಲಿ ಇದ್ದಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ರಾಜ್ ಬಿ ಶೆಟ್ಟಿ (Raj B. Shetty) ಈ ಚಿತ್ರದ ನಿರ್ದೇಶಕರು. ಅವರು ಕೂಡ ಪ್ರಧಾನ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ. ಅಲ್ಲದೇ, ನಿರ್ಮಾಣದಲ್ಲೂ ಹೂಡಿಕೆ ಮಾಡಿದ್ದಾರೆ. ರಮ್ಯಾ ಈ ಸಿನಿಮಾದಲ್ಲಿ ಕೇವಲ ನಿರ್ಮಾಪಕಿಯಾಗಿ ಮಾತ್ರ ಇರುತ್ತಾರಾ? ಅಥವಾ ನಟಿಯಾಗಿಯೂ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ
ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ