ಶನಿವಾರ, ಏಪ್ರಿಲ್ 27, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಳ್ತಂಗಡಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಆರಂಭವಾಗಿದೆ ಹೊಸ ರಾಜಕೀಯ ಸಮೀಕರಣಗಳು!!

Twitter
Facebook
LinkedIn
WhatsApp
ಬೆಳ್ತಂಗಡಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿಆರಂಭವಾಗಿದೆ ಹೊಸ ರಾಜಕೀಯ ಸಮೀಕರಣಗಳು!!

ಬೆಳ್ತಂಗಡಿ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಹೊಸ ರಾಜಕೀಯ ಸಮೀಕರಣಗಳು ಆರಂಭವಾಗಿದೆ. ಕಾರಣ ಬಹಳ ಕುತೂಹಲಕಾರಿಯಾಗಿದೆ.

ಕಾಂಗ್ರೆಸ್ ಯುವನಾಯಕ ರಕ್ಷಿತ್ ಶಿವರಾಂ ಯಾವಾಗ ಕಿಟ್ ವಿತರಣೆಗೆ ಬೆಳ್ತಂಗಡಿಗೆ ಕಾಲಿಟ್ಟರು ,ಆ ದಿನದಿಂದ ಹೊಸ ರಾಜಕೀಯ ಸಮೀಕರಣಗಳ ಆರಂಭವಾಗಿದೆ.

ಒಂದು ಹಂತದಲ್ಲಿ ವಸಂತ ಬಂಗೇರ ರಾಜಕೀಯ ನಿವೃತ್ತಿಯ ಅಂಚಿನಲ್ಲಿ ಇದ್ದರು ಎನ್ನುತ್ತದೆ ಮಾಹಿತಿಗಳು. ಆದರೆ ರಕ್ಷಿತ್ ಶಿವರಾಂ ವಸಂತ ಬಂಗೇರ ಅವರೊಂದಿಗೆ ಹಾಗೂ ಎಂಎಲ್ಸಿ ಹರೀಶ್ ಕುಮಾರ್ ಅವರೊಂದಿಗೆ ಸರಿಯಾಗಿ ಮಾತುಕತೆ ಮಾಡದೆ ನೇರ ವಾಗಿ ಅಖಾಡಕ್ಕೆ ಬಂದಿರುವುದು ಹರೀಶ್ ಕುಮಾರ್ ಮತ್ತು ವಸಂತ ಬಂಗೇರ ರಲ್ಲಿ ಹೊಸ ರಾಜಕೀಯ ಯೋಚನೆ ಬರುವಂತೆ ಮಾಡಿದೆ ಎನ್ನುತ್ತದೆ ವರದಿಗಳು.

ಬೆಳ್ತಂಗಡಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿಆರಂಭವಾಗಿದೆ ಹೊಸ ರಾಜಕೀಯ ಸಮೀಕರಣಗಳು!!

ಇನ್ನೊಂದು ಕಡೆ ಶಾಸಕ ನಾಗುವ ಆಸೆ ಇಟ್ಟುಕೊಂಡಿರುವ ರಂಜನ್ ಗೌಡ ಅವರ ಆಕಾಂಕ್ಷೆಗೆ ರಕ್ಷಿತ್ ಎಂಟ್ರಿ ತಡೆಯೊಡ್ಡಬಹುದು ಎಂದು ವಿಶ್ಲೇಷಿಸಲಾಗುತ್ತದೆ. ಈಗ ಈ ಮೂವರು ನಾಯಕರು ಒಂದಾಗುವ ಸನ್ನಿವೇಶಗಳು ಕಾಂಗ್ರೆಸ್ ನಲ್ಲಿ ನಿರ್ಮಾಣವಾಗಿದೆ ಎನ್ನುತ್ತದೆ ಆಂತರಿಕ ವರದಿಗಳು.

ಒಂದು ಹಂತದಲ್ಲಿ ಒಂಟಿಸಲಗ ನಂತೆ ಮುನ್ನುಗ್ಗುತ್ತಿದ್ದ ಶಾಸಕ ಹರೀಶ್ ಪೂ೦ಜ ಈಗ ಹೊಸ ರಾಜಕೀಯ ಸಮೀಕರಣಕ್ಕೆ ಹೆಜ್ಜೆ ಇಡಬೇಕಾದ ಅನಿವಾರ್ಯತೆಗೆ ಸಿಕ್ಕಿದ್ದಾರೆ. ಹರೀಶ್ ಪೂಂಜಾ ಹೊಸ ಜಾತಿ ಸಮೀಕರಣದ ಭಾಗದಲ್ಲಿ ಕೆಲಸ ಮಾಡುವ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನುತ್ತದೆ ಆಂತರಿಕ ವರದಿಗಳು. ಇದರಿಂದ ಪ್ರಬಲ ಜಾತಿಯ ಹೊಸ ನಾಯಕರನ್ನು ಸಿದ್ಧಮಾಡಿಕೊಂಡು ಪಕ್ಷವನ್ನು ಸಂಘಟಿಸುವ ಅನಿವಾರ್ಯತೆಗೆ ಹರೀಶ್ ಪೂಂಜಾ ಬಂದಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಬಿಜೆಪಿ ಬೆಳ್ತಂಗಡಿಯಲ್ಲಿ ಪ್ರಬಲವಾಗಿದ್ದರೂ ಹೊಸ ಸಮೀಕರಣಗಳು ಹೊಸ ರಾಜಕೀಯ ದಿಕ್ಕನ್ನು ತೋರಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಇದನ್ನ ಅರ್ಥಮಾಡಿಕೊಂಡಿರುವ ಬಿಜೆಪಿ ತನ್ನ ತಂತ್ರವನ್ನು ಬದಲಾಯಿಸಿದರೂ ಆಶ್ಚರ್ಯ ಏನಿಲ್ಲ. ಕಾಂಗ್ರೆಸ್ ಒಳಜಗಳ ಹಾಗೂ ಗುಂಪುಗಾರಿಕೆ ಬಿಜೆಪಿಗೆ ಅನುಕೂಲವಾಗಬಹುದು ಎಂದು ಅನಿಸಿಕೆ ವ್ಯಕ್ತಪಡಿಸುತ್ತಾರೆ ರಾಜಕೀಯ ವಿಶ್ಲೇಷಕರು. ಬೆಳ್ತಂಗಡಿ ಹೊಸ ರಾಜಕೀಯ ಸಮೀಕರಣದ ಕಡೆಗೆ ಸಾಗುತ್ತಿದೆ. ಆದರೆ ಯಾರು ಯಾರೊಂದಿಗೆ ಸೇರಿ ಹೊಸ ರಾಜಕಾರಣ ಮಾಡುತ್ತಾರೆ ಎಂಬುದನ್ನು ಜನತೆ ಕುತೂಹಲದಿಂದ ಕಾದು ನೋಡುತ್ತಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು