ಸೋಮವಾರ, ಏಪ್ರಿಲ್ 29, 2024
ಲೈಂಗಿಕ ಹಗರಣ ಪ್ರಕರಣ; ಶಾಸಕ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ತನಿಖೆ ಆರಂಭ-ಪುತ್ತೂರು: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು.!-ಸ್ವಾಭಿಮಾನಿ ರಾಜಕಾರಣಿ, ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ-ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಗ್​ಬಾಸ್​ ತೆಲುಗು ಸೀಸನ್​ 5 ವಿನ್ನರ್​ ಆಗಿ ಸನ್ನಿ ಘೋಷಣೆ

Twitter
Facebook
LinkedIn
WhatsApp
ಬಿಗ್​ಬಾಸ್​ ತೆಲುಗು ಸೀಸನ್​ 5 ವಿನ್ನರ್​ ಆಗಿ ಸನ್ನಿ ಘೋಷಣೆ

ಭಾರೀ ಕುತೂಹಲ ಸೃಷ್ಟಿಸಿದ್ದ ತೆಲುಗು ಆವೃತ್ತಿಯ ಬಿಗ್​ ಬಾಸ್​ (Bigg Boss) ಸೀಸನ್​​ 5 ಫಿನಾಲೆ ಕಾರ್ಯಕ್ರಮಕ್ಕೆ ತೆರೆಬಿದ್ದಿದೆ. ದೊಡ್ಮನೆ ಆಟದಲ್ಲಿ ಸನ್ನಿ ವಿಜೇತರಾಗಿ ಹೊರಹೊಮ್ಮಿದರೆ ಷಣ್ಮುಖ್​ ರನ್ನರ್​ ಅಪ್​ ಆಗಿದ್ದಾರೆ. ಇನ್ನು ಶ್ರೀರಾಮ ಚಂದ್ರ ಎರಡನೆ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಬಿಗ್​ ಬಾಸ್​ ಸೀಸನ್​ 5 ವಿನ್ನರ್​ ಟ್ರೋಫಿ ಎತ್ತಿ ಹಿಡಿದ ಸನ್ನಿ ಬರೋಬ್ಬರಿ 50 ಲಕ್ಷ ರೂಪಾಯಿ ಹಣ, ಬೈಕ್​ ಹಾಗೂ 25 ಲಕ್ಷ ರೂಪಾಯಿ ಮೌಲ್ಯದ ಪ್ಲೋಟ್​​ನ್ನು ಬಹುಮಾನದ ರೂಪದಲ್ಲಿ ಪಡೆದಿದ್ದಾರೆ.

ಟಿವಿ ಶೋಗಳಲ್ಲಿ ನಿರೂಪಕನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಸನ್ನಿ ಲೈಫ್​ಸ್ಟೈಲ್​ ಚಾನೆಲ್​ಗಳಲ್ಲಿ ಕೆಲಸ ಮಾಡಿ ಬಳಿಕ ವಿಜೆ ಆಗಿದ್ದರು. ಕೊನೆಗೆ ಕಲ್ಯಾಣ ವೈಭೋಗಂ ಮೂಲಕ ನಟನೆಯನ್ನೂ ಆರಂಭಿಸಿದ್ದರು.
ಬಿಗ್​ಬಾಸ್​ ಸೀಸನ್​ 5 ಕಾರ್ಯಕ್ರಮವನ್ನು ನಟ ನಾರ್ಗಾಜುನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಸ್​.ಎಸ್​ ರಾಜಮೌಳಿ, ಆಲಿಯಾಭಟ್​, ರಣಬೀರ್​ ಕಪೂರ್​, ನಾಣಿ, ನಾಗ ಚೈತನ್ಯ, ಶ್ರೀಯಾ ಶರಣ್​ ಹಾಗೂ ಅಯಾನ್​ ಮುಖರ್ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೆಪ್ಟೆಂಬರ್ 5ರಂದು ಆರಂಭವಾಗಿದ್ದ ಬಿಗ್​ ಬಾಸ್​ ತೆಲುಗು ಸೀಸನ್​ 5 ಬರೋಬ್ಬರಿ 106 ದಿನಗಳ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದೆ. ಬಿಗ್​ಬಾಸ್​ ತೆಲುಗು ಸೀಸನ್​ 5ನಲ್ಲಿ ಸರಯು, ಉಮಾದೇವಿ, ಲಹರಿ, ನಟರಾಜ್​, ಹಮಿದಾ, ಶ್ವೇತಾ ವರ್ಮಾ, ಪ್ರಿಯಾ, ಲೊಬೋ, ವಿಶ್ವ, ಜಸ್ವಂತ್​, ಅನಿ, ರವಿ, ಪ್ರಿಯಾಂಕ ಸಿಂಗ್​ , ಕಾಜಲ್​. ಸನ್ನಿ, ಶ್ರೀರಾಮ ಚಂದ್ರ, ಸಿರಿ ಹನ್ಮಂತ್​, ಷಣ್ಮುಖ್​ ಜಸ್ವಂತ್​ ಹಾಗೂ ಸನ್ನಿ 19 ಮಂದಿ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ನೀಡಿದ್ದರು. ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಬಿಗ್​ಬಾಸ್​ ಮನೆಯಲ್ಲಿ ಈ ಸೆಲೆಬ್ರಿಟಿಗಳು ವಾಸ್ತವ್ಯ ಹೂಡಿದ್ದರು.

19 ಮಂದಿ ಸ್ಪರ್ಧಿಗಳಲ್ಲಿ 13 ಮಂದಿ ವಾರದ ಕೊನೆಯಲ್ಲಿ ವೀಕ್ಷಕರಿಂದ ಕಡಿಮೆ ಮತ ಪಡೆದುಕೊಂಡ ಕಾರಣಕ್ಕೆ ಎಲಿಮಿನೇಟ್​ ಆಗಿದ್ದರು, ಈ ಸೀಸನ್​ನಲ್ಲಿ ಸರಯು ಮೊಟ್ಟ ಮೊದಲು ಎಲಿಮಿನೇಟ್​ ಆದ ಮನೆಯ ಸದಸ್ಯೆ ಆಗಿದ್ದಾರೆ. ಕೊನೆಯ ಬಾರಿಗೆ ಜನರಿಂದ ಕಡಿಮೆ ಮತ ಪಡೆದು 98ನೇ ದಿನಕ್ಕೆ ಕಾಜಲ್​ ಮನೆಯಿಂದ ಹೊರಬಂದಿದ್ದರು . ಜಸ್ವಂತ್​ ಅನಾರೋಗ್ಯದಿಂದಾಗಿ ಶೋನಿಂದ ಹೊರನಡೆದಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !. Twitter Facebook LinkedIn WhatsApp ಮಂಗಳೂರು: 2024 ಲೋಕಸಭಾ ಚುನಾವಣೆಯಲ್ಲಿ ಮಂಗಳೂರು

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು