ಮಂಗಳವಾರ, ಮೇ 14, 2024
ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಫ್ಯಾನ್ ಹಾಕೋಕೆ ಕರೆಂಟ್ ಇಲ್ಲ, ಅಡುಗೆ ಮಾಡೋಕೆ ಗ್ಯಾಸ್ ಇಲ್ಲ; ಯೂರೋಪ್​ನಲ್ಲಿ ಇಂಧನ ಹಾಹಾಕಾರ!!

Twitter
Facebook
LinkedIn
WhatsApp
ಫ್ಯಾನ್ ಹಾಕೋಕೆ ಕರೆಂಟ್ ಇಲ್ಲ, ಅಡುಗೆ ಮಾಡೋಕೆ ಗ್ಯಾಸ್ ಇಲ್ಲ; ಯೂರೋಪ್​ನಲ್ಲಿ ಇಂಧನ  ಹಾಹಾಕಾರ!!

ಜರ್ಮನಿ, ಬ್ರಿಟನ್ ಸೇರಿದಂತೆ ಯೂರೋಪ್​ನ ಹಲವು ಶ್ರೀಮಂತ ದೇಶಗಳು ಹಣದುಬ್ಬರದಿಂದ (Inflation) ತತ್ತರಿಸಿದ್ದು ಸಾಮಾನ್ಯ ಜನರ ದೈನಂದಿನ ಬದುಕಿನ ರೀತಿನೀತಿಗಳೇ ಬದಲಾಗಿವೆ. ಈ ವರ್ಷ ಯೂರೋಪ್​ನಲ್ಲಿ ದಾಖಲೆ ಮಟ್ಟದ ಉಷ್ಣಾಂಶ ಏರಿಕೆಯಾಗಿದೆ (Heat Wave in Europe). ಆದರೆ ಹವಾನಿಯಂತ್ರಕಗಳು (ಎಸಿ) ಅಥವಾ ಫ್ಯಾನ್ ಬಳಸಲು ಜನರಿಗೆ ಸಾಧ್ಯವಾಗುತ್ತಿಲ್ಲ. ಬಟ್ಟೆಗಳಿಗೆ ಐರನ್ ಮಾಡಲು, ಧಾನ್ಯ-ತರಕಾರಿ ಬೇಯಿಸಿ ಅಡುಗೆ ಮಾಡಲೂ ಹಿಂಜರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಮತ್ತು ಅಡುಗೆ ಅನಿಲದ ಬೆಲೆ ವಿಪರೀತ ಹೆಚ್ಚಾಗಿದ್ದು, ದುಡಿಮೆಯ ಬಹುಪಾಲು ಇವೆರೆಡಕ್ಕೆ ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಅನಿವಾರ್ಯವಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ದೇಶಗಳಲ್ಲಿ ವಿದ್ಯುತ್ ಮತ್ತು ಅಡುಗೆ ಅನಿಲದ ಬಳಕೆ ಕಡಿಮೆಯಾಗಿದೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಯೂರೋಪ್​ನಲ್ಲಿ ಚಳಿಗಾಲ ಆರಂಭವಾಗಲಿದ್ದು, ರಷ್ಯಾ-ಉಕ್ರೇನ್ ಗಲಭೆ ಒಂದು ಹಂತಕ್ಕೆ ಬಂದು ಅನಿಲ ಸರಬರಾಜು ಮೊದಲ ಸ್ಥಿತಿಗೆ ಮರಳದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಷಮಿಸಲಿದೆ. ಜರ್ಮನಿ ಮತ್ತು ನಾರ್ವೆ, ಬ್ರಿಟನ್​ ದೇಶಗಳಲ್ಲಿ ಸಾಮಾಜಿಕ ಅಸಂತುಷ್ಟಿ ಹೆಚ್ಚಾಗಿ ಜನರು ಬೀದಿಗಳಿದು ಪ್ರತಿಭಟಿಸುವ ಸಾಧ್ಯತೆಯಿದೆ. ಬ್ರಿಟನ್​ನ ರೈಲ್ವೆ ಇಲಾಖೆ, ಬಂದರು ನೌಕರರು ಹಾಗೂ ಜರ್ಮನಿಯ ಲುಫ್ತಾನ್ಸಾ ಏರ್​ಲೈನ್ಸ್​ ಸಿಬ್ಬಂದಿ ವೇತನ ಏರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಹಣದುಬ್ಬರ ಮತ್ತು ಬದಲಾದ ಜೀವನಶೈಲಿಯು ಜನರ ಆಕ್ರೋಶವಾಗಿ ಬದಲಾಗಿ, ಸಮಾಜದ ಹಲವು ವರ್ಗಗಳಲ್ಲಿ ಅಸಮಾಧಾನ ಹೆಚ್ಚಾಗಬಹುದು. ಡಿಸೆಂಬರ್ ಹೊತ್ತಿಗೆ ಪ್ರತಿಭಟನೆಗಳು ಈ ದೇಶಗಳಲ್ಲಿ ಸಾಮಾನ್ಯವಾಗಬಹುದು ಎಂದು ‘ಸಿವಿಲ್ ಅನ್​ರೆಸ್ಟ್ ಇಂಡೆಕ್ಸ್’ (ಸಾಮಾಜಿಕ ಅಶಾಂತಿ ಸೂಚ್ಯಂಕ) ಉಲ್ಲೇಖಿಸಿ ರಾಯಿಟರ್ಸ್​ ವರದಿ ಮಾಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

100 ಶೇಕಡ ಫಲಿತಾಂಶ - ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಅಪ್ಪಟ

ಅಂಕಣ