ಸೋಮವಾರ, ಮೇ 6, 2024
ಮೂಡಬಿದರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿ ಆತ್ಮಹತ್ಯೆ..!-ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ ನಿಧನ..!-Rain Alert : ನಾಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ನಿರೀಕ್ಷೆ..!-ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!-6 ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ!-ಬೆಳ್ತಂಗಡಿ: ಅರ್ಚಕ ಆತ್ಮಹತ್ಯೆಗೆ ಶರಣು-ಬೆಳ್ತಂಗಡಿ: ಅರ್ಚಕ ಆತ್ಮಹತ್ಯೆಗೆ ಶರಣು-ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ; ಕಂಗನಾ ರಣಾವತ್ ಹೇಳಿಕೆ ವಿಡಿಯೋ ವೈರಲ್-ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಫೆ. 22ರಿಂದ ಮಂಗಳೂರು-ಪಣಜಿಗೆ ರಾಜಹಂಸ ಬಸ್ ಸೇವೆ ಪ್ರಾರಂಭ

Twitter
Facebook
LinkedIn
WhatsApp
50862492627 e9599caf18 b

ಮಂಗಳೂರು, ಫೆ 21 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಂಗಳೂರಿನಿಂದ ಉಡುಪಿ ಕುಂದಾಪುರ ಬೈಂದೂರು, ಭಟ್ಕಳ, ಹೊನ್ನಾವರ ಕುಮಟಾ, ಅಂಕೋಲಾ, ಕಾರವಾರ, ಪೊಲೆಂಕಾನಕೋನ, ಮಡಗಾಂವ್, ಪೋಂಡ, ಮಂಗೇಶಿ, ಪಣಜಿ ಹಾಗೂ ಬರುವ ಮಾರ್ಗದಲ್ಲಿ ಪಣಜಿ, ಕೊರ್ಟಾಲಿಂ, ಮಡಗಾಂವ್, ಕಾನಕೋನ, ಪೊಲೆಂ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಮಣಿಪಾಲ, ಉಡುಪಿ ಮಾರ್ಗವಾಗಿ ರಾಜಹಂಸ ಹೊಸ ಸಾರಿಗೆಯನ್ನು ಇದೇ ಫೆ.22ರಿಂದ ಪ್ರಾರಂಭಿಸಲಿದೆ.

ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ರಾತ್ರಿ 9 ಗಂಟೆಗೆ ಹೊರಟು ಉಡುಪಿಯಲ್ಲಿ 10.15 ರಿಂದ 10.30ರ ವರೆಗೆ, ಕುಂದಾಪುರಕ್ಕೆ 11.15ಕ್ಕೆ ತಲುಪುವುದು. ನಂತರ ಭಟ್ಕಳ 12.15ಕ್ಕೆ ಹೊರಟು ಹೊನ್ನಾವರ 12.45, ಅಂಕೋಲಾಕ್ಕೆ ರಾತ್ರಿ 2ಗೆ ತಲುಪುವುದು. ನಂತರ ಕಾರವಾರದಲ್ಲಿ 2.30 ರಿಂದ 2.45ರ ವೆರಗೆ, ಪಣಜಿಗೆ ಮುಂಜಾನೆ 5.30ಗಂಟೆಗೆ ತಲುಪುವುದು.

ಮರು ಪ್ರಯಾಣದಲ್ಲಿ ಪಣಜಿಯಿಂದ ರಾತ್ರಿ 8 ಗಂಟೆಗೆ ಹೊರಟು ಮಡಗಾಂವ್ 8.45, ಕಾರವಾರ 9.45, ಕುಮಟಾ 11.45, ಭಟ್ಕಳ 1.15ಕ್ಕೆ ತಲುಪುವುದು. ನಂತರ ಕುಂದಾಪುರ 2ಗಂಟೆಗೆ ಅಲ್ಲಿಂದ ಉಡುಪಿ 3 ಗಂಟೆಗೆ ನಂತರ ಮಂಗಳೂರು ರೈಲು ನಿಲ್ದಾಣಕ್ಕೆ ಮುಂಜಾನೆ 4 ಗಂಟೆಗೆ ತಲುಪುವುದು.

ಈ ಸಾರಿಗೆಯಲ್ಲಿ ಮಂಗಳೂರಿನಿಂದ ಪಣಜಿಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 620ರೂ.ಗಳು, ಉಡುಪಿಯಿಂದ ಪಣಜಿಗೆ 590 ರೂ.ಗಳು, ಕುಂದಾಪುರದಿಂದ ಪಣಜಿಗೆ 570 ರೂ.ಗಳಾಗಿದೆ. ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದೆ.

ಹೆಚ್ಚಿನ ಮಾಹಿತಿಗೆ ಹತ್ತಿರದ ರಿಸರ್ವೇಶನ್ ಕೌಂಟರ್ ಹಾಗೂ ಮೊಬೈಲ್‍ಸಂಖ್ಯೆ: ಮಂಗಳೂರು ಬಸ್ಸು ನಿಲ್ದಾಣ – 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್- 9663211553, ಉಡುಪಿ ಡಾ. ವಿ.ಎಸ್. ಆಚಾರ್ಯ ಬಸ್ಸು ನಿಲ್ದಾಣ- 7795984182, ಉಡುಪಿ ಬಸ್ಸು ನಿಲ್ದಾಣ – 9663266400 ಹಾಗೂ ಕುಂದಾಪುರ ಬಸ್ಸು ನಿಲ್ದಾಣ- 9663266009 ಅನ್ನು ಸಂಪರ್ಕಿಸುವಂತೆ ಕರಾರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ