ಶುಕ್ರವಾರ, ಮೇ 10, 2024
ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು-ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!-ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಕ್ಯಾಮೆರಾಗಳ ಮುಂದೆನೇ ನಾಯಕ ಕೆ ಎಲ್ ರಾಹುಲ್ ಗೆ ತರಾಟೆಗೆ ತೆಗೆದುಕೊಂಡ LSG ಮಾಲೀಕ ; ಅಭಿಮಾನಿಗಳು ಆಕ್ರೋಶ..!-ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ-SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಠ್ಯದ ಪ್ರಮಾದಕ್ಕೆ‌ ಬಿಜೆಪಿ ಕಾರಣ : ಡಿಕೆ ಶಿವಕುಮಾರ್‌

Twitter
Facebook
LinkedIn
WhatsApp
ಪಠ್ಯದ ಪ್ರಮಾದಕ್ಕೆ‌ ಬಿಜೆಪಿ ಕಾರಣ : ಡಿಕೆ ಶಿವಕುಮಾರ್‌
 

ಬೆಂಗಳೂರು: ಇಡೀ ರಾಷ್ಟ್ರದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪುತ್ಥಳಿಯಷ್ಟು ಬೇರೆ ಯಾರ ಪುತ್ಥಳಿಯೂ ಇಲ್ಲ. ಸಂವಿಧಾನದಲ್ಲಿ ನಮ್ಮ ಎಲ್ಲಾ ಧರ್ಮ, ಜಾತಿ, ಪದ್ಧತಿ, ಸಂಸ್ಕೃತಿಗೆ ಸಮಾನ ಹಕ್ಕು ಕೊಡಲಾಗಿದೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ನೇತತ್ವದ ಸಂವಿಧಾನ ಕರಡು ಸಮಿತಿ ರಚಿಸಿ, ಸಂವಿಧಾನ ರಚನೆ ಜವಾಬ್ದಾರಿ ವಹಿಸಿತ್ತು.ಕಳೆದ ಹಲವು ವರ್ಷಗಳಿಂದ ನಾವು ಈ ಸಂವಿಧಾನ ಒಪ್ಪಿ ಬದುಕುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ಚನ್ನಣ್ಣ ವಾಲೀಕಾರ ಅವರು ಬರೆದಿದ್ದ ‘ನೀ ಹೋದ ಮರುದಿನ’ ಎಂಬ ಅಂಬೇಡ್ಕರರ ಬಗೆಗಿನ ಕವಿತೆಯನ್ನು ತೆಗೆದು ಹಾಕಲಾಗಿದೆ. 7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸಮಾಜ ಸುಧಾರಕರ ಬಗ್ಗೆ ಹೇಳಲಾಗಿದೆ. ಅಲ್ಲಿ ಅಂಬೇಡ್ಕರರ ಬಗ್ಗೆಯೂ ಮಾಹಿತಿ ಇದೆ. ಆದರೆ ಈ ಹಿಂದಿನ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಅವರ ತಂದೆ, ತಾಯಿಯವರ ಹೆಸರುಗಳಿದ್ದವು. ಅಂಬೇಡ್ಕರ್ ಹುಟ್ಟಿದ ಸ್ಥಳ ಮತ್ತು ದಿನಾಂಕವಿತ್ತು. ಅದನ್ನೂ ಸಹ ತೆಗೆದುಹಾಕಲಾಗಿದೆ. ಅದೇ ಭಾಗದಲ್ಲಿ ಅಂಬೇಡ್ಕರರ ಬೃಹತ್ ಹೋರಾಟಗಳಾಗಿದ್ದ ಮಹಾಡ್ ಸತ್ಯಾಗ್ರಹ ಹಾಗೂ ಕಾಲಾರಾಂ ದೇಗುಲ ಪ್ರವೇಶ ಹೋರಾಟಗಳ ಪ್ರಸ್ತಾಪವನ್ನೂ ತೆಗೆದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

9 ನೇ ತರಗತಿಯ ಸಮಾಜ ವಿಜ್ಞಾನದ‌ ನಮ್ಮ ಸಂವಿಧಾನ ಪಾಠದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗಿದೆ ಎಂದಿತ್ತು. ಈ ವಾಕ್ಯವನ್ನೂ ಈಗ ತೆಗೆದು ಹಾಕಲಾಗಿದೆ. ಇದಲ್ಲದೇ ಅಂಬೇಡ್ಕರ್ ಅವರ ಬಗ್ಗೆ ಇನ್ನೂ ಅನೇಕ ಅಂಶಗಳನ್ನು ತೆಗೆದು ಹಾಕಲಾಗಿದೆ. ರಾಜ್ಯ ಸರ್ಕಾರ ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದನ್ನು ಹಿಂದೆಂದೂ ನಾನು ನೋಡಿಲ್ಲ ಎಂದು ಕಿಡಿಕಾರಿದರು.

ಪಠ್ಯದಲ್ಲಿ ಆಗಿರುವ ಪ್ರಮಾದಗಳಿಗೆ ಬಿಜೆಪಿ ಸರ್ಕಾರವೇ ಕಾರಣ. ಬಸವಣ್ಣ, ಕುವೆಂಪು, ಬುದ್ಧ, ನಾರಾಯಣ ಗುರುಗಳು, ಮಹಾವೀರ ಜೈನ್, ಭಗತ್ ಸಿಂಗ್ ಸೇರಿದಂತೆ ಹಲವು ನಾಯಕರ ವಿಚಾರಗಳನ್ನು ಸರ್ಕಾರ ಕೈಬಿಟ್ಟಿದೆ ಇಲ್ಲವೇ ತಿರುಚಿದೆ. ಇದರಿಂದ ಸರ್ಕಾರದ ಮನಸ್ಥಿತಿ, ಮುಖವಾಡ ಬಯಲಾಗಿದೆ ಈ ಮಹನೀಯರನ್ನು ನಾವು ಇಷ್ಟು ದಿನಗಳ ಕಾಲ ಗೌರವದಿಂದ ಕಾಣುತ್ತಿದ್ದೆವು. ಆದರೆ ಈಗ ಪಠ್ಯ ಪುಸ್ತಕದಲ್ಲಿ ಅವರನ್ನು ಸಾಮಾನ್ಯರಂತೆ ಬಿಂಬಿಸಲಾಗಿದೆ ಎಂದರು.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

100 ಶೇಕಡ ಫಲಿತಾಂಶ - ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಅಪ್ಪಟ

ಅಂಕಣ