ಶುಕ್ರವಾರ, ಮೇ 3, 2024
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?-ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಾವು ಬಲವಾಗಿ ಹಿಂತಿರುಗುತ್ತೇವೆ ; ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ಬರೆದ ಹರ್ಮನ್ ಪ್ರೀತ್ ಕೌರ್.

Twitter
Facebook
LinkedIn
WhatsApp
images 8

ಮಹಿಳಾ ಟಿ20 ವಿಶ್ವಕಪ್‌ನ (T20 World Cup 2023) ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ (India vs Australia) ಬರಿಗೈಯಲ್ಲಿ ತವರಿಗೆ ಮರಳುತ್ತಿದೆ. ಇತ್ತ ತನ್ನ ಅಜಾಗರೂಕತೆಯಿಂದಲೇ ತಂಡಕ್ಕೆ ಸೋಲಾಯ್ತು ಎಂಬ ದುಃಖದಲ್ಲಿರುವ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಕ್ರಿಕೆಟ್ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಪುಟಿದೇಳುವ ಆತ್ಮವಿಶ್ವಾಸ ತುಂಬಿದ್ದಾರೆ. ವಾಸ್ತವವಾಗಿ ಟಿ20 ವಿಶ್ವಕಪ್​ ಸೆಮಿಫೈನಲ್ಲಿ ಬಲಿಷ್ಠ ಆಸ್ಟ್ರೇಲಿಯನ್ನರ ಕೈಯಲ್ಲಿ ಭಾರತ ತಂಡ ಐದು ರನ್‌ಗಳ ಸೋಲು ಕಂಡಿತು. 173 ರನ್‌ಗಳ ಗುರಿ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿತ್ತು. ಹರ್ಮನ್ ಕೂಡ ಅರ್ಧಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ಉತ್ಸಾಹದಲ್ಲಿದ್ದರು. ಆದರೆ ನಿರ್ಣಾಯಕ ಸಮಯದಲ್ಲಿ ಭಾರತದ ನಾಯಕಿ ರನ್ ಔಟ್ ಆಗಿದ್ದು ತಂಡಕ್ಕೆ ಹೊಡೆತ ನೀಡಿತು. ಸೋಲಿನ ನಂತರ ಮೈದಾನದಲ್ಲಿ ಕಣ್ಣೀರಿಟ್ಟಿದ್ದ ಹರ್ಮನ್ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

images 9

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂದೇಶ ಬರೆದಿರುವ ಹರ್ಮನ್​ಪ್ರೀತ್ ಅದರಲ್ಲಿ, ಪಂದ್ಯಾವಳಿಯಲ್ಲಿ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾ, ತಂಡವು ಸೋತಿರುವುದು ದುಃಖಕರವಾಗಿದೆ. ಆದರೆ ಈ ಹೃದಯ ವಿದ್ರಾವಕ ಸೋಲಿನ ನಂತರ ಟೀಂ ಇಂಡಿಯಾ ಮತ್ತೆ ಪುಟಿದೇಳಲಿದೆ ಮತ್ತು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲಿದೆ. ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ನಿಮ್ಮ ತಂಡವು ಸೋತಿರುವುದನ್ನು ನೋಡಿ ನಿಮಗೆ ಎಷ್ಟು ದುಃಖವಾಗಿದೆ ಎಂದು ನನಗೆ ತಿಳಿದಿದೆ. ಆದರೆ ನಾವು ಮತ್ತೆ ಪುಟಿದೇಳುತ್ತೇವೆ. ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಕೌರ್ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದೇ ವೇಳೆ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ನೆಟ್ಟಿಗರು ಕೌರ್ ಬೆಂಬಲಕ್ಕೆ ನಿಂತಿದ್ದಾರೆ. ಈ ನಿಟ್ಟಿನಲ್ಲಿ ಇಟಾಲಿಯನ್ ಫುಟ್ಬಾಲ್ ಆಟಗಾರ್ತಿ ಅಗಾಥಾ ಇಸಾಬೆಲ್ಲಾ ಸೆಂಟಾಸ್ಸೊ, ರೀ ಟ್ವೀಟ್ ಮಾಡಿದ್ದು, ‘ನೀವು ಇದನ್ನು ಖಂಡಿತ ಮಾಡುತ್ತೀರಿ ಎಂಬುದು ನನಗೆ ಖಾತ್ರಿಯಿದೆ. ಇಟಲಿಯಿಂದ ನಾನು ನಿಮಗೆ ಹೊಸ ಅಭಿಮಾನಿಯಾಗಿದ್ದೇನೆ. ನೀವು ತುಂಬಾ ಚೆನ್ನಾಗಿ ಆಡಿದ್ದೀರಿ ಎಂದು ಬರೆದುಕೊಂಡಿದ್ದಾರೆ. ಏನೇ ಆಗಲಿ ನಾವು ಟೀಂ ಇಂಡಿಯಾದ ಹಿಂದೆ ಸದಾ ಇರುತ್ತೇವೆ ಎಂದು ಕೆಲವು ನೆಟಿಜನ್​ಗಳು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ‘ನೀವು ಅದ್ಭುತವಾಗಿ ಆಡಿದ್ದೀರಿ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರೀಟ್ವಿಟ್ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ