ಶುಕ್ರವಾರ, ಮೇ 17, 2024
ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರಕ್ಷಣೆಯ ರೋಚಕ ಕಾರ್ಯಾಚರಣೆಯ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ಚೆನ್ನೈ ನಗರದ ಅವಡಿಯಲ್ಲಿರುವ Choolaimedu ಏರಿಯಾದ ಅಪಾರ್ಟ್‌ಮೆಂಟ್ ಒಂದರಲ್ಲಿ ಭಾನುವಾರ ಮೇಲ್ಛಾವಣಿಯ ರೂಫ್‌ನ ಅಂಚಿನಲ್ಲಿ ಶಿಶುವೊಂದು ಪ್ರಾಣಾಪಾಯಕ್ಕೆ ಸಿಲುಕಿದ್ದು ನೆರೆಮನೆಯವರು ಪ್ರಾಣದ ಹಂಗು ತೊರೆದು ರಕ್ಷಿಸಿದ ರೋಚಕ ವಿಡಿಯೋ ವೈರಲ್ ಆಗಿದೆ.

 

ಆಪಾರ್ಟ್ ಮೆಂಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದ ಮಗು ಎರಡನೇ ಅಂತಸ್ತಿನ ಮೇಲ್ಛಾವಣಿಯ ಅಂಚಿನ ಮೇಲೆ ಬಿದ್ದಿದೆ. ಇದನ್ನು ಗಮನಿಸಿದೆ ನೆರಮನೆಯವರು ಕೂಡಲೇ ಕೆಳಗಿದ್ದವರನ್ನು ಮತ್ತು ಅಕ್ಕಪಕ್ಕದವರನ್ನು ಕೂಗಿ ಮಾಹಿತಿ ನೀಡಿದ್ದಾರೆ. ಕೂಡಲೇ ಮಗು ಕೆಳಗೆ ಬಿದ್ದರೂ ಏನೂ ಆಗದಂತೆ ತಡೆಯಲು ದೊಡ್ಡ ದೊಡ್ಡ ಕಂಬಳಿಗಳನ್ನು ತಂದು ಅಡ್ಡಲಾಗಿ ಹಿಡಿದಿದ್ದಾರೆ.

ಈ ವೇಳೆ ಮಗು ಇದ್ದ ಎರಡನೇ ಅಂತಸ್ತಿನ ಕೆಳಗಿನ ಮನೆಯವರು ಅಲ್ಲಿಂದಲೇ ಮೇಲಕ್ಕೆ ಹತ್ತಿ ಮಗುವನ್ನು ರಕ್ಷಿಸಿದ್ದಾರೆ. ಇವಿಷ್ಟೂ ಕಾರ್ಯಾಚರಣೆಯನ್ನು ಎದುರು ಮನೆಯಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಬಾಲ್ಕನಿಯಿಂದ ರೆಕಾರ್ಡ್ ಮಾಡಿದ ಕ್ಲಿಪ್‌ನಲ್ಲಿ 8 ತಿಂಗಳ ಹರೆಯದ ಹರಿನ್ ಮಾಗಿ ಎಂಬ ಪುಟ್ಟ ಮಗು ಕಟ್ಟಡದ 2ನೇ ಮಹಡಿಯ ಮೇಲ್ಛಾವಣಿಯ ತುದಿಯಲ್ಲಿ ತನ್ನ ಕೈ ಮತ್ತು ಮೊಣಕಾಲುಗಳ ಮೇಲೆ ಮಲಗಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಮೂವರು ಪುರುಷರು ಮಗುವನ್ನು ರಕ್ಷಿಸಲು ಮೊದಲ ಮಹಡಿಯ ಕಿಟಕಿಯಿಂದ ಮೇಲಕ್ಕೆ ಏರಲು ಪ್ರಯತ್ನಿಸಿದಾಗ ಗಾಬರಿಗೊಂಡ ನಿವಾಸಿಗಳು ಸಹಾಯಕ್ಕಾಗಿ ಕಿರುಚಿದ್ದಾರೆ.

ಮಗು ತಪ್ಪಿ ಕೆಳಗೆ ಬಿದ್ದರೆ ಹಿಡಿಯಲು ಜನರ ಗುಂಪು ಕಿಟಕಿಯ ಕೆಳಗೆ ನೆಲ ಮಹಡಿಯಲ್ಲಿ ಬೆಡ್‌ಶೀಟ್ ಗಳನ್ನು ಹಿಡಿದು ನಿಂತಿದ್ದರು. ಮಗುವಿಗೆ ನೋವಾಗದಂತೆ ನೋಡಿಕೊಳ್ಳಲು ಹಾಸಿಗೆಯ ಕೆಳಗೆ ಹಾಸಿಗೆಯನ್ನು ಇರಿಸಲಾಗಿತ್ತು. ಮೊದಲ ಮಹಡಿಯಲ್ಲಿದ್ದ ಪುರುಷರು ಕೊನೆಗೂ ಮಗುವನ್ನು ರಕ್ಷಿಸಿದ್ದಾರೆ.

ರಮ್ಯಾ ಎಂಬಾಕೆ ಬಾಲ್ಕನಿಯಲ್ಲಿ ಶುಶ್ರೂಷೆ ಮಾಡುತ್ತಿದ್ದ ವೇಳೆ ಮಗು ಕೆಳಗೆ ಬಿದ್ದಿತ್ತು ಎಂದು ಆವಡಿ ಪೊಲೀಸ್ ಕಮಿಷನರ್ ಶಂಕರ್ ಹೇಳಿದ್ದಾರೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ