ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದುಬಾರಿ BMW ಬೈಕ್ ಖರೀದಿಸಿ ವಿಶೇಷ ಮನವಿ ಮಾಡಿದ ನಟಿ ಮಂಜು ವಾರಿಯರ್

Twitter
Facebook
LinkedIn
WhatsApp
photo 1597157639073 69284dc0fdaf 4

ಜಿತ್ ಕುಮಾರ್ (Ajith Kumar) ಅವರಿಗೆ ಬೈಕ್ ರೈಡಿಂಗ್ ಎಂದರೆ ತುಂಬಾ ಇಷ್ಟ. ಆಗಾಗ ಬೇಕ್ ರೈಡಿಂಗ್‌ಗೆ ಹೋಗುತ್ತಲೇ ಇರುತ್ತಾರೆ. ಪೈಲೆಟ್ ಲೈಸೆನ್ಸ್ ಹೊಂದಿರುವ ಏಕೈಕ ಹೀರೋ ಎಂಬ ಖ್ಯಾತಿಗೂ ಹೆಸರಾಗಿದ್ದಾರೆ. ಇದೀಗ ಅಜಿತ್ ಹಾದಿಯಲ್ಲಿ ನಟಿ ಮಂಜು ವಾರಿಯರ್ ಹೆಜ್ಜೆ ಇಟ್ಟಿದ್ದಾರೆ. ಮಂಜು ವಾರಿಯರ್ (Actress Manju Warrier) ಬೈಕ್‌ಯೊಂದನ್ನ ಖರೀದಿ ಮಾಡಿದ್ದಾರೆ.

May be an image of 2 people, beard, people sitting and outdoors

ಕಾಲಿವುಡ್ (Kollywood) ಸ್ಟಾರ್ ಅಜಿತ್ ಕುಮಾರ್ ಆಗಾಗ ರೋಡ್ ಟ್ರಿಪ್ ಮಾಡುತ್ತಲೇ ಇರುತ್ತಾರೆ. ಇನ್ನೂ ಇವರ ಗುಂಪಿನಲ್ಲಿ ಮಂಜು ವಾರಿಯರ್ ಕೂಡ ಹೈಲೈಟ್ ಆಗಿದ್ದಾರೆ. `ತುನಿವು’ ಸಿನಿಮಾ ಗೆದ್ದ ಖುಷಿಯಲ್ಲಿ BMW ಜಿಎಸ್ 1250 ಬೈಕ್ ಖರೀದಿ ಮಾಡಿದ್ದಾರೆ. ಭಾರತದಲ್ಲಿ ಈ ಬೈಕ್‌ಗೆ 25 ಲಕ್ಷ ರೂಪಾಯಿ ಇದೆ.

May be an image of 1 person

ಬೈಕ್ ಖರೀದಿ ಮಾಡಿದ ವಿಡಿಯೋನ ಪೋಸ್ಟ್ ಮಾಡಿರುವ ನಟಿ ಅವರು ವಿಶೇಷ ಸಾಲುಗಳನ್ನು ಬರೆದುಕೊಂಡಿದ್ದಾರೆ. ಒಳ್ಳೆಯ ರೈಡರ್ ಆಗೋಕೆ ಇನ್ನೂ ಸಾಕಷ್ಟು ಸಮಯ ಬೇಕಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸಿದರೆ ದಯವಿಟ್ಟು ಸಹಿಸಿಕೊಳ್ಳಿ. ನನ್ನಂತೆ ಅನೇಕರಿಗೆ ಸ್ಫೂರ್ತಿಯಾದ ಅಜಿತ್ ಕುಮಾರ್ ಅವರಿಗೆ ಧನ್ಯವಾದ ಎಂದು ನಟಿ ಮಂಜು ಬರೆದುಕೊಂಡಿದ್ದಾರೆ.

https://www.instagram.com/p/Cng84jOvq3Z/?utm_source=ig_embed&ig_rid=fe449ed5-c74f-45a6-aafb-6c54d9d29bbd

 

ಅಜಿತ್ ಕುಮಾರ್ ಮತ್ತು ಮಂಜು ವಾರಿಯರ್ ನಟನೆಯ `ತುನಿವು’ ಸಿನಿಮಾ ಫೆ.11ರಂದು ತೆರೆ ಕಂಡಿತ್ತು. ಸಿನಿಮಾಗೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗಿತ್ತು. `ತುನಿವು’ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಕಮಾಲ್ ಮಾಡುವಲ್ಲಿ ಗೆದ್ದಿದೆ. ಕೋಟಿ ಕೋಟಿ ಕಮಾಯಿ ಮಾಡಿದೆ.

No photo description available.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ