ಶುಕ್ರವಾರ, ಮೇ 3, 2024
ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ-ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!-ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಏಸುರಾಜ್ ಕ್ರಿಶ್ಚಿಯನ್ ಎಂಬ ಆರೋಪ ಸುಳ್ಳು; ರಾಮಲಿಂಗಾ ರೆಡ್ಡಿ-ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾವು ಸಂವಿಧಾನ ಬದಲಾವಣೆ ಮಾಡುವುದಿಲ್ಲ; ಬಿಜೆಪಿ ಶಾಸಕ ಶಿವರಾಜ್​ ಪಾಟೀಲ್-ಅಮೇಠಿ ಬದಲು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಟೂರ್ನಿ ಆರಂಭಕ್ಕೂ ಮುನ್ನ ಆರ್​ಸಿಬಿ ಸೇರಿಕೊಂಡ ಸಾನಿಯಾ ಮಿರ್ಜಾ

Twitter
Facebook
LinkedIn
WhatsApp
photo 1621801306185 8c0ccf9c8eb8 1

ಟೆನಿಸ್​ನಲ್ಲಿ ದಶಕಗಳ ಕಾಲ ಭಾರತವನ್ನು ಮುನ್ನಡೆಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ (Sania Mirza) ಕೆಲವು ದಿನಗಳ ಹಿಂದೆ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಆ ಬಳಿಕ ಹೊಸ ಇನ್ನಿಂಗ್ಸ್ ಆರಂಭಿಸಿದ್ದ ಸಾನಿಯಾ ಅವರನ್ನು ಕ್ರಿಕೆಟ್ ಜಗತ್ತು ಕೈಬೀಸಿ ಕರೆದಿತ್ತು. ಇದರ ಫಲವಾಗಿ ಭಾರತದಲ್ಲಿ ನೂತನವಾಗಿ ಆರಂಭವಾಗುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ (Women’s Premier League) ಸಾನಿಯಾ ಕಾಣಿಸಿಕೊಳ್ಳುತ್ತಿದ್ದು, ಅವರನ್ನು ಆರ್​ಸಿಬಿ (RCB) ತಂಡದ ಮಾರ್ಗದರ್ಶಕರಾಗಿ ಆಯ್ಕೆ ಮಾಡಲಾಗಿದೆ. ಇದೀಗ ಈ ಚೊಚ್ಚಲ ಟೂರ್ನಿ ಇಂದಿನಿಂದ ಆರಂಭವಾಗುತ್ತಿದ್ದು, ಟೂರ್ನಿ ಪ್ರಾರಂಭವಾಗುವ ಒಂದು ದಿನದ ಮೊದಲು, ಸಾನಿಯಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲದೆ ತಂಡವನ್ನು ಮುಖಾಮುಖಿ ಬೇಟಿ ಮಾಡಿ ಆಟಗಾರ್ತಿಯರ ಜೊತೆ ಕಾಲಕಳೆದಿದ್ದಾರೆ. ಇದೀಗ ಈ ವಿಡಿಯೋವನ್ನು ಆರ್​ಸಿಬಿ ಟ್ವೀಟ್ ಮಾಡಿದೆ.

ತಂಡದೊಂದಿಗೆ ಮಾತನಾಡಿದ ಸಾನಿಯಾ, ಕೆಲವು ದಿನಗಳ ಹಿಂದೆ ನಾನು ಟೆನಿಸ್​ಗೆ ನಿವೃತ್ತಿ ಘೋಷಿಸಿದೆ. ದೇಶದಲ್ಲಿ ಮಹಿಳಾ ಕ್ರೀಡೆಗಾಗಿ ಕೆಲಸ ಮಾಡುವುದು ತನ್ನ ಜೀವನದ ಗುರಿಯಾಗಿದೆ. ಮಹಿಳೆಯರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು. ಯಾರಾದರೂ ಏನಾದರೂ ಮಾತನಾಡಲು ಬಯಸಿದರೆ ಅವರ ನೆರವಿಗಾಗಿ ನಾನಿದ್ದೇನೆ. ನಾನು ನಿಮಗೆ ನ್ನ ನಂಬರ್ ನೀಡಬಲ್ಲೆ, ನಾನು ಇಲ್ಲಿ ಇಲ್ಲದಿದ್ದರೆ ನೀವು ನನ್ನೊಂದಿಗೆ ಚಾಟ್ ಮಾಡಬಹುದು ಎಂದಿದ್ದಾರೆ.

ಕಳೆದ ವರ್ಷ ಕಠಿಣವಾಗಿತ್ತು

ಈ ನಡುವೆ ಸಾನಿಯಾ ಆಟಗಾರ್ತಿಯರ ಜೊತೆ ಸಂವಾದ ಕೂಡ ನಡೆಸಿದರು. ಇದರಲ್ಲಿ ನಿವೃತ್ತಿಯ ಬಗ್ಗೆ ನಿರ್ಧರಿಸಲು ಎಷ್ಟು ಕಷ್ಟ ಎಂದು ಸಾನಿಯಾ ಅವರನ್ನು ನ್ಯೂಜಿಲೆಂಡ್‌ನ ಆಟಗಾರ್ತಿ ಸೋಫಿ ಡಿವೈನ್ ಕೇಳಿದರು. ಇದಕ್ಕೆ ಉತ್ತರಿಸಿದ ಸಾನಿಯಾ, ನಾನು ಸಿದ್ಧಳಾಗಿದ್ದೆ. ನನಗೂ ಒಬ್ಬ ಮಗನಿದ್ದು, ಕಳೆದ ಒಂದು ವರ್ಷ ಕಷ್ಟಗಳಿಂದ ಕೂಡಿದೆ. ನನಗೆ 3 ಶಸ್ತ್ರಚಿಕಿತ್ಸೆಗಳು ನಡೆದಿವೆ. ಆಸ್ಟ್ರೇಲಿಯನ್ ಓಪನ್ ನಂತರ ತಾನು ಆಡುವುದನ್ನು ನಿಲ್ಲಿಸಲು ಬಯಿಸಿದ್ದೆ ಎಂದು ಸಾನಿಯಾ ಹೇಳಿಕೊಂಡಿದ್ದಾರೆ.

ದುಬೈನಲ್ಲಿ ಟೆನಿಸ್ ವೃತ್ತಿಜೀವನಕ್ಕೆ ವಿದಾಯ

ಕಳೆದ ವಾರವಷ್ಟೇ ದುಬೈನಲ್ಲಿ 20 ವರ್ಷಗಳ ಟೆನಿಸ್ ವೃತ್ತಿಜೀವನಕ್ಕೆ ಸಾನಿಯಾ ವಿದಾಯ ಹೇಳಿದ್ದರು. ಕೊನೆಯ ಬಾರಿಗೆ 2023ರ ಆಸ್ಟ್ರೇಲಿಯನ್ ಓಪನ್​ನಲ್ಲಿ ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಸಾನಿಯಾ, ಫೈನಲ್​ನಲ್ಲಿ ಸೋತು ಪ್ರಶಸ್ತಿಯಿಂದ ವಂಚಿತರಾಗಿದ್ದರು. ತಮ್ಮ ಟೆನಿಸ್ ವೃತ್ತಿಜೀವನವನ್ನು 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಕೊನೆಗೊಳಿಸಿದ ಸಾನಿಯಾ, ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿಯಾಗಿದ್ದಾರೆ. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವದ 27 ನೇ ಶ್ರೇಯಾಂಕದ ಆಟಗಾರ್ತಿ ಕೂಡ ಆಗಿರುವ ಸಾನಿಯಾ, ಡಬಲ್ಸ್​ನಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿಯಾಗಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ