ಬುಧವಾರ, ಮೇ 15, 2024
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾಲ್ನಡಿಗೆಯಲ್ಲಿ ಮೊಟ್ಟ ಮೊದಲ ಬಾರಿಗೆ ದೇಶ ಸುತ್ತಿದ ಕೇರಳದ ದಂಪತಿ!

Twitter
Facebook
LinkedIn
WhatsApp
ಕಾಲ್ನಡಿಗೆಯಲ್ಲಿ ಮೊಟ್ಟ ಮೊದಲ ಬಾರಿಗೆ ದೇಶ ಸುತ್ತಿದ ಕೇರಳದ ದಂಪತಿ!

ಕೊಚ್ಚಿ: ಕೊಟ್ಟಾಯಂನ 53 ವರ್ಷದ ಬೆನ್ನಿ ಕೊಟ್ಟಾರತಿಲ್ ಮತ್ತು ಅವರ ಪತ್ನಿ ಮೊಲ್ಲಿ ಬೆನ್ನಿ (46) ಕಾಲಿನಲ್ಲಿಯೇ ದೇಶ ಸುತ್ತಿ ಈಗಷ್ಟೇ ಮರಳಿದ್ದಾರೆ. ಕನ್ಯಾಕುಮಾರಿಯಿಂದ ಕಳೆದ ವರ್ಷ ಡಿಸೆಂಬರ್ ನಲ್ಲಿ ಕಾಲ್ನಡಿಗೆ ಆರಂಭಿಸಿದ ಇವರು,  216 ದಿನ ಸುತ್ತಾಡಿ ಜುಲೈ 3, 2022 ರಂದು ತಮ್ಮ ನಡಿಗೆಯನ್ನು ಮುಕ್ತಾಯಗೊಳಿಸಿದ್ದಾರೆ.

ನಡಿಗೆ ಉತ್ತೇಜನ ಮತ್ತು  ಮಕ್ಕಳಿಲ್ಲದ ದಂಪತಿಯಲ್ಲಿ  ಜೊತೆಯಾಗಿ  ಸಾಗುವುದರಿಂದ ಆಗುವ ಹೊಸ ಜಾಗೃತಿ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಈ ದಂಡಯಾತ್ರೆ ಆರಂಭಿಸಿದ್ದಾಗಿ ಬೆನ್ನಿ ಹೇಳುತ್ತಾರೆ. ಆಂಧ್ರ ಪ್ರದೇಶದಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ಇವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಕೊರೋನಾ ಕಾರಣದಿಂದ ಕೆಲಸ ಬಿಟ್ಟಿದ್ದಾರೆ.

ಬೆನ್ನಿ ಮತ್ತು ಮೊಲ್ಲಿ ದೇಶಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಿದಾಗ ಪ್ರಯಾಣ ವೆಚ್ಚ ಭರಿಸಲು ಮೊಲ್ಲಿ ಚಿನ್ನವನ್ನು  ಅಡಮಾನವಿಟ್ಟು, ಸ್ನೇಹಿತರು, ಕುಟುಂಬಸ್ಥರಿಂದ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು. ಇಡೀ ಪ್ರಯಾಣದುದ್ದಕ್ಕೂ ಹಲವಾರು ಸವಾಲಗಳನ್ನು ಎದುರಿಸದ್ದಾರೆ. ಒಮ್ಮೆ ತಮಿಳುನಾಡಿನ ವಿಲ್ಲುಪುರಂನ ದೇವಾಲಯವೊಂದರಲ್ಲಿ ತಂಗಿದಾಗ ಮುಂಜಾನೆ 2 ಗಂಟೆ ಸಮಯದಲ್ಲಿ ದರೋಡೆ ಮಾಡಲು ಬಂದಿದ್ದ  ಕಳ್ಳನೊಬ್ಬನನ್ನು ನಮ್ಮ ಜೊತೆಗಿದ್ದ ನಾಯಿ ಬೊಗಳಿ ಕಳುಹಿಸಿತ್ತು ಎಂದು ಬೆನ್ನಿ ಹೇಳಿದರು.

ನಿಯಂತ್ರಣ ಕಳೆದುಕೊಂಡು ತಮ್ಮ ಕಡೆಗೆ ವೇಗವಾಗಿ ಬರುತ್ತಿದ್ದ ಲಾರಿಯಿಂದ ಸಂಭಾವ್ಯ ಅಪಾಯದಿಂದ ಪಾರಾದ ಬಗ್ಗೆಯೂ ಅವರು ನೆನಪಿಸಿಕೊಳ್ಳುತ್ತಾರೆ. ಬಿಹಾರದಲ್ಲಿ ತಂಗಲು ಜಾಗ ಸಿಗದೆ ಇಡೀ ರಾತ್ರಿ ಸ್ಮಶಾನದಲ್ಲಿ ಸಮಯ ಕಳೆದಿದ್ದಾಗಿ ಮೊಲ್ಲಿ ಹೇಳುತ್ತಾರೆ.

ವಿವಿಧ ರೆಸ್ಟೋರೆಂಟ್ ಗಳು, ಡಾಬಾಗಳಲ್ಲಿ ತರಹೇವಾರಿ ರೀತಿಯ ಆಹಾರ ಖಾದ್ಯ ಸೇವಿಸಿದ್ದಾಗಿ ಅವರು ತಿಳಿಸಿದ್ದಾರೆ. ಮೊಲ್ಲಿ ಮತ್ತು ಬೆನ್ನಿ ಯು ಟ್ಯೂಬ್ ಚಾನೆಲ್ ವೊಂದನ್ನು ಹೊಂದಿದ್ದಾರೆ. ತಾವು ಭೇಟಿ ನೀಡಿದ ಪ್ರದೇಶಗಳಲ್ಲಿ ಪಂಜಾಬಿನಲ್ಲಿರುವ ಗೋಲ್ಡನ್ ಟೆಂಬಲ್ ತುಂಬಾ ಇಷ್ಟವಾದ ಸ್ಥಳ ಎಂದು ಅವರು ತಿಳಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ