ಮಂಗಳವಾರ, ಮೇ 7, 2024
ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!-ಮಂಜೇಶ್ವರ: ಕಾರು ಮತ್ತು ಅಂಬುಲೆನ್ಸ್ ನಡುವೆ ಭೀಕರ ಅಪಘಾತ; ಮೂವರು ಸಾವು.!-ಬಂಟ್ವಾಳ: ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!-Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ.!-ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ-ಆಘಾತಕಾರಿ ಘಟನೆ; ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು..!-ತಮ್ಮ ಭಾವಚಿತ್ರವನ್ನು ಅಳವಡಿಸಿ ಮತ ಹಾಕುವಂತೆ ಪೋಸ್ಟ್ ; ಆಪ್ತನ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ದೂರು ದಾಖಲು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉದ್ಘಾಟನೆಗೆ ರಾಷ್ಟ್ರಪತಿ; ಜಂಬೂಸವಾರಿ ಮೆರವಣಿಗೆಗೆ ಮೋದಿ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು

Twitter
Facebook
LinkedIn
WhatsApp
ಉದ್ಘಾಟನೆಗೆ ರಾಷ್ಟ್ರಪತಿ; ಜಂಬೂಸವಾರಿ ಮೆರವಣಿಗೆಗೆ ಮೋದಿ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು

ಮೈಸೂರು: ಈ ಬಾರಿಯ ನಾಡಹಬ್ಬ ದಸರಾ (Mysuru Dasara) ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದಸರಾ ಇತಿಹಾಸದಲ್ಲೇ ಈ ಬಾರಿಯ ದಸರಾ ಅತ್ಯಂತ ಮಹತ್ವದ್ದಾಗಲಿದೆ. ದಸರಾ ಇತಿಹಾಸ ಪುಟಗಳಲ್ಲಿ ಈ ಬಾರಿಯ ದಸರಾ ಪ್ರಮುಖ ಸ್ಥಾನ ಪಡೆಯಲಿದೆ.

ಹೌದು, ನಾಡಹಬ್ಬ ದಸರಾ ಸೆಪ್ಟೆಂಬರ್ 26 ರಿಂದ ಆರಂಭವಾಗಲಿದೆ‌. ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು (Draupadi Murmu) ದಸರಾ ಉದ್ಘಾಟಿಸಲಿದ್ದಾರೆ. ಇಷ್ಟು ವರ್ಷ ನಾಡಿನ ಹಿರಿಯ ಸಾಹಿತಿಗಳು, ಸ್ವಾಮೀಜಿಗಳು, ವಿಚಾರವಾದಿಗಳು, ನಾಡು ನುಡಿಗೆ ಅಸಾಮಾನ್ಯ ಸೇವೆ ಸಲ್ಲಿಸಿದವರು ದಸರಾ ಉದ್ಘಾಟಿಸುತ್ತಿದ್ದರು. ಕಳೆದ ಬಾರಿ ಈ ಸಂಪ್ರದಾಯ ಮುರಿದ ನಾಡಿನ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರಿಂದ ದಸರಾ ಉದ್ಘಾಟಿಸಲಾಗಿತ್ತು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರೋ ರಾಜ್ಯ ಸರಕಾರ ರಾಷ್ಟ್ರಪತಿಗಳಿಂದ ದಸರಾ ಉದ್ಘಾಟಿಸುತ್ತಿದೆ. ದಸರಾ ಉದ್ಘಾಟನೆಗೆ ಬರಲು ರಾಷ್ಟ್ರಪತಿಗಳು ಕೂಡ ಅಧಿಕೃತವಾಗಿಯೆ ಸಮ್ಮತಿಸಿದ್ದಾರೆ. ಈ ಕಾರಣಕ್ಕೆ ಈ ಬಾರಿಯ ದಸರಾ ಮಹತ್ವದ್ದಾಗಿತ್ತು. 

ದಸರಾ ಉದ್ಘಾಟನೆ ವಿಚಾರಕ್ಕೆ ಮಾತ್ರವಲ್ಲ ದಸರಾ ಜಂಬೂ ಸವಾರಿಯ ವಿಚಾರಕ್ಕೂ ಈ ಬಾರಿಯ ದಸರಾ ಮಹತ್ವಪೂರ್ಣವಾದದ್ದು. ಕಾರಣ, ದಸರಾ ಜಂಬೂ ಸವಾರಿಯ ಮೆರವಣಿಗೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಲಿದ್ದಾರೆ. ಆನೆಯ ಮೇಲಿನ ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡಿ ತಾಯಿಗೆ ಮೋದಿ ಪುಷ್ಪಾರಾರ್ಚನೆ ನೆರವೇರಿಸಲಿದ್ದಾರೆ. ಪ್ರಧಾನ ಮಂತ್ರಿಯೊಬ್ಬರು ಚಿನ್ನದ ಅಂಬಾರಿಗೆ ಪುಷ್ಪಾರಾರ್ಚನೆ ಮಾಡ್ತಿರೋದು ಇದೇ ಮೊದಲು ಈ ಕಾರಣಕ್ಕೆ ಈ ಬಾರಿಯ ದಸರಾ ಐತಿಹಾಸಿಕ ದಾಖಲೆ ಆಗಲಿದೆ.

ಮೂರು ತಿಂಗಳ ಹಿಂದೆಯಷ್ಟೆ ವಿಶ್ವ ಯೋಗ ದಿನಕ್ಕಾಗಿ ಮೈಸೂರಿಗೆ ಬಂದಿದ್ದ ಪ್ರಧಾನಿ ಮೋದಿ, ಅಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡಿ ದರ್ಶನ ಪಡೆದಿದ್ದರು. ಅವತ್ತು ಇಲ್ಲಿನ ದಸರಾ ಬಗ್ಗೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯ ಮೆರವಣಿಗೆ ಬಗ್ಗೆ ಪ್ರಧಾನಿಗಳಿಗೆ ವಿವರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಪ್ರಧಾನಿಗೆ ಆಹ್ವಾನ ನೀಡಿತ್ತು. ಆಹ್ವಾನಕ್ಕೆ ಮೋದಿ ಒಪ್ಪಿದ್ದಾರೆ. 

ಇನ್ನೂ ಈ ಬಾರಿ ರಾಷ್ಟ್ರಪತಿಗಳು ಮತ್ತು ಪ್ರಧಾನಿ ಮೋದಿ ಇಬ್ಬರು ನಾಡಹಬ್ಬಕ್ಕೆ ಮೈಸೂರಿಗೆ ಬರ್ತಿರೋ ಕಾರಣ ದಸರಾ ವೈಭೋಗ ಹೆಚ್ಚಾಗಿದೆ. ಕಳೆದ ಬಾರಿಗಿಂತಾ ಅತ್ಯಂತ ಅದ್ಧೂರಿಯಾದ ವಿದ್ಯುತ್ ಅಲಂಕಾರವನ್ನು ಮೈಸೂರಿನಾದ್ಯಂತ ಮಾಡಲು ನಿರ್ಧರಿಸಲಾಗಿದೆ. ಒಟ್ಟು ನಗರದ ಒಳಗೆ 125 ಕಿ.ಮೀ ವಿದ್ಯುತ್ ಅಲಂಕಾರ ನಡೆಯಲಿದೆ. ಸ್ವಾತಂತ್ರ್ಯ ಹೋರಾಟಗಾರರು, ಮೈಸೂರು ಅರಸರು, ಪುನೀತ್ ರಾಜಕುಮಾರ್ ಸೇರಿದಂತೆ ಹಲವು ಗಣ್ಯರ ಭಾವಚಿತ್ರಗಳು ವಿದ್ಯುತ್ ಬಲ್ಭಗಳಲ್ಲಿ ಮೂಡಲಿವೆ. ಇದರಿಂದ ದಸರಾ ರಂಗು ಹೆಚ್ಚಾಗಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಸಬ್ ರಿಜಿಸ್ಟರ್ಗಳ ರಿಜಿಸ್ಟ್ರೇಷನ್

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ