ಗುರುವಾರ, ಮೇ 2, 2024
ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ-ಪೆನ್ ಡ್ರೈವ್ ಪ್ರಕರಣ: ಅಪ್ಪ- ಮಗನಿಗೆ ನೋಟಿಸ್!-ತೆಲಂಗಾಣದ ನಿಜಾಮಾಬಾದ್ ಕ್ಷೇತ್ರದ ಚುನಾವಣಾ AICC ಉಸ್ತುವಾರಿಯಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇಮಕ-ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!-Commercial LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ-ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸ್ಕೂಲ್ ಬಸ್ಸಿನೊಳಗೆ ಉಸಿರುಗಟ್ಟಿ ಬಾಲಕಿ ಸಾವು ಪ್ರಕರಣ- ಶಾಲೆ ಮುಚ್ಚಲು ಆದೇಶ

Twitter
Facebook
LinkedIn
WhatsApp
ಸ್ಕೂಲ್ ಬಸ್ಸಿನೊಳಗೆ ಉಸಿರುಗಟ್ಟಿ ಬಾಲಕಿ ಸಾವು ಪ್ರಕರಣ- ಶಾಲೆ ಮುಚ್ಚಲು ಆದೇಶ

ದೋಹಾ: ಉಸಿರುಗಟ್ಟಿ ಶಾಲಾ ವಾಹನ (School Bus) ದಲ್ಲಿಯೇ 4 ವರ್ಷದ ಬಾಲಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಖಾಸಗಿ ನರ್ಸರಿ ಶಾಲೆಯನ್ನು ಮುಚ್ಚಲು ಆದೇಶ ನೀಡಲಾಗಿದೆ.

ಮಿನ್ಸಾ ಮರಿಯಮ್ ಜಾಕೋಬ್ (4) ಮೃತ ದುರ್ದೈವಿ ಬಾಲಕಿ. ಈಕೆ ಕೇರಳ (Kerala) ಮೂಲದ ಅಭಿಲಾಷ್ ಜಾಕೋಬ್ ಮತ್ತು ಸೌಮ್ಯಾ ದಂಪತಿಯ ಎರಡನೇ ಮಗಳು. ಸೆಪ್ಟೆಂಬರ್ 11 ರಂದು ಮಿನ್ಸಾ ಹುಟ್ಟುಹಬ್ಬ (Birthday) ವಾಗಿದ್ದು, ಈ ದಿನವೇ ಆಕೆ ಕತಾರ್ ನ ಶಾಲಾ ಬಸ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಸಂಬಂಧ ಇದೀಗ ಕತಾರ್ ನ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವಾಲಯವು ಈ ಆದೇಶ ಹೊರಡಿಸಿದೆ. ಪ್ರಾಥಮಿಕ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

 

ಏನಿದು ಘಟನೆ?: ವಕ್ರಾದ ಶಿಶುವಿಹಾರದಲ್ಲಿ ಓದುತ್ತಿದ್ದ ಮಿನ್ಸಾ, ಅದೇ ಶಾಲೆಯ ಬಸ್‍ನಲ್ಲಿಯೇ ಬಂಧಿಯಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಈಕೆ ಭಾನುವಾರ ಬೆಳಗ್ಗೆ ತನ್ನ ಶಾಲಾ ಬಸ್‍ನಲ್ಲಿ ಶಾಲೆಗೆ ಹೋಗಿದ್ದಳು. ಹಿಂದೆ ಕುಳಿತಿದ್ದ ಆಕೆ ದಾರಿ ಮಧ್ಯೆಯೇ ನಿದ್ದೆ ಮಾಡಿದ್ದಾಳೆ. ಆದರೆ ಆಕೆ ನಿದ್ದೆ ಮಾಡಿದ್ದನ್ನು ಬಸ್ (Bus) ಸಿಬ್ಬಂದಿ ಯಾರೂ ಗಮನಿಸಿರಲಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಯಲ್ಲಿ ಇಳಿಸಿದ ಸಿಬ್ಬಂದಿ, ಶಾಲಾ ವಾಹನವನ್ನು ಬಿಟ್ಟು ಹೋಗಿದ್ದಾರೆ. 

ಮಧ್ಯಾಹ್ನ ತರಗತಿಗಳು ಮುಗಿದ ನಂತರ ಡ್ರೈವರ್ ಮತ್ತು ಕಂಡಕ್ಟರ್ ಮಕ್ಕಳನ್ನು ಅವರ ಮನೆಗೆ ಬಿಡಲು ಹಿಂದಿರುಗಿದಾಗ, ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. ಕೂಡಲೇ ಆಕೆಯನ್ನು ವಕ್ರಾ ಆಸ್ಪತ್ರೆ (Hospital) ಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಶಾಲೆಯಲ್ಲಿ ಬಸ್ ಬಿಟ್ಟು ಡ್ರೈವರ್ ಹಾಗೂ ನಿರ್ವಾಹಕ ‌ ಡೋರ್‌, ವಿಂಡೋಸ್ ಕ್ಲೋಸ್ ಮಾಡಿದ್ದಾರೆ. ಇದರಿಂದ ನಿದ್ದೆಗೆ ಜಾರಿದ್ದ ಬಾಲಕಿಗೆ ಉಸಿರಾಡಲು ಸಾಧ್ಯವಾಗಿಲ್ಲ.

weather

ಕತಾರ್ ನಾದ್ಯಂತ ಗರಿಷ್ಠ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ಮತ್ತು 43 ಡಿಗ್ರಿ ಸೆಲ್ಸಿಯಸ್ ನಡುವೆ ಇತ್ತು ಎಂದು ಕತಾರ್ ಟ್ರಿಬ್ಯೂನ್ ವರದಿ ಮಾಡಿದೆ. ಇಂತಹ ವಾತಾವರಣದಲ್ಲಿ ಬಿಸಿಯಲ್ಲಿ ಬಾಲಕಿ 4 ಗಂಟೆಗಳ ಕಾಲ ಉಸಿರಾಡಲಾಗದೇ ಒದ್ದಾಡಿದ್ದಾಳೆ ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !! Twitter Facebook LinkedIn WhatsApp ಮಂಗಳೂರು:

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !. Twitter Facebook LinkedIn WhatsApp ಮಂಗಳೂರು: 2024 ಲೋಕಸಭಾ ಚುನಾವಣೆಯಲ್ಲಿ ಮಂಗಳೂರು

ಅಂಕಣ