ಕರೋನ ವೈರಸ್ ನ ಎರಡನೇ ಅಲೆಯಿಂದ ನಮ್ಮ ದೇಶ ತತ್ತರಿಸಿ ಹೋಗುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ, ಇಂತಹ ಸಂದರ್ಭದಲ್ಲಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತ್ಯಮೂಲ್ಯ. ಇದಕ್ಕಾಗಿ ನಾವೆಲ್ಲಾ ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಅನಿವಾರ್ಯ. ಹಾಗೆಯೇ ವ್ಯಾಕ್ಸಿನ್ ಹಾಕಿಸಿಕೊಂಡಾದ ಮೇಲೆಯೂ ನಮ್ಮ ಕೆಲವು ಕರ್ತವ್ಯಗಳಿವೆ, ಅವುಗಳ ಬಗ್ಗೆ ಇಲ್ಲಿ ಓದಿ…
ವ್ಯಾಕ್ಸಿನ್ ಹಾಕಿಸಿಕೊಂಡ ನಂತರ ಸಾಮಾನ್ಯವಾಗಿ ತಲೆನೋವು, ಮೈ ಕೈ ನೋವು, ಜ್ವರ ಬರುವುದು ಇಂತಹ ಸೈಡ್ ಎಫೆಕ್ಟ್ಸ್ ಅಥವಾ ಲಕ್ಷಣಗಳು ಕಂಡುಬರುತ್ತಿದ್ದು ಅವುಗಳಿಗೆ ಭಯ ಪಡುವ ಅವಶ್ಯಕತೆ ಇಲ್ಲ. ಬದಲಾಗಿ ಕೆಲವು ಡಯಟ್ ಗಳನ್ನು ಪಾಲನೆ ಮಾಡುವುದರಿಂದ ಈ ಸೈಡ್ ಎಫೆಕ್ಟ್ಸ್ ಪರಿಣಾಮ ಕಡಿಮೆಯಾಗುತ್ತವೆ ಜೊತೆಗೆ ವ್ಯಾಕ್ಸಿನ್ ನ ಪೂರ್ತಿ ಉಪಯೋಗ ದೇಹದ ಮೇಲಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಹಾಗಾದ್ರೆ ವ್ಯಾಕ್ಸಿನ್ ಹಾಕಿಸಿಕೊಂಡಾದ ನಾವು ಏನೇಣು ಮಾಡಬೇಕು, ಏನೇಣು ಮಾಡಬಾರದು, ಏನೇನು ಡಯಟ್ ಮಾಡಬೇಕೆಂದು ನೋಡೋಣ ಬನ್ನಿ…
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಳ್ಳೆಯ ಇಮ್ಮ್ಯೂನಿಟಿ ಬೂಸ್ಟರ್ ಎಂದು ಪರಿಗಣಿಸಲಾಗುತ್ತದೆ. ಈರುಳ್ಳಿಯಲ್ಲಿ ವಿಟಮಿನ್ ಸಿ ಅಧಿಕವಾಗಿದ್ದರೆ, ಹಸಿ ಬೆಳ್ಳುಳ್ಳಿಯಲ್ಲಿ ಮ್ಯಾಂಗನಿಸ್, ವಿಟಮಿನ್ ಬಿ-6, ಫೈಬರ್, ಸೆಲೆನಿಯಮ್, ವಿಟಮಿನ್ ಸಿ ಹೇರಳವಾಗಿರುತ್ತವೆ ಇನ್ನೂ ಸ್ವಲ್ಪ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಕಾಪರ್, ಪೊಟ್ಯಾಶಿಯಂ, ಐರನ್ ಮತ್ತು ಫಾಸ್ಪರಸ್ ಇರುತ್ತದೆ. ಇದರೊಂದಿಗೆ Antioxidants ನ ಅಂಶ ಕೂಡ ಅಧಿಕವಾಗಿರುತ್ತದೆ. ಹೀಗಾಗಿ ನೀವು ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಊಟದಲ್ಲಿ ಹೇರಳವಾಗಿ ಬಳಸಿ.
ಯಾವ ಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೋ ಆ ಹಣ್ಣುಗಳು ವ್ಯಾಕ್ಸಿನ್ ನ ಸೈಡ್ ಎಫೆಕ್ಟ್ಸ್ ಕಡಿಮೆ ಮಾಡುತ್ತವೆ. ಕಲ್ಲಂಗಡಿ, ಕರಬುಜಾ, ಚಿಕ್ಕು, ಪೈನಾಪಲ್, ಮಾವು, ಬಾಳೆಹಣ್ಣು ಇತ್ಯಾದಿ ಇವುಗಳನ್ನು ತಿನ್ನುವದರೊಂದಿಗೆ ದೇಹದಲ್ಲಿ ನೀರಿನ ಅಂಶವನ್ನು ಮೇಂಟೈನ್ ಮಾಡಿಕೊಳ್ಳಬೇಕು. ವೈದ್ಯರ ಪ್ರಕಾರ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೊದಲು ಹಾಗೂ ನಂತರ ದೇಹದಳ್ಳಿ ನೀರಿನಂಶವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳುತ್ತಾರೆ.
ಗಂಭೀರ ಪ್ರಮಾಣದ ಸೈಡ್ ಎಫೆಕ್ಟ್ಸ್ ನಿಂದ ರಕ್ಷಿಸಿಕೊಳ್ಳಲು ನಮ್ಮ ನಿತ್ಯದ ಡಯಟ್ ನಲ್ಲಿ ಹಸಿರು ತರಕಾರಿಗಳು ಅವಶ್ಯವಾಗಿ ಇರಲೇಬೇಕು. ಇವುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ಪೋಷಕಾಂಶಗಳ ಆಗರವಾಗಿವೆ. ಹಸಿರು ತರಕಾರಿಗಳನ್ನು ಸಲಾಡ್ ಮಾಡಿಕೊಂಡು, ಸೂಪ್ ಮಾಡಿಕೊಂಡು ಅಥವಾ ಊಟದೊಂದಿಗೆ ಸೇರಿಸಿ ತಿನ್ನಬಹುದು. ಎಷ್ಟು ಹೆಚ್ಚು ಹಸಿರು ತರಕಾರಿ ತಿನ್ನುತ್ತಿರೋ ಅಷ್ಟು ಹೆಚ್ಚು ಅರೋಗ್ಯವಂತರಾಗಿರುತ್ತೀರಿ.
ಇದು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದಲ್ಲದೇ, ದೇಹದ ಉದ್ವೇಗವನ್ನು ಕಡಿಮೆ ಮಾಡುವುದಲ್ಲದೆ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಹೆಚ್ಚಾನು ಹೆಚ್ಚು ಮನೆಗಳಲ್ಲಿ ಅರಿಶಿಣವನ್ನು ಉಪಯೋಗಿಸುತ್ತಿರುತ್ತಾರೆ. ಅರಿಶಿಣವನ್ನು ಕಷಾಯದಲ್ಲೂ ಹಾಕಿ ಕುಡಿಯಬಹುದು, ಹಾಲಿನೊಂದಿಗೆ ಸೇರಿಸಿ ಕುಡಿಯಬಹುದು ಹಾಗೂ ಪುದಿನ ಮತ್ತು ಅರಿಶಿಣ ಸೇರಿಸಿ ಚಟ್ನಿ ಮಾಡಿ ಊಟದೊಂದಿಗೆ ತಿನ್ನಲೂಬಹುದು.
ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೊದಲು ಮತ್ತು ನಂತರ ಸಾಕಷ್ಟು ನೀರು ಕುಡಿಯಬೇಕು. ನೀರು ಹೆಚ್ಚು ಕುಡಿದಷ್ಟು ದೇಹ ಆಕ್ಟಿವ್ ಇದ್ದು ಸೈಡ್ ಎಫೆಕ್ಟ್ಸ್ ನಿಂದ ರಕ್ಷಿಸುತ್ತದೆ. ಆದರೆ ಕುಡಿಯುವ ನೀರು ಬಹಳಷ್ಟು ಕೋಲ್ಡ್ ಇರಕೂಡದು, ಬದಲಿಗೆ ಸಾಮಾನ್ಯ ತಾಪಮಾನ ಹೊಂದಿರಬೇಕು. ಹಾಗೂ ನಿರಷ್ಟೇ ಅಲ್ಲದೇ ಮನೆಯಲ್ಲಿಯೇ ತಯಾರಿಸಿದ ಕಷಾಯ, ಜ್ಯೂಸ್, ಹರ್ಬಲ್ ಟೀ, ಹಾಗೂ ವಿವಿಧ ಶೇಕ್ ಗಳನ್ನು ಸಹ ಕುಡಿಯಬಹುದು.
ಫೈಬರ್ ರಿಚ್ ಆಹಾರ ಧಾನ್ಯಗಳನ್ನು ಊಟದಲ್ಲಿ ಹೆಚ್ಚು ಬಳಸುವದರಿಂದ ಕೂಡ ಸೈಡ್ ಎಫೆಕ್ಟಗಳನ್ನು ತಡೆಯಬಹುದಾಗಿದೆ. ಅವುಗಳಲ್ಲಿ ಬ್ರೌನ್ ರೈಸ್, ಸಾಬು ಅಕ್ಕಿ, ಪಾಪ್ ಕಾರ್ನ್, ರಾಗಿ, ಜೋಳ, ಓಟ್ಸ್ ಇತ್ಯಾದಿಗಳು.
ವ್ಯಾಕ್ಸಿನ್ ತೆಗೆದುಕೊಳ್ಳುವ ಮುನ್ನಾ ದಿನ ಬಹಳಷ್ಟು ನಿದ್ರೆ ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ ಹೆಚ್ಚು ನಿದ್ರೆ ಮಾಡುವದರಿಂದ ದೇಹದ ಇಮ್ಮ್ಯೂನಿಟಿ ಪವರ್ ಹೆಚ್ಚಾಗುತ್ತದೆ. ಅಲ್ಲದೇ ವ್ಯಾಕ್ಸಿನ್ ಹಾಕಿಸಿಕೊಂಡ ಮೇಲೆ ಕೂಡ ಚೆನ್ನಾಗಿ ನಿದ್ರೆ ಮಾಡಬೇಕು. ಏಕೆಂದರೆ ದೇಹಕ್ಕೆ ಸುಸ್ತು ಆಯಾಸ ಮೈ ಕೈ ನೋವು ಆಗುವದನ್ನು ನಿದ್ರೆ ಮಾಡುವದರಿಂದ ತಪ್ಪಿಸಿಕೊಳ್ಳಬಹುದು.
ಒಟ್ಟಾರೆಯಾಗಿ ಚೆನ್ನಾಗಿ ಊಟ ಮಾಡಿ, ಸಾಧ್ಯವಾದಷ್ಟು ಮಸಾಲೆಭರಿತ ಊಟದಿಂದ ದೂರ ಇರಿ. ಒಳ್ಳೆ ಆಹಾರ, ಪೇಯ ನಿಮ್ಮನ್ನು ಬರೀ ಕೊರೋನ ಮಾತ್ರವಲ್ಲ, ಇತರ ಕಾಯಿಲೆಗಳಿಂದಲೂ ದೂ ಇಡುತ್ತವೆ. ಮದ್ಯಪಾನ, ಸಿಗರೇಟು ಇಂಥ ಕೆಟ್ಟ ಚಟಗಳಿಂದ ದೂರ ಇರುವುದೇ ಒಳ್ಳೆಯದು. (ವ್ಯಾಕ್ಸಿನ್ ಸಲುವಾಗಿ ಅಲ್ಲ, ಆ ಚಟಗಳು ಯಾವಾಗಲೂ ಕೆಟ್ಟದ್ದೇ ಅದಕ್ಕಾಗಿ). ಉಳಿದಂತೆ ಮಾಸ್ಕ್ – ಸಾಮಾಜಿಕ ಅಂತರ ಸದ್ಯಕ್ಕೆ ತಪ್ಪಿದ್ದಲ್ಲ.