ಸೋಮವಾರ, ಏಪ್ರಿಲ್ 29, 2024
ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೆಚ್ಚುತ್ತಿರುವ ತಾಪಮಾನ ; ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚರಲಿದೆ ಬಿಸಿಲು..!

Twitter
Facebook
LinkedIn
WhatsApp
ಹೆಚ್ಚುತ್ತಿರುವ ತಾಪಮಾನ ; ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚರಲಿದೆ ಬಿಸಿಲು..!

ಬೇಸಿಗೆ ಕಾಲ ಆರಂಭವಾಗಿದೆ. ದೇಶಾದ್ಯಂತ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಈ ಮಧ್ಯೆ ಹವಾಮಾನ ಇಲಾಖೆ (India Meteorological Department) ಬಿಸಿಲಿನ ಬಗ್ಗೆ ಎಚ್ಚರಿಕೆ ನೀಡಿದ್ದು, ಈ ಬಾರಿಯ ಮಾರ್ಚ್‌ನಿಂದ ಮೇ ನಡುವಿನ ಬೇಸಿಗೆಯ ತಿಂಗಳುಗಳು ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗಿರುವ ಸಾಧ್ಯತೆಯಿದೆ ಎಂದು ಹೇಳಿದೆ. ಎಲ್ ನಿನೊ (El Nino) ಪರಿಣಾಮದಿಂದಾಗಿ ಬಿಸಿ ಗಾಳಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ (Weather Report).

ಆದಾಗ್ಯೂ ದೆಹಲಿಯನ್ನು ಒಳಗೊಂಡಿರುವ ವಾಯವ್ಯದ ಕೆಲವು ಪ್ರದೇಶಗಳಲ್ಲಿ ಉಷ್ಣತೆ ರಾತ್ರಿಯ ಹೊತ್ತು ಸಾಮಾನ್ಯ ಅಥವಾ ಅದಕ್ಕಿಂತ ಕಡಿಮೆ ಮಟ್ಟದಲ್ಲಿ ಕಂಡು ಬರಲಿದೆ ಹಾಗೂ ಹಗಲಿನಲ್ಲಿ ಇದು ಗರಿಷ್ಠ ಮಟ್ಟವನ್ನು ತಲುಪಲಿದೆ. ವಿಶೇಷವಾಗಿ ಮಾರ್ಚ್ ಮೊದಲ 15 ದಿನಗಳಲ್ಲಿ ಈ ಪ್ರದೇಶಗಳಲ್ಲಿ ಮಳೆ ಸುರಿಯುವ ಸಾಧ್ಯತೆಯೂ ಇದೆ ಎಂದು ಐಎಂಡಿ ಊಹಿಸಿದೆ.

ಐಎಂಡಿ ಸಾಮಾನ್ಯವಾಗಿ ಪ್ರತಿವರ್ಷ ಮಾರ್ಚ್ ಮೊದಲ ವಾರದಲ್ಲಿ ಬೇಸಿಗೆ ಋತುವಿನ ಮುನ್ಸೂಚನೆಯನ್ನು ನೀಡುತ್ತದೆ. ಈ 12 ವಾರಗಳ ಅವಧಿಯಲ್ಲಿನ ತಾಪಮಾನವು ಸಾರ್ವಜನಿಕರ ಆರೋಗ್ಯ ಮತ್ತು ಕೃಷಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಉದಾಹರಣೆಗೆ ಮಾರ್ಚ್‌ನಲ್ಲಿ ಕಂಡು ಬರುವ ಅಸಾಮಾನ್ಯ ಬಿಸಿಯ ವಾತಾವರಣ ಅಥವಾ ಅತಿಯಾದ ಮಳೆಯು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊಯ್ಲಿಗೆ ಬರುವ ಹಲವು ಚಳಿಗಾಲದ ಬೆಳೆಗಳಿಗೆ ಹಾನಿ ಉಂಟು ಮಾಡುತ್ತದೆ.

ರೈತರಿಗೆ ಎಚ್ಚರಿಕೆ “ವಾಯವ್ಯ ಭಾರತದಲ್ಲಿ ಮಾರ್ಚ್ 15ರ ವರೆಗೆ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯ ಕಾರಣವೆಂದರೆ ಮೋಡ ಕವಿದ ಆಕಾಶ ಮತ್ತು ಸತತ ಮಳೆ” ಎಂದು ಐಎಂಡಿ ಮಹಾನಿರ್ದೇಶಕ ಎಂ. ಮೊಹಾಪಾತ್ರ ತಿಳಿಸಿದ್ದಾರೆ. ಈ ಅಕಾಲಿಕ ಮಳೆ ಕೆಲವು ಬೆಳೆಗಳಿಗೆ ಹಾನಿಯನ್ನೂ ಉಂಟು ಮಾಡುವ ಸಾಧ್ಯತೆ ಇದೆ. ʼʼಮುಂದಿನ ಎರಡು ವಾರಗಳಲ್ಲಿ ವಾಯವ್ಯ ಭಾಗದ ಕೆಲವು ಕಡೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಇದು ಗೋಧಿ ಬೆಳೆಗೆ ಹಾನಿ ಉಂಟು ಮಾಡಲಿದೆ. ಇನ್ನು ಕೆಲವು ಕಡೆ ಸುರಿಯುವ ಸಾಧಾರಣ ಮಳೆಯಿಂದ ಅನುಕೂಲವಾಗಲಿದೆ. ಮಳೆಯ ಬಗ್ಗೆ ರೈತರು ಈಗಲೇ ಮುಂಜಾಗರೂಕತೆ ವಹಿಸಿಕೊಳ್ಳುವುದು ಉತ್ತಮʼʼ ಎಂದು ಸಲಹೆ ನೀಡಿದ್ದಾರೆ.

ಮಳೆಯ ಬಳಿಕ ದೇಶದ ಬಹುತೇಕ ಭಾಗಗಳಲ್ಲಿ ಉಷ್ಣತೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಎಲ್‌ ನಿನೊ ಪರಿಣಾಮ ಭಾರತ ಮಾತ್ರವಲ್ಲ ಜಬತ್ತಿನಾದ್ಯಂತ ಕಂಡು ಬರಲಿದೆ ಎಂದು ಅವರು ವಿವರಿಸಿದ್ದಾರೆ. ʼʼಸದ್ಯ ಎಲ್‌ ನಿನೊ ದುರ್ಬಲವಾಗಿದೆ. ಅದಾಗ್ಯೂ ಇದರ ಪರಿಣಾಮ ಮೇ ತನಕ ಮುಂದುವರಿಯಲಿದೆ. ಆದ್ದರಿಂದ ಈ ಬಾರಿ ಬಿರು ಬೇಸಗೆಯ ನಿರೀಕ್ಷೆ ಇದೆʼʼ ಎಂದು ಮೊಹಾಪಾತ್ರ ಹೇಳಿದ್ದಾರೆ.

ದೇಶದ ತಾಪಮಾನವನ್ನು ಗಣನೆಗೆ ತೆಗೆದುಕೊಂಡರೆ ಇದು 1901ರ ನಂತರದ ಎರಡನೇ ಅತಿ ಹೆಚ್ಚು ಬೆಚ್ಚಗಿನ ಫೆಬ್ರವರಿ ಎಂದು ಗುರುತಿಸಿಕೊಂದಿದೆ ಎಂದು ಸರ್ಕಾರಿ ಹವಾಮಾನ ಸಂಸ್ಥೆ ವರದಿ ಮಾಡಿದೆ. ಫೆಬ್ರವರಿಯಲ್ಲಿ ಕಂಡುಬಂದ ತೀವ್ರ ಮಳೆಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ