ಮಂಗಳವಾರ, ಮೇ 14, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವೇಗವಾಗಿ ಹರಡುವ ಡೆಲ್ಟಾ ತಳಿ ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ.

Twitter
Facebook
LinkedIn
WhatsApp
ಮಹಾರಾಷ್ಟ್ರದಲ್ಲಿ ಡೆಲ್ಟಾ ರೂಪಾಂತರ ವೈರಸ್ ಪತ್ತೆ!

ವಿಶ್ವದಾದ್ಯಂತ ಕೊರೊನಾ ವೈರಸ್ನ ಡೆಲ್ಟಾ ರೂಪಾಂತರ ತಳಿಯು ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಜಗತ್ತು ಅಪಾಯದ ಸನ್ನಿವೇಶವನ್ನು ಎದುರಿಸುವಂತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಗೆಬ್ರೇಷಿಯಸ್ ಎಚ್ಚರಿಸಿದ್ದಾರೆ

ಕಡಿಮೆ ಪ್ರಮಾಣದಲ್ಲಿ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಆಸ್ಪತ್ರೆಗಳು ಮತ್ತೆ ಕೋವಿಡ್ ರೋಗಿಗಳಿಂದ ಭರ್ತಿಯಾಗುವ ಭಯಾನಕ ದೃಶ್ಯಗಳು ಸಾಮಾನ್ಯವಾಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡೆಲ್ಟಾ ಸೇರಿದಂತೆ ತೀವ್ರವಾಗಿ ಹರಡುವಂತಹ ರೂಪಾಂತರ ತಳಿಗಳು ಹಲವು ರಾಷ್ಟ್ರಗಳಲ್ಲಿ ವ್ಯಾಪಕವಾಗಲಿವೆ. ಈ ತಳಿಯಿಂದಾಗಿ ಕಾಣಿಸಿಕೊಂಡಿರುವ ಕೋವಿಡ್-೧೯ ಪಿಡುಗಿನ ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಈಗ ನಾವಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಯಾವ ದೇಶವೂ ಡೆಲ್ಟಾ ರೂಪಾಂತರ ತಳಿಯ ಕಾಟದಿಂದ ಹೊರಬಂದಿಲ್ಲ. ರೂಪಾಂತರಗೊಳ್ಳುತ್ತ, ವೇಗವಾಗಿ ಹರಡುವ ಈ ತಳಿಯ ವಿರುದ್ಧ ಹೋರಾಡಲು ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವುದು ಅಗತ್ಯ. ಸೋಂಕಿನ ಪರೀಕ್ಷೆ ಹೆಚ್ಚಿಸಬೇಕು. ಆರಂಭದಲ್ಲೇ ಸೋಂಕು ಪತ್ತೆ ಮಾಡುವುದು, ಸೋಂಕಿತರ ಬಗ್ಗೆ ನಿಗಾವಹಿಸುವುದು, ಸೋಂಕಿತರನ್ನು ಪ್ರತ್ಯೇಕಿಸುವುದು ಮತ್ತು ಚಿಕಿತ್ಸೆ ನೀಡುವುದನ್ನು ನಿರಂತರವಾಗಿ ಮುಂದುವರಿಸುವಂತಹ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ವ್ಯಕ್ತಿಗತ ಅಂತರ ಕಾಪಾಡುವುದು, ಜನದಟ್ಟಣೆಯಾಗುವುದನ್ನು ತಪ್ಪಿಸುವುದು. ಒಳಾಂಗಣ ಪ್ರದೇಶವನ್ನು ಗಾಳಿಯಾಡುವಂತೆ ನೋಡಿಕೊಳ್ಳುವುದು, ಇಂಥ ಸಾಮಾಜಿಕ ಕ್ರಮಗಳ ಮೂಲಕ ಡೆಲ್ಟಾ ರೂಪಾಂತರ ತಳಿಯ ಅಪಾಯದಿಂದ ರಕ್ಷಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

100 ಶೇಕಡ ಫಲಿತಾಂಶ - ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು