ಮಂಗಳವಾರ, ಮೇ 14, 2024
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಚ್ಛೇದಿತ ಉದ್ಯಮಿಗಿಂತ ಮುಂಚೆ ಮಾನುಷಿ ಚಿಲ್ಲರ್ ಮತ್ತೊಬ್ಬ ಹುಡುಗನ ಜೊತೆ ಡೇಟಿಂಗ್

Twitter
Facebook
LinkedIn
WhatsApp
ವಿಚ್ಛೇದಿತ ಉದ್ಯಮಿಗಿಂತ ಮುಂಚೆ ಮಾನುಷಿ ಚಿಲ್ಲರ್ ಮತ್ತೊಬ್ಬ ಹುಡುಗನ ಜೊತೆ ಡೇಟಿಂಗ್

ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡು ರಾಷ್ಟ್ರ ಮಟ್ಟದ ಗಮನ ಸೆಳೆದ ಮಾನುಷಿ ಚಿಲ್ಲರ್, ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಾಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮಾನುಷಿ, ಇದೀಗ ವಿಚ್ಛೇದಿತ ಉದ್ಯಮಿ ನಿಖಿತ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಜಿರೊಧಾ ಕಂಪನಿಯ ಸಹ ಸಂಸ್ಥಾಪಕ ಆಗಿರುವ ನಿಖಿತ್ ಮತ್ತು ಮಾನಷಿ ಇತ್ತೀಚೆಗಷ್ಟೇ ರಿಷಿಕೇಶಕ್ಕೆ ಒಟ್ಟಾಗಿ ಭೇಟಿ ಕೊಟ್ಟಿದ್ದಾರೆ ಎಂದೂ ವರದಿಯಾಗಿದೆ.

ನಿಖಿಲ್ ಕಾಮತ್ ಈ ಮುಂಚೆಯೇ ಅಮಂಡಾ ಪುರವಂಕರಾ ಎಂಬುವವ ಜೊತೆ 2019 ಏಪ್ರಿಲ್ 18 ರಂದು ಮದುವೆಯಾಗಿದ್ದರು. ಇವರ ದಾಂಪತ್ಯ ಜೀವನ ತುಂಬಾ ದಿನಗಳ ಕಾಲ ಉಳಿಯಲಿಲ್ಲ. 2021ರಲ್ಲಿ ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡರು. ಡಿವೋರ್ಸ್ ಸಿಗುತ್ತಿದ್ದಂತೆಯೇ ಮಾನಷಿ ಜೊತೆ ನಿಖಿಲ್ ಡೇಟಿಂಗ್ ನಲ್ಲಿ ತೊಡಗಿದರು ಎಂದು ಹೇಳಲಾಗುತ್ತಿದೆ. 

ನಿಖಿಲ್ ಗಿಂತ ಮುಂಚೆಯೇ ಮಾನಷಿ ಬೇರೆ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿಯೂ ಗುಟ್ಟಾಗಿ ಇರಲಿಲ್ಲ. ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ರೋಹಿತ್ ಖಾಂದೇಲವಾಲ್ ಎಂಬುವವರ ಜೊತೆ ಮಾನಷಿ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಆಗಾಗ್ಗೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು ಎನ್ನುವ ಗಾಸಿಪ್ ಕೂಡ ಇತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ