ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ವಾರೆ ವ್ಹಾ ಬೆಂಗಳೂರು-ಉಡುಪಿ ರೈಲುಮಾರ್ಗ ಎಷ್ಟು ಚೆಂದ, ಡ್ರೋನ್ ಸೆರೆಹಿಡಿದ ವಿಡಿಯೋ ವೈರಲ್

Twitter
Facebook
LinkedIn
WhatsApp
ವಾರೆ ವ್ಹಾ ಬೆಂಗಳೂರು-ಉಡುಪಿ ರೈಲುಮಾರ್ಗ ಎಷ್ಟು ಚೆಂದ, ಡ್ರೋನ್ ಸೆರೆಹಿಡಿದ ವಿಡಿಯೋ ವೈರಲ್

ರೈಲು ಪ್ರಯಾಣ ಎಂಥವರಿಗಾದರೂ ಖುಷಿ (Happy)ಯನ್ನು ನೀಡುತ್ತದೆ. ಸಾಗುವ ರೈಲು, ಹಾದು ಹೋಗುವ ಪ್ರಕೃತಿಯ (Nature) ಸೊಬಗು ಮನಸ್ಸನ್ನು ಮುದಗೊಳಿಸುತ್ತದೆ. ಅದರಲ್ಲೂ ಕಾಡು, ಬೆಟ್ಟ, ಪರ್ವತ, ಕಣಿವೆಗಳ ನಡುವೆ ಸಾಗುವ ಪಯಣವಂತೂ ತುಂಬಾ ಚೆಂದ. ಭಾರತದಲ್ಲಿ ಇಂಥಾ ಸುಂದರವಾದ ಹಲವಾರು ಪ್ರದೇಶಗಳಿವೆ. ಅದರಲ್ಲಿ ಕರಾವಳಿಯೂ ಒಂದು. ಕರಾವಳಿಯಲ್ಲಿ ರಸ್ತೆ ಪ್ರಯಾಣವಾಗಿರಲೇ, ರೈಲು ಪ್ರಯಾಣ (Train travek)ವಾಗಿರಲಿ ಎಲ್ಲವೂ ಸುಂದರವಾಗಿರುತ್ತದೆ. ಹಲವಾರು ಬಾರಿ ಸೆಲೆಬ್ರಿಟಿಗಳು, ಉದ್ಯಮಿಗಳು ಇಂಥಾ ರಸ್ತೆಯ ಫೋಟೋಗಳನ್ನು ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಾರೆ. 

ಬೆರಗುಗೊಳಿಸುವ ಪ್ರಾಕೃತಿಕ ಸೌಂದರ್ಯ
‘ಇನ್‌ಕ್ರೆಡಿಬಲ್ ಇಂಡಿಯಾ’ನ ಮೋಡಿ ಮಾಡುವ ಸೌಂದರ್ಯದಿಂದ ಮತ್ತೊಮ್ಮೆ ಬೆರಗುಗೊಂಡಿರುವ ನಾರ್ವೆಯ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಅವರು ಇತ್ತೀಚೆಗೆ ಉಡುಪಿ ರೈಲ್ವೆ ಮಾರ್ಗದ ರಮಣೀಯ ಮಾರ್ಗದ ಡ್ರೋನ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಈ ಅದ್ಭುತ ವಿಡಿಯೋವನ್ನು ಹಂಚಿಕೊಂಡಿದ್ದು, 86,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು (Views) ಮತ್ತು 4,000 ಕ್ಕೂ ಹೆಚ್ಚು ಇಷ್ಟಗಳನ್ನು ಗಳಿಸಿದೆ. ಮೂಲತಃ ಇನ್‌ಸ್ಟಾಗ್ರಾಮ್ ಬಳಕೆದಾರ ಮತ್ತು ಛಾಯಾಗ್ರಾಹಕ ರಾಜ್ ಮೋಹನ್ ಸೆರೆಹಿಡಿದಿರುವ ಈ ವಿಡಿಯೋ ಉಡುಪಿ ರೈಲ್ವೇ ಮಾರ್ಗದ ಮೋಡಿಮಾಡುವ ಮಾರ್ಗವನ್ನು ಸೆರೆಹಿಡಿದಿದೆ. ಇದು ಹಚ್ಚ ಹಸಿರಿನ ಕಾಡುಗಳು (Forests) ಮತ್ತು ಪರ್ವತಗಳ ಮೂಲಕ ರೈಲು ಹಾದು ಹೋಗುವುದನ್ನು ತೋರಿಸಿದೆ. ವೀಡಿಯೋವನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪದಗಳನ್ನು ಮೀರಿದ ಅದ್ಭುತ ಸೌಂದರ್ಯ ಎಂದ ನೆಟ್ಟಿಗರು
ಈ ಪೋಸ್ಟ್‌ಗೆ, ‘ಇನ್‌ಕ್ರೆಡಿಬಲ್ ಇಂಡಿಯಾ, ಎಲ್ಲಿಯಾದರೂ ಇಂಥಾ ಹಸಿರು ರೈಲು ಮಾರ್ಗವಿದೆಯೇ, ಬೆಂಗಳೂರು-ಉಡುಪಿ ರೈಲು ಮಾರ್ಗ, ಸಕಲೇಶಪುರದಿಂದ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ, ಎಷ್ಟು ಸುಂದರವಾಗಿದೆ’ ಎಂದು ಶೀರ್ಷಿಕೆ ನೀಡಿದ್ದಾರೆ. ಸುಂದರವಾದ ರೈಲು ಮಾರ್ಗದ ವೈಮಾನಿಕ ನೋಟವು ಇಂಟರ್ನೆಟ್ ಬಳಕೆದಾರರನ್ನು ಬೆರಗುಗೊಳಿಸಿತು. ‘ಪ್ರಕೃತಿ ಮತ್ತು ಸೌಹಾರ್ದತೆ ತುಂಬಾ ಕಡಿಮೆಯಾಗಿದೆ. ತುಂಬಾ ಸುಂದರವಾದ ಚಿತ್ರ’ ಎಂದು ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬರು, ‘ಇದು ಪದಗಳನ್ನು ಮೀರಿದ ಅದ್ಭುತ’ ಎಂದು ತಿಳಿಸಿದ್ದಾರೆ.

ಇನ್ನೊಬ್ಬ ಪ್ರಕೃತಿ ಪ್ರೇಮಿ, ‘ಪಶ್ಚಿಮ ಘಟ್ಟಗಳು ಭಾರತದಲ್ಲಿ ತುಂಬಾ ಸುಂದರವಾಗಿದೆ. ಮಹಾರಾಷ್ಟ್ರ, ಗೋವಾ, ಕರ್ನಾಟಕದಿಂದ ಕೇರಳದ ವರೆಗೆ ಅದ್ಭುತ ಭೂ ಪ್ರದೇಶವನ್ನು ನೋಡಬಹುದು. ಇಡೀ ಶ್ರೇಣಿಯ ಜನರು ಸುಂದರವಾಗಿದ್ದಾರೆ. ಅವರು ಚಲನಚಿತ್ರ ಜಗತ್ತಿನಲ್ಲಿಯೂ ಪ್ರಾಬಲ್ಯ ಸಾಧಿಸುವುದನ್ನು ನೀವು ನೋಡುತ್ತೀದ್ದೀರಿ. ಹಿಂದಿ. , ಕನ್ನಡ, ಮಲಯಾಳ ಚಲನಚಿತ್ರಗಳು ಚೆನ್ನಾಗಿ ಮೂಡಿಬರುತ್ತಿವೆ’ ಎಂದು ತಿಳಿಸಿದ್ದಾರೆ. 

‘ಇನ್‌ಕ್ರೆಡಿಬಲ್ ಇಂಡಿಯಾ” ದ ಸೌಂದರ್ಯದಿಂದ ಎಲ್ಲರೂ ಬೆರಗುಗೊಳಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ರಾಜತಾಂತ್ರಿಕರು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿರುವ ಬಂಗುಸ್ ಕಣಿವೆಯನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದರು. ಗುಡ್ಡಗಾಡು ಹುಲ್ಲುಗಾವಲಿನ ಹಿಂದೆ ಹರಿಯುವ ಸ್ಪಷ್ಟ-ನೀರಿನ ತೊರೆಯು ಸಮೃದ್ಧವಾದ ಹಸಿರು ಹುಲ್ಲಿನ ಮಧ್ಯೆ ಕುದುರೆಗಳು ಆನಂದದಿಂದ ಮೇಯುತ್ತಿರುವುದನ್ನು ಕಿರು ವೀಡಿಯೊ ತೋರಿಸಿತ್ತು.

ಅದೇನೆ ಇರ್ಲಿ, ದಕ್ಷಿಣಭಾರತದ ಪ್ರಾಕೃತಿಕ ಸೌಂದರ್ಯ, ಅದರಲ್ಲೂ ಕರ್ನಾಟಕದ ಸೊಬಗು ಎಲ್ಲೆಡೆ ವೈರಲ್ ಆಗುತ್ತಿರುವುದು, ಎಲ್ಲರ ಮನಸ್ಸಿಗೆ ಖುಷಿ ನೀಡುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist