ಹೈದರಾಬಾದ್: ಮಧ್ಯರಾತ್ರಿ ಫೋನ್ನಲ್ಲಿ ಮಾತನಾಡುತ್ತಿದ್ದ ಮಗಳನ್ನು (Daughter) ತಂದೆಯೊಬ್ಬ (Father) ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಹೈದರಾಬಾದ್ನ (Hyderabad) ಬಕರಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಯಾಸ್ಮಿನ್ ಉನಿಸ್ಸಾ (17) ಎಂದು ಗುರುತಿಸಲಾಗಿದೆ. ಆಕೆಯ ತಂದೆ ಮೊಹಮ್ಮದ್ ತಾಫಿಕ್ ಆಟೋ ಚಾಲಕನಾಗಿದ್ದ. ಈತ ಮಧ್ಯರಾತ್ರಿ ತನ್ನ ಮಗಳು ಯಾಸ್ಮೀನ್ ಫೋನ್ನಲ್ಲಿ (Mobile) ಮಾತನಾಡುವುದನ್ನು ಗಮನಿಸಿದ್ದಾನೆ.
ಇದರಿಂದ ಕೋಪಗೊಂಡ ಮೊಹಮ್ಮದ್ ತನ್ನ ಮಗಳ ಫೋನ್ ಅನ್ನು ಕಸಿದು ಆಕೆಗೆ ಕಪಾಳ ಮೋಕ್ಷ ಮಾಡಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಆಕೆಯ ಹಿರಿಯ ಸಹೋದರಿ ನೌಸೀನು ತನ್ನ ತಂದೆಯನ್ನು ತಡೆಯಲು ಪ್ರಯತ್ನಿಸಿದ್ದಾಳೆ. ಆದರೆ ಮೊಹಮ್ಮದ್ ಆಕೆಯನ್ನು ಪಕ್ಕಕ್ಕೆ ತಳ್ಳಿ, ಯಾಸ್ಮೀನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿ ನೌಸೀನುನಿಸ್ಸಾ ಪೊಲೀಸರಿಗೆ ಕರೆ ಮಾಡಿ ಘಟನೆ ಕುರಿತು ವಿವರಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೌಫಿಕ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist