ಬುಧವಾರ, ಮೇ 15, 2024
Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!-Gold Rate: ನಿಮ್ಮ ನಗರದಲ್ಲಿ ಆಭರಣದ ಬೆಲೆ ಹೇಗಿದೆ.!-ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮದುವೆ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿದ – ಇಬ್ಬರ ಸ್ಥಿತಿ ಚಿಂತಾಜನಕ

Twitter
Facebook
LinkedIn
WhatsApp
ಹೇಳದೇ ಎಲ್ಲೋ ಹೋಗಿದ್ದಾಳೆ – ಮಗಳನ್ನೇ ಕೊಂದು ಟ್ರಾಲಿ ಬ್ಯಾಗ್‍ನಲ್ಲಿ ಶವ ತುಂಬಿ ಎಸೆದ ತಂದೆ

ಮುಂಬೈ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪಿಎಚ್‍ಡಿ ವಿದ್ಯಾರ್ಥಿಯೊಬ್ಬ ತನಗೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿ ಹತ್ಯೆಗೈಯ್ಯಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ (Maharashtra) ಔರಂಗಾಬಾದ್‍ನಲ್ಲಿ (Aurangabad) ನಡೆದಿದೆ. ಇದೀಗ ಇಬ್ಬರಿಗೂ ಸುಟ್ಟ ಗಾಯವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇಬ್ಬರೂ ಪ್ರಾಣಿಶಾಸ್ತ್ರದ (Zoology) ಪಿಎಚ್‍ಡಿ ವಿದ್ಯಾರ್ಥಿಗಳಾಗಿದ್ದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಲ್ಲಿ (Dr Babasaheb Ambedkar Marathwada University) ಅಧ್ಯಯನ ಮಾಡುತ್ತಿದ್ದರು.

ಹನುಮಾನ್ ತೆಕಡಿಯಲ್ಲಿರುವ ಸರ್ಕಾರಿ ಫೋರೆನ್ಸಿಕ್ ಕಾಲೇಜಿನ ಬಯೋಫಿಸಿಕ್ಸ್ ವಿಭಾಗದ ಕ್ಯಾಬಿನ್‍ನಲ್ಲಿ ಯುವತಿ ತನ್ನ ಪ್ರಾಜೆಕ್ಟ್ ಮಾಡುತ್ತಿದ್ದಾಗ ಆರೋಪಿ ಒಳಗೆ ನುಗ್ಗಿದ್ದಾನೆ. ನಂತರ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದೇಕೆ ಎಂದು ಪ್ರಶ್ನಿಸಲು ಆರಂಭಿಸಿದ್ದಾನೆ. ನಂತರ ತನ್ನ ಮೇಲೆ ಹಾಗೂ ಯುವತಿಯ ಮೇಲೆ ಪೆಟ್ರೋಲ್ ಸುರಿದು ಲೈಟರ್‍ನಿಂದ ಬೆಂಕಿ ಹಚ್ಚಿಕೊಂಡಿದ್ದಾನೆ. ನಂತರ ಯುವತಿಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ ಎಂದು ಬೇಗಂಪುರ ಠಾಣೆಯ ಪಿಐ ಪ್ರಶಾಂತ್ ಪೋತದಾರ ತಿಳಿಸಿದ್ದಾರೆ.

ಇದೀಗ ಇಬ್ಬರನ್ನು ಚಿಕಿತ್ಸೆಗಾಗಿ ಔರಂಗಾಬಾದ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವ್ಯಕ್ತಿಗೆ 90% ಸುಟ್ಟ ಗಾಯಗಳಾಗಿದ್ದರೆ, ಯುವತಿಗೆ 55% ಸುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 307, 326A, 354D, 506,34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ