ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಗ ಬದುಕಲ್ಲ ಎನ್ನುವ ಭಯವಿತ್ತು, ಮಗಳು ಅನ್‌ಪ್ಲ್ಯಾನ್ಡ್‌ ಬೇಬಿ; ಚಿತ್ರರಂಗ ಬಿಡಲು ಕಾರಣ ತಿಳಿಸಿದ ನಮ್ರತಾ

Twitter
Facebook
LinkedIn
WhatsApp
ಮಗ ಬದುಕಲ್ಲ ಎನ್ನುವ ಭಯವಿತ್ತು, ಮಗಳು ಅನ್‌ಪ್ಲ್ಯಾನ್ಡ್‌ ಬೇಬಿ; ಚಿತ್ರರಂಗ ಬಿಡಲು ಕಾರಣ ತಿಳಿಸಿದ ನಮ್ರತಾ

ಟಾಲಿವುಡ್ ಹ್ಯಾಡ್ಸಮ್ ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಶಿರೋಡ್ಕರ್‌ ಮತ್ತೊಮ್ಮೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಅನ್ನೋದು ಅಭಿಮಾನಿಗಳ ಆಸೆ ಏಕೆಂದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ನಮ್ರತಾ ಸಿನಿಮಾ ರಂಗದಿಂದ ದೂರು ಉಳಿದು ಬಿಟ್ಟರು. ಅದರಲ್ಲೂ ಮಕ್ಕಳ ಎಂಟ್ರಿ ನಂತರ ಸಾಮಾಜಿಕ ಜಾಲತಾಣದಿಂದಲೂ ದೂರವಿದ್ದರು. ಇನ್‌ಸ್ಟಾಗ್ರಾಂ ಸೆಲೆಬ್ರಿಟಿಗಳಿಗೆ ಎಂದು ಫೇಮಸ್ ಆಗಿದ್ದಾಗ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟು ಅಭಿಮಾನಿಗಳ ಸಂಪರ್ಕ ಬೆಳೆಸಿಕೊಂಡರು. ಮಹೇಶ್ ಬಾಬು ಅವರಿಂದ ಸಿನಿಮಾ ಬಿಟ್ಟಿದ್ದು ಎಂದು ಕೆಲವರು ಹೇಳುತ್ತಾರೆ ಇನ್ನೂ ಕೆಲವರು ಮಕ್ಕಳಿಂದ ಎನ್ನುತ್ತಾರೆ. ಇದರ ಬಗ್ಗೆ ಸ್ವತಃ ನಮ್ರತಾ ಕ್ಲಾರಿಟಿ ಕೊಟ್ಟಿದ್ದಾರೆ. 

ಕೆಲವು ದಿನಗಳ ಹಿಂದೆ ನಿರೂಪಕಿ ಪ್ರೇಮಾ ಜೊತೆ ನಡೆದ ಸಂದರ್ಶನದಲ್ಲಿ ಸಮ್ರತಾ ಮಾತನಾಡಿದ್ದಾರೆ. 2005ರಲ್ಲಿ ಮಹೇಶ್ ಬಾಬು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮರು ವರ್ಷವೇ ಪುತ್ರ ಗೌತಮ್ ಹುಟ್ಟಿದ್ದು. ಒಬ್ಬ ಮಗನೇ ಸಾಕು ಎಂದುಕೊಂಡು ಸುಮ್ಮನಿರುವಾಗ 6 ವರ್ಷಗಳ ನಂತರ ಮಗಳು ಸಿತಾರ ಹುಟ್ಟಿದ್ದಂತೆ. ಪ್ಲ್ಯಾನ್ ಆಂಡ್ ಅನ್‌ಪ್ಲ್ಯಾನ್ಡ್‌ ಬೇಬಿ ಬಗ್ಗೆ ನಮ್ರತಾ ಮಾತನಾಡಿದ್ದಾರೆ.

‘ಪರ್ಸನಲ್ ಲೈಫ್‌ನಲ್ಲಿ ಹೆಂಡತಿಯಾಗಿ ಹಾಗೂ ತಾಯಿಯಾಗಿ ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುವುದು ಅದಕ್ಕಾಗಿ ನಾನು ಸಿನಿಮಾಗಳಿಂದೆ ದೂರ ಉಳಿದಿರುವೆ. ಸಿತಾರ ನಮಗೆ ಅನ್‌ಪ್ಲ್ಯಾನ್ಡ್‌ ಬೇಬಿ. ಮಗ ಮಾತ್ರ ಸಾಕು ಎಂದುಕೊಂಡಿದ್ದೇವು. ಆದರೆ 6 ವರ್ಷಗಳ ನಂತರ ಸಿತಾರ ಹುಟ್ಟಿದ್ದು. ಆಕೆ ಇಲ್ಲದೇ ಇದ್ದಿದ್ದರೆ ನಮ್ಮ ಜೀವನ ಸಂಪೂರ್ಣ ಅನ್ನಿಸುತ್ತಿರಲಿಲ್ಲ. ಅವಳು ನಮ್ಮ ಮನೆಯ ಬೆಳಕು, ಆಶಾ ಕಿರಣ ಮತ್ತು ಸರ್ವಸ್ವ’ ಎಂದು ನಮ್ರತಾ ಹೇಳಿದ್ದಾರೆ.

Pictures Of Mahesh Babu & Namrata Shirodkar's Hyderabad House‘ಮಗ ಗೌತಮ್ ಹುಟ್ಟಿದಾಗ ಮಾನಸಿಕವಾಗಿ ಬಹಳ ನೋವು ಅನುಭವಿಸಿದ್ದೇನೆ. ನಾವು ಮದುವೆಯಾಗಿ 8 ತಿಂಗಳಿಗೆ ಗೌತಮ್ ಹುಟ್ಟಿದ್ದು. ಆತನ ಕಂಡಿಷನ್ ಬಹಳ ಕ್ರಿಟಿಕಲ್ ಆಗಿದೆ ಎಂದು ವೈದ್ಯರು ಹೇಳಿದ್ದರು. ಆ ಸಮಯದಲ್ಲಿ ಅವನು ಬದಯಕುವುದೇ ಕಷ್ಟ ಆಗಿತ್ತು ಇಲ್ಲವೇನೋ ಎಂದು ಬಹಳ ಆತಂಕ ಎದುರಾಗಿತ್ತು. ಆದರೆ ಎನೇನೋ ಕಷ್ಟ ಎದುರಿಸಿಕೊಂಡು ಮಗನನ್ನು ಉಳಿಸಿಕೊಂಡು ಅದರಿಂದ ಹೊರ ಬಂದಿದ್ದೇವೆ’ ಎಂದಿದ್ದಾರೆ ನಮ್ರತಾ. 

ನಮ್ರತಾ ಶಿರೋಡ್ಕರ್ ಅವರು ‘ಜಬ್ ಪ್ಯಾರ್ ಕಿಸಿ ಸೇ ಹೋತಾ ಹೈ’ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಟ್ವಿಂಕಲ್ ಖನ್ನಾ ಸಹ ನಟಿಸಿದ್ದಾರೆ. ಆದರೆ, ಸಿನಿಮಾ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ನಮ್ರತಾ ಅವರ ನಟನೆಯನ್ನು ಹೆಚ್ಚು ಮೆಚ್ಚಗೆ ಗಳಿಸಿತು.ಅವರಿಗೆ ಚಲನಚಿತ್ರಗಳಿಗೆ ಆಫರ್‌ಗಳು ಬರಲಾರಂಭಿಸಿದವು. ಈ ಚಿತ್ರದ ನಂತರ, ನಟಿ ತೆಲುಗು ಚಿತ್ರ ವಂಶಿಯಲ್ಲಿ ಕೆಲಸ ಮಾಡಿದರು. ಇದರಲ್ಲಿ ಮಹೇಶ್ ಬಾಬು ಮುಖ್ಯ ಭೂಮಿಕೆಯಲ್ಲಿದ್ದರು. ವಂಶಿ ಮಹೇಶ್ ಬಾಬು ಅವರ ಮೊದಲ ಸಿನಿಮಾವಾಗಿತ್ತು. ಮೊದಲ ಸಿನಿಮಾದಲ್ಲೇ ಮಹೇಶ್ ಬಾಬು ನಮ್ರತಾಗೆ ಮನಸೋತಿದ್ದರು. ನಟಿ ಮಹೇಶ್ ಬಾಬು ಅವರಿಗಿಂತ ನಾಲ್ಕು ವರ್ಷ ದೊಡ್ಡವರು. ಇದರ ಹೊರತಾಗಿಯೂ, ಮಹೇಶ್ ಬಾಬು ನಮ್ರತಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಇಬ್ಬರ ಸ್ನೇಹದಿಂದ ಶುರುವಾದ ಕಥೆ ನಂತರ ಪ್ರೀತಿಗೆ ತಿರುಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist