ಬೆಂಗಳೂರಲ್ಲಿ ಅಪಾರ್ಟ್ಮೆಂಟ್ನ 10ನೇ ಮಹಡಿಯಿಂದ ಬಿದ್ದು ಬಾಲಕಿ ಆತ್ಮಹತ್ಯೆ

ಬೆಂಗಳೂರು: ಬಹುಮಹಡಿ ಕಟ್ಟಡದಿಂದ ಬಿದ್ದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ್ ವೃತ್ತದ ಬಳಿ ನಡೆದಿದೆ.
ಪ್ರಕೃತಿ ಆತ್ಮಹತ್ಯೆಗೆ ಶರಣಾದ ಬಾಲಕಿ ಹೆಸರು ಎನ್ನಲಾಗಿದೆ. ಐಪಾಯಿಂಟ್ ತ್ರೀ ಬಹುಮಹಡಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. 10ನೇ ಮಹಡಿಯಿಂದ ಬಿದ್ದ ರಭಸಕ್ಕೆ ಕಟ್ಟಡದ ಕೆಳಗಡೆ ಪಾರ್ಕ್ ಮಾಡಿದ್ದ ಕಾರು ನಜ್ಜುಗುಜ್ಜಾಗಿದೆ
ಸ್ಥಳಕ್ಕೆ ಹೈಗ್ರೌಂಡ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ ಬಳಿ ಇದ್ದ 300 ರೂಪಾಯಿ ಹಣ, ರೆಡ್ಮಿ ಮೊಬೈಲ್ ಸಿಕ್ಕಿದೆ. ಆದರೆ ಮೊಬೈಲ್ ಹೊಡೆದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ ನಿವಾಸಿ ಅಲ್ಲ ಎನ್ನುವುದು ಮೋಲ್ನೋಟಕ್ಕೆ ಖಾತ್ರಿಯಾಗಿದೆ. ಹೊರಗಡೆಯಿಂದ ಫೋನ್ನಲ್ಲಿ ಮಾತನಾಡಿಕೊಂಡು ಬಂದಿದ್ದರು ಎಂದು ಸೆಕ್ಯುರಿಟಿ ಗಾರ್ಡ್ ತಿಳಿಸಿದ್ದಾರೆ. ಬಾಲಕಿ ಬಿದ್ದ ಅಪಾರ್ಟ್ಮೆಂಟ್ ಮುಂಭಾಗದ ಅಪಾರ್ಟ್ಮೆಂಟ್ ಒಳಗಡೆ ಹೋಗಲು ಯತ್ನಿಸಿದ್ದಳು. ಅದು ಸಾಧ್ಯವಾಗದ ಕಾರಣ ಮತ್ತೊಂದು ಅಪಾರ್ಟ್ಮೆಂಟ್ಗೆ ಬಂದಿರುವ ಶಂಕೆ ವ್ಯಕ್ತವಾಗಿದೆ.
ಪಿಯುಸಿ ಓದುತ್ತಿರುವ ಈಕೆ ಕಾಲೇಜಿನಲ್ಲಿ ಬೋರ್ಡ್ ಪರೀಕ್ಷೆ ನಡೆಯುತ್ತಿದ್ದ ಕಾರಣ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸಂಜಯ್ ನಗರ ನಿವಾಸಿಯಾಗಿರುವ ಯುವತಿ ತಾಯಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಲಿಫ್ಟ್ ಮೂಲಕ ಹೋಗುತ್ತಿರುವ ಸಂದರ್ಭದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ