ಪೊಲೀಸ್ ಠಾಣೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!
Twitter
Facebook
LinkedIn
WhatsApp
ಚಿಕ್ಕಮಗಳೂರು: ಮಹಿಳೆಯೊಬ್ಬರು ಮೂಡಿಗೆರೆ ಪೊಲೀಸ್ ಠಾಣೆಯ ಮೇಲೇರಿ ಆತ್ಮಹತ್ಯೆಗೆ(suicide) ಯತ್ನಿಸಿದ ಘಟನೆ ನಡೆದಿದೆ. ಹಳೆ ಮೂಡಿಗೆರೆ ಗ್ರಾಮದ ಶಿಲ್ಪ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಹೌದು ಮಹಿಳೆಯೊಬ್ಬರು ಠಾಣೆಯ ಮಹಡಿ ಮೇಲಿಂದ ಜಿಗಿಯಲು ಯತ್ನಿಸಿದ್ದು ಆಕೆಯನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಹಳೆ ಮೂಡಿಗೆರೆ ಗ್ರಾಮದ ಶಿಲ್ಪ ಮತ್ತು ಆಕೆಯ ಅಕ್ಕನ ನಡುವೆ 2022ರಲ್ಲಿ ಗಲಾಟೆಯಾಗಿತ್ತು, ಈ ವಿಷಯಕ್ಕೆ ಇಬ್ಬರು ಅಕ್ಕ ತಂಗಿಯರು ದೂರು ನೀಡಲು ಮೂಡಿಗೆರೆ ಠಾಣೆಗೆ ಹೋಗಿದ್ದರು. ಈ ವೇಳೆ ಅಲ್ಲಿನ ಸುಜಾತಾ ಎಂಬ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರಂತೆ. ಈ ಕಾರಣಕ್ಕೆ ಶಿಲ್ಪ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಶಿಲ್ಪ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆ ಕೋರ್ಟ್ ಆಕೆಯ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಇದೀಗ ಮಹಿಳೆ ಕೋರ್ಟ್ ಸಮನ್ಸ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.