ಗುರುವಾರ, ಮೇ 9, 2024
ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಕ್ಯಾಮೆರಾಗಳ ಮುಂದೆನೇ ನಾಯಕ ಕೆ ಎಲ್ ರಾಹುಲ್ ಗೆ ತರಾಟೆಗೆ ತೆಗೆದುಕೊಂಡ LSG ಮಾಲೀಕ ; ಅಭಿಮಾನಿಗಳು ಆಕ್ರೋಶ..!-ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ-SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?-Gold Price: ದುಬಾರಿಯಾಗಿದ್ದ ಚಿನ್ನದ ದರ ಇಂದು ಹೇಗಿದೆ.?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಫ್ಯಾಷನ್‌ ಡಿಸೈನಿಂಗ್‌ ಕೆಲಸ ಬಿಟ್ಟು ಸ್ಟ್ರೀಟ್‌ಫುಡ್‌ ಅಂಗಡಿ ತೆರೆದ ಯುವತಿ

Twitter
Facebook
LinkedIn
WhatsApp
Untitled 8
ಕೋಲ್ಕತ್ತಾ: ಎಷ್ಟೇ ಬಡವನಾಗಿದ್ರೂ, ಎಷ್ಟೇ ಶ್ರೀಮಂತನಾಗಿದ್ರೂ ಸ್ಟ್ರೀಟ್‌ಫುಡ್‌ ಅಂದ್ರೆ ಎಲ್ಲರಿಗೂ ಇಷ್ಟನೇ. ಇನ್ನು ಬೆಂಗಳೂರು, ಮುಂಬೈ, ಕೋಲ್ಕತ್ತಾದಂತಹ ಮಹಾನಗರಗಳ ಗಲ್ಲಿ ಗಲ್ಲಿಗಳಲ್ಲಿ ಸಿಗುವ ವಿಧ ವಿಧವಾದ ಸ್ಟ್ರೀಟ್‌ಫುಡ್‌ಗಳು ಬಾಯಿ ಚಪ್ಪರಿಸುವಂತೆ ಮಾಡುತ್ತವೆ. ಈ ಎಲ್ಲಾ ಸ್ಟ್ರೀಟ್‌ಫುಡ್‌ ಅಂಗಡಿಗಳಿಗೂ ತಮ್ಮದೇ ಆದ ಶ್ರಮದ ಕಥೆಗಳಿವೆ. ಕಷ್ಟದ ದುಡಿಮೆಯೂ ಬಡತನದ ನೋವೂ ಅದರಲ್ಲಿದೆ. ಆದರೆ ಅದರಲ್ಲೂ ಯಶಸ್ಸು ಗಳಿಸಿದವರು ಅದೆಷ್ಟೋ ಮಂದಿ.ಇಂತಹಾ ಅದೆಷ್ಟೋ ಕಥೆಗಳು, ದೃಶ್ಯಗಳು ಈಗೀಗ ವೈರಲ್‌ ಆಗುತ್ತಿರುವುದು ಸರ್ವೇ ಸಾಮಾನ್ಯವೆನಿಸಿದೆ. ಕೊಲ್ಕತ್ತಾದಲ್ಲಿನ ಇಂತದ್ದೇ ವೀಡಿಯೋವೊಂದು ಈಗ ವೈರಲ್‌ ಆಗಿದೆ.

ಕೋಲ್ಕತ್ತಾ ನಗರದಲ್ಲಿ ಒಬ್ಬಾಕೆ ತಾನು ಕಲಿತ ಫ್ಯಾಶನ್‌ ಡಿಸೈನಿಂಗ್‌ ವೃತ್ತಿ ಬಿಟ್ಟು ಗಲ್ಲಿಯೊಂದರಲ್ಲಿ ಸ್ಟ್ರೀಟ್‌ಫುಡ್‌ ಅಂಗಡಿಯೊಂದನ್ನು ತೆರೆದಿದ್ದಾಳೆ. ಈಕೆಯ ಅಂಗಡಿಯಲ್ಲಿ ಪ್ರಸಿದ್ಧ ʻಬೆಂಗಾಲಿ ಥಾಲಿʼಗೆ ಬಲು ಬೇಡಿಕೆ. ಈಕೆ ಇದೀಗ ಕೋಲ್ಕತ್ತಾ ನಗರದಲ್ಲಿ ಫೇಮಸ್‌ ಆಗಿದ್ದಾಳೆ. ಇದೀಗ ಈಕೆಯ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.ಫ್ಯಾಷನ್‌ ಡಿಸೈನರ್‌ ಆಗಿದ್ದ ಕೋಲ್ಕತ್ತಾ ಮೂಲದ ನಂದಿನಿ ಗಂಗೂಲಿ ಎಂಬ ಯುವತಿಯೊಬ್ಬಳ ಸ್ಟ್ರೀಟ್‌ ಫುಡ್‌ ಅಂಗಡಿ ಇತ್ತೀಚೆಗೆ ಹೆಡ್‌ಲೈನ್‌ ಆಗಿತ್ತು.! ಈ ಬೆನ್ನಲ್ಲೇ ಈಕೆಯ ವೀಡಿಯೋಗಳೂ ಈಗ ವೈರಲ್‌ ಆಗಿದೆ.ಫ್ಯಾಷನ್‌ ಡಿಸೈನರ್‌ ಆಗಿದ್ದ ಕೋಲ್ಕತ್ತಾ ಮೂಲದ ನಂದಿನಿ ಗಂಗೂಲಿ ಎಂಬ ಯುವತಿಯೊಬ್ಬಳ ಸ್ಟ್ರೀಟ್‌ ಫುಡ್‌ ಅಂಗಡಿ ಇತ್ತೀಚೆಗೆ ಹೆಡ್‌ಲೈನ್‌ ಆಗಿತ್ತು.! ಈ ಬೆನ್ನಲ್ಲೇ ಈಕೆಯ ವೀಡಿಯೋಗಳೂ ಈಗ ವೈರಲ್‌ ಆಗಿದೆ.

ನಂದಿನಿಯ ತಂದೆ ರಬ್ಬರ್‌ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೊರೋನಾ ಕಾಲದಲ್ಲಿ ನಂದಿನಿಯ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಯಿತು. ಆಗ ತನ್ನ ವೃತ್ತಿ ಬಿಟ್ಟು ಸ್ಟ್ರೀಟ್‌ ಫುಡ್‌ ಅಂಗಡಿಯೊಂದನ್ನು ಪ್ರಾರಂಭಿಸಿದ ನಂದಿನಿಯ ಅಂಗಡಿಯ ಮುಂದೆ ʻಬೆಂಗಾಲಿ ಥಾಲಿʼ ತಿನ್ನಲು ಇಂದು ಜನ ಕ್ಯೂ ನಿಲ್ಲುತ್ತಿದ್ದಾರೆ.ಅವರು ತಯಾರಿಸುವ ಆಹಾರಕ್ಕೂ, ಅವರು ತನ್ನ ಗ್ರಾಹಕರನ್ನು ಉಪಚರಿಸುವ ರೀತಿಗೂ ಜನ ಫಿದಾ ಆಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ ವೀಡಿಯೋವೊಂದು ಕೆಲವೇ ಗಂಟೆಗಳಲ್ಲಿ ಸುಮಾರು 8 ಮಿಲಿಯನ್‌ಗೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಇವರ ಈ ಶ್ರಮಕ್ಕೆ ನೆಟ್ಟಿಗರು ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ