ಬೆಂಗಳೂರು: ಆಸಾಮಿಯೊಬ್ಬ ನನಗೆ ಸರ್ವಿಸ್ ಕೊಡ್ತೀರಾ, ದಿನಕ್ಕೆ 50 ಸಾವಿರ ರೂ. ಕೊಡ್ತೀನಿ ಎಂದು ಮಹಿಳೆಯ ಫ್ಲಾಟ್ನ ಡೋರ್ ಮುಂದೆ ಪತ್ರ (Letter) ಬರೆದಿಟ್ಟು ಕಾಲಿಂಗ್ ಬೆಲ್ ಹೊಡೆದು ಲೈಂಗಿಕ ಕಿರುಕುಳ (Sexual Assault) ನೀಡಿದ ಘಟನೆ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಅಪಾರ್ಟ್ಮೆಂಟ್ನಲ್ಲಿ (Apartment) ವಾಸವಿರುವ ಮಹಿಳೆಗೆ ಆಸಾಮಿಯೊಬ್ಬ ಫ್ಲಾಟ್ನ ಡೋರ್ನಲ್ಲಿ ಲೇಟರ್ ಇಟ್ಟು ಕಾಲಿಂಗ್ ಬೆಲ್ ಹೊಡೆದಿದ್ದ. ಮಹಿಳೆ ಹೊರ ಬಂದು ಯಾರೆಂದು ನೋಡಿದಾಗ ಲೆಟರ್ ಸಿಕ್ಕಿದೆ. ಪತ್ರದಲ್ಲಿ ನನಗೆ ಸರ್ವಿಸ್ ಕೊಡ್ತೀರಾ? ಹಾಗಾದ್ರೆ ಬೇಸ್ಮೆಂಟ್ಗೆ ಬನ್ನಿ. ಒಂದು ದಿನಕ್ಕೆ 50 ಸಾವಿರ ರೂ. ಕೊಡ್ತೀನಿ ಎಂದು ಅಸಭ್ಯವಾಗಿ ಬರೆದಿಟ್ಟು ಅಪರಿಚಿತ ಪರೋಕ್ಷವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಮಹಿಳೆ ಪತ್ರವನ್ನು ಕೂಡಲೇ ಅಪಾರ್ಟ್ಮೆಂಟ್ನ ಸಿಬ್ಬಂದಿ ಗಮನಕ್ಕೆ ತಂದು ವಿಚಾರ ತಿಳಿಸಿದ್ದಾರೆ. ಬಳಿಕ ಈ ಬಗ್ಗೆ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ. ಸದ್ಯ ಪತ್ರದ ಮೂಲಕ ಲೈಂಗಿಕ ಕಿರುಕುಳ ಎಂದು ಮಹಿಳೆ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕೂಡ ತನಿಖೆ ಆರಂಭಿಸಿದ್ದು, ಅಪಾರ್ಟ್ಮೆಂಟ್ನಲ್ಲಿರುವವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist