ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಟಿ ಮೀನಾ ಜೊತೆ ಧನುಷ್ ಮದುವೆ; ಸ್ಪೋಟಕ ಹೇಳಿಕೆ ನೀಡಿದ ಕಾಲಿವುಡ್ ನಟನಿಗೆ ಅಭಿಮಾನಿಗಳ ತರಾಟೆ

Twitter
Facebook
LinkedIn
WhatsApp
amazon 1

ಕಾಲಿವುಡ್ ಸ್ಟಾರ್ ನಟ ಧನುಷ್ ಮತ್ತೆ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸೌತ್ ಸಿನಿ ರಂಗದ ಖ್ಯಾತ ನಟಿ ಮೀನಾ ಅವರನ್ನು ಕೈ ಹಿಡಿಯುತ್ತಿದ್ದಾರೆ ಎನ್ನುವ ಸುದ್ದಿ ಕಾಲಿವುಡ್‌ ಅಂಗಳದಲ್ಲಿ ಗುಲ್ಲಾಗಿದೆ. ಅಷ್ಟಕ್ಕೂ ಈ ಸುದ್ದಿ ವೈರಲ್ ಆಗಲು ಕಾರಣ ಕಾಲಿವುಡ್ ನಟ ಬೈಲ್ವಾನ್ ರಂಗನಾಥನ್ ಹೇಳಿಕೆ. ಹೌದು ಇತ್ತೀಚೆಗೆ ಬೈಲ್ವಾನ್ ರಂಗನಾಥನ್ ಸಂದರ್ಶನವೊಂದರಲ್ಲಿ ಧನುಷ್ ಮತ್ತು ಮೀನಾ ಇಬ್ಬರೂ ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು. ಈ ಮಾತು ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ, ಅಲ್ಲದೇ ರಂಗನಾಥನ್ ವಿರುದ್ಧ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಧನುಷ್ ವಿಚ್ಛೇದನ ಮತ್ತು ಮೀನಾ ಅವರ 2ನೇ ಮದುವೆ ವಿಚಾರ ಬಂದಾಗ ರಂಗನಾಥನ್ ಇಬ್ಬರೂ ಮದುವೆ ಆಗಲಿದ್ದಾರೆ ಎಂದು ಹೇಳಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. 

Dhanush And Meena To Get Married? Bayilvan Ranganathan Latest Revelation  Goes Viral And Trending - Malayalam Filmibeat

ನಟ ರಂಗನಾಥನ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಭಿಮಾನಿಗಳು ರಂಗನಾಥನ್ ವಿರುದ್ಧ ಮುಗಿಬಿದ್ದಿದ್ದಾರೆ. ಯಾವಾಗಲೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರುವ ರಂಗನಾಥನ್ ಈಗ ಮೀನಾ ಮತ್ತು ಧನುಷ್ ಬಗ್ಗೆ ಹೇಳಿಕೆ ನೀಡಿ ಮತ್ತೆ ಅವಾಂತರ ಸೃಷ್ಟಿಸಿಕೊಂಡಿದ್ದಾರೆ. ಅಷ್ಟಕ್ಕೂ ರಂಗನಾಥ್ ಹೇಳಿದ್ದೇನು? 

ಇಬ್ಬರೂ ನಲವತ್ತರ ಆಸುಪಾಸಿನವರು. ಇಬ್ಬರಿಗೂ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಇಬ್ಬರೂ ಹೊಸ ಬದುಕು ಕಟ್ಟಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಈ ಜೂನ್ ನಲ್ಲಿ ಅವರು ಮದುವೆಯಾಗಬಹುದು. ಒಂದು ವೇಳೆ ಅವರು ಮದುವೆಯಾಗದಿದ್ದರೂ ಒಟ್ಟಿಗೆ ವಾಸಿಸಬಹುದು’ ಎಂದು ಬೈಲ್ವಾನ್ ರಂಗನಾಥನ್ ಹೇಳಿಕೆ ನೀಡಿದ್ದಾರೆ. ರಂಗನಾಥ್ ಹೀಗೆ ಹೇಳುತ್ತಿದ್ದಂತೆ ಧನುಷ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.  

Netizens Slam Bayilvan Ranganathan After He Opens Up About Meena And Dhanush  Marriage Goes Viral - Malayalam Filmibeat

‘ಇಂಥ ಹೇಳಿಕೆ ನೀಡುವ ಮೂಲಕ ಇತರರ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವ ರಂಗನಾಥನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು’ ಒತ್ತಾಯ ಕೇಳಿ ಬರುತ್ತಿದೆ. ‘ಮೊದಲು ಇಂಥ ವಿಚಾರಗಳನ್ನು ಮಾತನಾಡುವುದನ್ನು ನಿಲ್ಲಿಸು, ಇನ್ನೊಬ್ಬರ ಜೀವನದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸು’ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಸಿನಿಮಾ ಸ್ಟಾರ್‌ಗಳ ವಿರುದ್ಧ ಅಪಪ್ರಚಾರ ಮಾಡುವುದು ಇದೆ ಮೊದಲಲ್ಲ. ಈ ಮೊದಲು ಸಹ ಅನೇಕ ಬಾರಿ ರಂಗನಾಥನ್ ಇಂಥ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ.  

ಪತ್ನಿಗೆ ವಿಚ್ಛೇದನ ನೀಡಿರುವ ಧನುಷ್ 

May be an image of 1 person, standing and indoor

ನಟ ಧನುಷ್ ಮತ್ತು ಐಶ್ವರ್ಯಾ ದಂಪತಿ ಬೇರೆ ಬೇರೆಯಾಗಿ ಅನೇಕ ತಿಂಗಳುಗಳೇ ಕಳೆದಿವೆ. ಕಳೆದ ವರ್ಷ ಇಬ್ಬರೂ ಬೇರೆ ಬೇರೆ ಆಗುತ್ತಿರುವ ಬಗ್ಗೆ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈ ಮೂಲಕ ಇಬ್ಬರೂ ತಮ್ಮ 18 ವರ್ಷಗಳ ದಾಂಪತ್ಯ ಜೀವನ ಮುರಿದುಕೊಂಡು ದೂರ ದೂರ ಆದರು. ಸದ್ಯ ಇಬ್ಬರ ವಿಚ್ಛೇದನ ಪ್ರಕರಣ ಕೋರ್ಟ್‌ನಲ್ಲಿದೆ. 

ಪತಿಯನ್ನು ಕಳೆದುಕೊಂಡಿರುವ ಮೀನಾ  

May be a close-up of 1 person and standing

ನಟಿ ಮೀನಾ ಇತ್ತೀಚಿಗಷ್ಟೆ ಪತಿಯನ್ನು ಕಳೆದುಕೊಂಡರು. ಮೀನಾ ಪತಿ ಸಾಗರ್ ಕಳೆದ ಕೆಲವು ತಿಂಗಳ ಹಿಂದೆಯಷ್ಟೆ ನಿಧನ ಹೊಂದಿದರು. ಪತಿಯನ್ನು ಕಳೆದುಕೊಂಡು ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಮೀನಾ ಬಗ್ಗೆ ಇತ್ತೀಚಿಗಷ್ಟೆ 2ನೇ ಮದುವೆ ವದಂತಿ ವೈರಲ್ ಆಗಿತ್ತು. ಆದರೆ ಈ ಸುದ್ದಿಯನ್ನು ತಳ್ಳಿಹಾಕಿದ್ದರು. ಆದರೀಗ ಮೀನಾ ಮತ್ತು ಧನುಷ್ ಮದುವೆ ಆಗ್ತಾರೆ ಎಂದು ನಟ ಬೈಲ್ವಾನ್ ರಂಗನಾಥನ್ ಹೇಳಿದ್ದಾರೆ. ಈ ಬಗ್ಗೆ ಮೀನಾ  ಅಥವಾ ಧನುಷ್ ಪ್ರತಿಕ್ರಿಯೆ ನೀಡುತ್ತಾರಾ ಎಂದು ಕಾದುನೋಡಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist