ಬುಧವಾರ, ಮೇ 8, 2024
ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!-ನಾಳೆ SSLC ಪಲಿತಾಂಶ ಪ್ರಕಟ ; ಇಲ್ಲಿದೆ ಲಿಂಕ್-ಲಂಚ ಸ್ವೀಕಾರ; ರೆಂಡ್ ಆ್ಯಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PDO-ಐದನೇ ಬಾರಿ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾಡಿಮಿರ್ ಪುಟಿನ್-ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಇನ್ನಿಲ್ಲ-ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ; ಇಲಾಖೆಯಿಂದ ಯಾವುದೇ ವೇತನ ಬಾಕಿ ಇಲ್ಲ - ದಿನೇಶ್‌ ಗುಂಡೂರಾವ್‌-ಡಿಕೆಶಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲಿ : ಎಚ್‌ಡಿ ಕುಮಾರಸ್ವಾಮಿ-ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಿಕ್ಕಾಪಟ್ಟೆ ಟ್ರೋಲ್!!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೊಂಚ ಇಳಿಕೆ ಕಂಡ ಚಿನ್ನ ಬೆಳ್ಳಿಯ ದರ - ಇಂದಿನ ದರದ ಡೀಟೈಲ್ಸ್ ನೋಡಿ

Twitter
Facebook
LinkedIn
WhatsApp
Untitled 1

ಬೆಂಗಳೂರು: ಭಾರತ ಹಾಗೂ ಇತರ ವಿದೇಶೀ ಚಿನಿವಾರ ಪೇಟೆಯಲ್ಲಿ ಗಣನೀಯವಾಗಿ ಹೆಚ್ಚುತ್ತಿದ್ದ ಚಿನ್ನದ ಬೆಲೆ (Gold Rates Hike) ಸ್ವಲ್ಪ ತಂಪಾಗಿದೆ. ಕಳೆದ ವಾರ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 3 ಸಾವಿರ ರುಪಾಯಿಗೂ ಹೆಚ್ಚು ಏರಿಕೆ ಕಂಡಿತ್ತು. ಇದೀಗ ಅದರ ಬೆಲೆ ಭಾರತದಲ್ಲಿ 55,000 ರುಪಾಯಿ ಮಟ್ಟಕ್ಕಿಂತ ಕಡಿಮೆ ಆಗಿದೆ. ಆದರೆ ಮುಂದಿನ ದಿನಗಳು ಚಿನ್ನದ ಬೆಲೆಗಳಲ್ಲಿ ಕ್ಷಿಪ್ರ ವ್ಯತ್ಯಯಗಳಾಗುವ ಸಾಧ್ಯತೆ ಇದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 60,000 ರುಪಾಯಿ ಗಡಿಗಿಂತ ಕಡಿಮೆಯಾಗಿದೆ. ಬೆಳ್ಳಿ ಬೆಲೆ ಸಾಕಷ್ಟು ಏರಿ ಈಗ ವಿರಮಿಸಿದಂತಿದೆ. ಭಾರತದಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 720 ರುಪಾಯಿ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 54,800 ರುಪಾಯಿ ಆದರೆ, 100 ಗ್ರಾಮ್ ಬೆಳ್ಳಿ ಬೆಲೆ 7,210 ರುಪಾಯಿಗೆ ಇಳಿಕೆಯಾಗಿದೆ. ಆದರೆ, ಬೆಂಗಳೂರು, ಚೆನ್ನೈ ಮೊದಲಾದ ಕೆಲವೆಡೆ ಬೆಳ್ಳಿ ಬೆಲೆ ತುಸು ಏರಿದೆ.

ವಿದೇಶಗಳ ಚಿನಿವಾರಪೇಟೆಗಳಲ್ಲಿಯೂ (Bullion Market) ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಎಂಸಿಎಕ್ಸ್​ನಲ್ಲಿ ದಾಖಲೆಯ ಮಟ್ಟಕ್ಕೆ ಬೆಲೆ ಏರಿಕೆಯಾಗಿದೆ. ಇದರ ಬಿಸಿ ಭಾರತಕ್ಕೂ ತಟ್ಟಲಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಅಮೆರಿಕದಲ್ಲಿ ನಾಲ್ಕೈದಿನ ತಟಸ್ಥವಾಗಿದ್ದ ಚಿನ್ನದ ಬೆಲೆ ಮೊನ್ನೆ ತುಸು ಹೆಚ್ಚಿದೆ. ಈಗ ಬಹುತೇಕ ಎಲ್ಲಾ ವಿದೇಶಗಳಲ್ಲೂ ಚಿನ್ನದ ಬೆಲೆ ಭಾರತೀಯ ರುಪಾಯಿ ಲೆಕ್ಕದಲ್ಲಿ 50 ಸಾವಿರ ರೂ ಗಡಿ ದಾಟಿದೆ. ಮಲೇಷ್ಯಾ, ಕತಾರ್ ಮತ್ತು ಓಮನ್​ನಲ್ಲಿ ಚಿನ್ನದ ಬೆಲೆ 52 ಸಾವಿರ ರೂಗಿಂತ ಹೆಚ್ಚಿದೆ.

ಅಮೆರಿಕದ ಆರ್ಥಿಕತೆಯ ತುಮುಲ, ನಿರುದ್ಯೋಗ ಅಂಕಿ ಅಂಶದ ಗೊಂದಲ, ಹಣದುಬ್ಬರ ಅನಿಶ್ಚಿತತೆ, ಬಡ್ಡಿ ದರ ಬಗ್ಗೆ ಅಸ್ಪಷ್ಟತೆ, ಡಾಲರ್ ದುರ್ಬಲಗೊಂಡಿರುವುದು ಇವೆಲ್ಲವೂ ಹೂಡಿಕೆದಾರರನ್ನು ಚಿನ್ನದತ್ತ ಗಮನ ಕೊಡುವಂತೆ ಮಾಡಿವೆ. ಹೀಗಾಗಿ, ಚಿನ್ನಕ್ಕೆ ಬೇಡಿಕೆ ಹೆಚ್ಚಿ ಬೆಲೆ ಕೂಡ ಹೆಚ್ಚುತ್ತಿದೆ. ತಜ್ಞರ ಪ್ರಕಾರ ಇನ್ನೂ ಬಹಳಷ್ಟು ದಿನ ಚಿನ್ನದ ಬೆಲೆ ಏರಿಕೆಯ ಟ್ರೆಂಡ್ ಮುಂದುವರಿಯಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಈಗಲೂ ಪ್ರಶಸ್ತ ಸಮಯ ಇದೆ ಎಂಬ ಸಲಹೆಯನ್ನು ಕೊಡಲಾಗಿದೆ.

ಭಾರತದಲ್ಲಿರುವ ಬೆಲೆ (ಮಾರ್ಚ್ 21ಕ್ಕೆ):

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,800 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,780 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 720 ರೂ

ಬೆಂಗಳೂರಿನಲ್ಲಿರುವ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,850 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,830 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 746 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 54,850 ರೂ
  • ಚೆನ್ನೈ: 55,800 ರೂ
  • ಮುಂಬೈ: 54,800 ರೂ
  • ದೆಹಲಿ: 54,950 ರೂ
  • ಕೋಲ್ಕತಾ: 54,800 ರೂ
  • ಕೇರಳ: 54,800 ರೂ
  • ಅಹ್ಮದಾಬಾದ್: 54,850 ರೂ
  • ಜೈಪುರ್: 54,950 ರೂ
  • ಲಕ್ನೋ: 54,950 ರೂ
  • ಭುವನೇಶ್ವರ್: 54,800 ರೂ
  • ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):
    • ಮಲೇಷ್ಯಾ: 2,820 ರಿಂಗಿಟ್ (52,099 ರುಪಾಯಿ)
    • ದುಬೈ: 2237.50 ಡಿರಾಮ್ (50,296 ರುಪಾಯಿ)
    • ಅಮೆರಿಕ: 610 ಡಾಲರ್ (50,349 ರುಪಾಯಿ)
    • ಸಿಂಗಾಪುರ: 838 ಸಿಂಗಾಪುರ್ ಡಾಲರ್ (51,657 ರುಪಾಯಿ)
    • ಕತಾರ್: 2,310 ಕತಾರಿ ರಿಯಾಲ್ (52,378 ರೂ)
    • ಓಮನ್: 241.50 ಒಮಾನಿ ರಿಯಾಲ್ (51,791 ರುಪಾಯಿ)
    • ಕುವೇತ್: 191 ಕುವೇತಿ ದಿನಾರ್ (51,441 ರುಪಾಯಿ)

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ