ಕ್ರಿಸ್ ಗೇಲ್ ಜೊತೆ ಕಾಣಿಸಿಕೊಂಡ 'ನಾಗಿಣಿ' ಕನ್ನಡ ಧಾರಾವಾಹಿ ನಟಿ ದೀಪಿಕಾ ದಾಸ್
ಕನ್ನಡ ಕಿರುತೆರೆಯಲ್ಲಿ ಫೇಮಸ್ ಆಗಿರುವ ನಟಿ ದೀಪಿಕಾ ದಾಸ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋ ಕಂಡು ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಕ್ರಿಕೆಟರ್ ಕ್ರಿಸ್ ಗೇಲ್ ಜೊತೆ ದೀಪಿಕಾ ದಾಸ್ ಕಾಣಿಸಿಕೊಂಡಿದ್ದಾರೆ. ಕನ್ನಡಿಗರಿಗೆ ಕ್ರಿಸ್ ಗೇಲ್ ಎಂದರೆ ಬಲು ಇಷ್ಟ. ಆರ್ಸಿಬಿ ತಂಡದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ನಟಿ ದೀಪಿಕಾ ದಾಸ್ ಕೂಡ ಕ್ರಿಸ್ ಗೇಲ್ಗೆ ಅಭಿಮಾನಿ. ಅದಕ್ಕೆ ಈ ಫೋಟೋ ಸಾಕ್ಷಿ.
ವಿದೇಶದಲ್ಲಿ ಕ್ರಿಸ್ ಗೇಲ್ ಅವರನ್ನು ದೀಪಿಕಾ ದಾಸ್ ಭೇಟಿ ಆಗಿದ್ದಾರೆ. ಇದು ಅನಿರೀಕ್ಷಿತ ಭೇಟಿ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ತುಂಬ ಖುಷಿಯಾಗಿ ಪೋಸ್ ನೀಡಿರುವ ಅವರು ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನಾಗಿಣಿ’ ಧಾರಾವಾಹಿಯಿಂದ ದೀಪಿಕಾ ದಾಸ್ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಕಿರುತೆರೆ ಲೋಕದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಅವರು ಟಿವಿ ಇಂಡಸ್ಟ್ರಿಯ ಬ್ಯುಸಿ ನಟಿಯರಲ್ಲಿ ಒಬ್ಬರಾಗಿದ್ದಾರೆ.
‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕವೂ ದೀಪಿಕಾ ದಾಸ್ ಅವರು ಮನೆ ಮಾತಾಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 7’ ಮತ್ತು ಸೀಸನ್ 9ರಲ್ಲಿ ಸ್ಪರ್ಧಿಸುವ ಅವಕಾಶ ಅವರಿಗೆ ಸಿಕ್ಕಿತು. 9ನೇ ಸೀಸನ್ನಲ್ಲಿ ಅವರು ಫಿನಾಲೆ ತನಕ ಪೈಪೋಟಿ ನೀಡಿದ್ದರು.