ಶುಕ್ರವಾರ, ಮೇ 17, 2024
ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

RCB ತಂಡಕ್ಕೆ ಕನ್ನಡತಿ ಆಯ್ಕೆ! ಒಟ್ಟು 18 ಆಟಗಾರ್ತಿಯರ ಬಲಿಷ್ಠ ತಂಡ

Twitter
Facebook
LinkedIn
WhatsApp
RCB ತಂಡಕ್ಕೆ ಕನ್ನಡತಿ ಆಯ್ಕೆ! ಒಟ್ಟು 18 ಆಟಗಾರ್ತಿಯರ ಬಲಿಷ್ಠ ತಂಡ

WPL ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. 12 ಕೋಟಿಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಒಟ್ಟು 18 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್​​ಗೆ ಬಲಿಷ್ಠ ಬಳಗವನ್ನೇ ರೂಪಿಸಿದೆ. ಕರ್ನಾಟಕದ 20ರ ಹರೆಯದ ಯುವ ಆಲ್​ರೌಂಡರ್ ಶ್ರೇಯಾಂಕ ಪಾಟೀಲ್ ಅವರನ್ನು ಆರ್​ಸಿಬಿ ತಂಡ 10 ಲಕ್ಷ ರೂ. ನೀಡಿ ಖರೀದಿಸಿದೆ. ಈ ಮೂಲಕ ಸ್ಥಳೀಯ ಪ್ರತಿಭೆಗಳಿಗೂ ಆರ್​ಸಿಬಿ ತಂಡ ಮಣೆಹಾಕಿದೆ.

ಭಾರತ ಎ, ಭಾರತ ಬಿ ಹಾಗೂ ಕರ್ನಾಟಕ ತಂಡದ ಪರ ಆಡಿರುವ ಶ್ರೇಯಾಂಕ ಪಾಟೀಲ್ ಆಲ್​ರೌಂಡರ್ ಪ್ರದರ್ಶನದ ಮೂಲಕ ಹಲವು ಬಾರಿ ಮಿಂಚಿದ್ದರು. ಅದರಲ್ಲೂ ಈ ಹಿಂದೆ 9 ವಿಕೆಟ್ ಕಬಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಾರ್ಪೋರೇಟ್ ಕಪ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ಶ್ರೇಯಾಂಕ ಪಾಟೀಲ್ ತಮ್ಮ ಆಫ್​ ಸ್ಪಿನ್ ಮೋಡಿ ಮೂಲಕ ಕೇವಲ 24 ರನ್​ಗಳಿಗೆ 9 ವಿಕೆಟ್ ಕಬಳಿಸಿ ಮಿಂಚಿದ್ದರು.

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಾರ್ಪೋರೇಟ್ ಕಪ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ಶ್ರೇಯಾಂಕ ಪಾಟೀಲ್ ತಮ್ಮ ಆಫ್​ ಸ್ಪಿನ್ ಮೋಡಿ ಮೂಲಕ ಕೇವಲ 24 ರನ್​ಗಳಿಗೆ 9 ವಿಕೆಟ್ ಕಬಳಿಸಿ ಮಿಂಚಿದ್ದರು.

ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಂಡಿದ್ದ 409 ಆಟಗಾರ್ತಿಯರಲ್ಲಿ ಅತ್ಯಧಿಕ ಮೊತ್ತ ಪಡೆದಿರುವುದು ಸ್ಮೃತಿ ಮಂಧಾನ. ಅದು ಕೂಡ ಆರ್​ಸಿಬಿ ಫ್ರಾಂಚೈಸಿ ಖರೀದಿಸಿರುವುದು ಎಂಬುದೇ ವಿಶೇಷ. ಹಾಗಿದ್ರೆ ಆರ್​ಸಿಬಿ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರ್ತಿಯರು ಯಾರೆಲ್ಲಾ ಎಂದು ನೋಡೋಣ…

 

Smriti Mandhana 10

ಸ್ಮೃತಿ ಮಂಧಾನ (ಭಾರತ)- 3.4 ಕೋಟಿ ರೂ.

ಸೋಫಿ ಡಿವೈನ್ (ನ್ಯೂಜಿಲೆಂಡ್)- 50 ಲಕ್ಷ ರೂ.

ಎಲ್ಲಿಸ್ ಪೆರಿ (ಆಸ್ಟ್ರೇಲಿಯಾ)- 1.7 ಕೋಟಿ ರೂ.

ರೇಣುಕಾ ಸಿಂಗ್ (ಭಾರತ)- 1.5 ಕೋಟಿ ರೂ.

ರಿಚಾ ಘೋಷ್ (ಭಾರತ)-1.9 ಕೋಟಿ ರೂ.

 

ಎರಿನ್ ಬರ್ನ್ಸ್ (ಆಸ್ಟ್ರೇಲಿಯಾ)​ – 30 ಲಕ್ಷ ರೂ.

ದಿಶಾ ಕಸತ್ (ಭಾರತ)- 10 ಲಕ್ಷ ರೂ.

ಶ್ರೇಯಾಂಕ ಪಾಟೀಲ್ (ಭಾರತ)- 10 ಲಕ್ಷ ರೂ.

ಇಂದ್ರಾಣಿ ರಾಯ್ (ಭಾರತ)-10 ಲಕ್ಷ ರೂ.

ಕನ್ನಿಕಾ ಅಹುಜಾ (ಭಾರತ)- 35 ಲಕ್ಷ ರೂ.

ಆಶಾ ಶೋಬನಾ (ಭಾರತ)- 10 ಲಕ್ಷ ರೂ.

ಹೀದರ್ ನೈಟ್ (ಇಂಗ್ಲೆಂಡ್) – 40 ಲಕ್ಷ ರೂ.

ಡೇನ್ ವ್ಯಾನ್ ನೀಕರ್ಕ್ (ಸೌತ್ ಆಫ್ರಿಕಾ) -30 ಲಕ್ಷ ರೂ.

ಪ್ರೀತಿ ಬೋಸ್ -30 ಲಕ್ಷ ರೂ.

ಪೂನಮ್ ಖೇಮ್ನಾರ್ -10 ಲಕ್ಷ ರೂ.

ಕೋಮಲ್ ಝಂಝಾದ್ -25 ಲಕ್ಷ ರೂ.

ಮೇಗನ್ ಶಟ್ – 40 ಲಕ್ಷ ರೂ.

ಸಹನಾ ಪವಾರ್ -10 ಲಕ್ಷ ರೂ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ