ವಿಧಾನಸಭೆಯಲ್ಲಿಯೇ ಬ್ಲ್ಯೂಫಿಲಂ ವೀಕ್ಷಿಸಿದ ತ್ರಿಪುರದ ಶಾಸಕ, ವಿಡಿಯೋ ವೈರಲ್!
Twitter
Facebook
LinkedIn
WhatsApp
ತ್ರಿಪುರ: ವಿಧಾನ ಸಭೆ ಅಧಿವೇಶನ ನಡೆಯುತ್ತಿದ್ದಾಗ ಬಿಜೆಪಿ ಶಾಸಕರೊಬ್ಬರು ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿರುವುದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.
ತ್ರಿಪುರಾ ವಿಧಾನಸಭೆ ಅಧಿವೇಶನದ ವೇಳೆ ಶಾಸಕ ಜದಬ್ ಲಾಲ್ ನಾಥ್ ಅಶ್ಲೀಲ ವಿಡಿಯೋ ವೀಕ್ಷಿಸಿದ್ದಾರೆ. ಬಾಗ್‌ಬಾಸಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಜದಬ್ ಲಾಲ್ ನಾಥ್ ಅಧಿವೇಶನ ನಡೆಯುತ್ತಿರುವಾಗ ಅವರ ಫೋನ್‌ನಲ್ಲಿ ಸ್ಪಷ್ಟ ಕ್ಲಿಪ್‌ಗಳು ಪ್ಲೇ ಆಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಈ ಹಿಂದೆಯೂ ಶಾಸಕರೊಬ್ಬರು ಸಾರ್ವಜನಿಕವಾಗಿ ಅಶ್ಲೀಲ ವಿಡಿಯೋ ನೋಡಿ ಸಿಕ್ಕಿ ಬಿದ್ದಿದ್ದರು. ಕರ್ನಾಟಕದಲ್ಲಿ 2012 ರಲ್ಲಿ ಬಿಜೆಪಿ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ಲಕ್ಷ್ಮಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದ, ಸಿಸಿ ಪಾಟೀಲ್ ಅವರು ಅಧಿವೇಶನದಲ್ಲಿ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋವನ್ನು ನೋಡಿ ಸಿಕ್ಕಿಬಿದ್ದಿದ್ದರು.