ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಯ್ಯೂಟಬರ್ ಡಾ. ಬ್ರೋ ಚೀನಾವನ್ನು ಹೊಗಳಿದ ವಿಡಿಯೋಗೆ ದೇಶದ್ರೋಹಿ ಪಟ್ಟ ; ನಾವು ಡಾ. ಬ್ರೋಗೆ ಸಪೊರ್ಟ್ ಎಂದ ಫಾನ್ಸ್...!

Twitter
Facebook
LinkedIn
WhatsApp
ಯ್ಯೂಟಬರ್ ಡಾ. ಬ್ರೋ ಚೀನಾವನ್ನು ಹೊಗಳಿದ ವಿಡಿಯೋಗೆ ದೇಶದ್ರೋಹಿ ಪಟ್ಟ ; ನಾವು ಡಾ. ಬ್ರೋಗೆ ಸಪೊರ್ಟ್ ಎಂದ ಫಾನ್ಸ್...!

ಬೆಂಗಳೂರು (ಅ.19): ಇತ್ತೀಚೆಗೆ ಚೀನಾಕ್ಕೆ ಹೋಗಿದ್ದ ಕನ್ನಡದ ಪ್ರಸಿದ್ಧ ಯೂಟ್ಯೂಬರ್‌ ಹಾಗೂ ಪ್ರವಾಸಿಗ ಡಾ ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌ ಭಾರತೀಯನಾಗಿ ಚೀನಾವನ್ನು ಹೊಗಳಿದ್ದಾನೆ. ಚೀನಾದ ಮಕ್ಕಳಿಗೆ ಓದುವಾಗಲೇ ಕೌಶಲ್ಯ ಕಲಿಸಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಜಾತಿ, ಧರ್ಮ ವಿಷ ಬೀಜ ಬಿತ್ತಲಾಗುತ್ತಿದೆ ಎಂದು ಹೇಳಿದ ಡಾ ಬ್ರೋಗೆ ಈಗ ಕೆಲವರು ದೇಶದ್ರೋಹಿ ಎನ್ನುವ ಪಟ್ಟ ಕಟ್ಟಿದ್ದಾರೆ. 

ಚೀನಾದ ಬೀಜಿಂಗ್‌ನಲ್ಲಿ ವೀಡಿಯೋ ಮಾಡುತ್ತಾ ಮಾತನಾಡಿರುವ ಡಾ ಬ್ರೋ, ಮುಂದುವರೆದ ದೇಶದ ಮಕ್ಕಳೆಲ್ಲಾ ಸ್ಕೂಲ್ ಕಾಲೇಜ್ ಗಳಲ್ಲಿ, ಹೊಸ ಹೊಸ ಸ್ಕಿಲ್‌ (skill) ಕಲಿತರೆ , ನಮ್ಮ ಮಕ್ಕಳು ಜಾತಿ ಧರ್ಮ ಅಂತ ಕಿತ್ತಾಡ್ತಾವೇ!  ನಾವು ಈಗಿರುವ ಚೀನಾ ಮಟ್ಟಕ್ಕೆ ಹೋಗಬೇಕಾದರೆ, ಇನ್ನೂ ಕನಿಷ್ಟ 70 ವರ್ಷ ಬೇಕು ಅಂದ್ರೆ, ಆಗ ಚೀನಾ ಇನ್ನೆಲ್ಲಿಗೆ ಹೋಗಿರುಂತೆ ಯೋಚಿಸಿ. ಜಾತಿ ಧರ್ಮ ಅನ್ನುವ ನಂಜು ಬಿಟ್ಟು ಹೊರಬನ್ನಿ ಎಂದು ಹೇಳಿದ್ದಾರೆ. ಆದರೆ, ಭಾರತೀಯನಾಗಿ ಚೀನಾಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಹೊಗಳಿದ ಡಾ. ಬ್ರೋಗೆ ದೇಶದ್ರೋಹಿ ಪಟ್ಟ ಕಟ್ಟಿದ್ದಾರೆ. 

ಇನ್ನು ಕೆಲವರು ನಮ್ಮ ದೇಶ ಚೀನಾ ಮಟ್ಟಕ್ಕೆ ತಲುಪಲು ಇನ್ನೂ 100 ವರ್ಷ ಬೇಕು. ಹುಟ್ಟಿದ್ ತಕ್ಷಣ ಕಲಿಸೋದೆ ಗುಲಾಮಗಿರಿ; ದೇವರು-ದಿಂಡರು, ಜಾತಿ-ಧರ್ಮ, ಸ್ವಾಮಿ-ಮಠ. ಹೇಗೆ ಜೀವಿಸಬೇಕು, ಜೀವನವನ್ನು ಹೇಗೆ ಎದುರಿಸಬೇಕು, ವಿಧ್ಯಾಭ್ಯಾಸ, ಸಾಕ್ಷರತೆ, ಆರೋಗ್ಯ, ಸಾಮಾನ್ಯ ಸಾಮಾಜಿಕ ಜ್ಞಾನ ಎಲ್ಲದಕ್ಕೂ ದೇವರು. ನಮ್ಮ ಕನಿಷ್ಟ ಕರ್ತವ್ಯವನ್ನು ಕಡೆಗಣಿಸಿ ಕಾಣದ ದೇವರಿಗೆ ಮೊರೆ ಹೋಗುವವರು ನಾವು. ಇರೋದನ್ನು ಇರೋ ಹಾಗೆ ಹೇಳಿದ್ರು ನಮ್ ಜನಕ್ಕೆ ಅರ್ಥ ಆಗಲ್ಲ ಬಿಡಿ ಮತ್ತೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನಮ್ಮ ರಾಜಕಾರಣಿಗಳು ಜಾತಿ ಧರ್ಮದ ನಂಜಿನಲ್ಲಿಯೇ ಹುಲುಸಾದ ಓಟಿನ ಬೆಳೆ ಬೆಳೆಯುತ್ತಾರೆ. ಇಲ್ಲಿ ಅವೆರಡರ ಉಲ್ಲೇಖವಿಲ್ಲದೇ ಅಭಿವೃದ್ಧಿಯ ಆಧಾರದ ಮೇಲೆ ಓಟು ಕೇಳುವುದಿಲ್ಲ. ಜನರು ಅಭಿವೃದ್ಧಿ ನೋಡಿ ಮತವು ಹಾಕುವುದಿಲ್ಲ. ಕಳೆದ ನಾಲ್ಕು ವರ್ಷ ನಾವು ಹೇಗೆ ಕಳೆದವು. ನಮಗೆ ಅಭಿವೃದ್ಧಿಯ ವಿಷಯಗಳು ಮರೆತೇ ಹೋಗಿದ್ದವು. ಹಿಜಾಬ್, ಹಲಾಲ್, ಜಟಕಾ ಕಟ್ ಆಗಿವೆ ಎಂದು ಬಸವರಾಜ್‌ ಎನ್ನುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಬ್ರೊ ಒಂದು ಹೇಳಲಿಲ್ಲ. ಆ ಎಲ್ಲಾ ನಾಡಲ್ಲೂ ಬಹುಪಾಲು ಮಕ್ಕಳು ಕಲಿಯುವುದು ತಾಯಿನುಡಿಯಲ್ಲಿ. ವಲಸೆ ಮಿತಿ ಇರತ್ತೆ, ಆ ನಾಡಿನ ಮಂದಿಗೆ ಮೊದಲು ಕೆಲಸ ನಂತರ ಹೊರಗಿನವರಿಗೆ. ವಲಸೆ ಬಂದವರ ಮಕ್ಕಳು ಕೂಡ ಆ ನೆಲದ ನುಡಿಯನ್ನ ಕಲಿತು ಅವರಲ್ಲೊಬ್ಬರಾಗುತ್ತಾರೆ. ನಮ್ಮವು ಜಾತಿ/ಮತ, ಇಲ್ಲದಿರುವ ದೇಶ, ಕುರಡು ನಂಬಿಕೆ ಇಷ್ಟೇ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆನೆಗೆ ತಿನ್ನುವ ಹಲ್ಲು ಬೇರೆ ಮತ್ತು ತೋರಿಸುವ ಹಲ್ಲು ಬೇರೆ ಅಂತಾರೆ. ಚೀನಾ ಕೂಡ ಹಾಗೆ. ಲಕ್ಷಾಂತರ ಟಿಬೆಟ್ ಜನ ಭಾರತದಲ್ಲಿ ನೆಲೆಸಿರುವುದು ಯಾಕೆ? ಉಗೂರ್ ಅಲ್ಲಿ ಚೀನಾ ಏನು ಮತ್ತು ಯಾವ ಪ್ರಮಾಣದಲ್ಲಿ ಮಾಡುತ್ತಿದೆ?  ಬೀಜಿಂಗ್, ಶಾಂಘೈನ ಭವ್ಯತೆ ಕೆಲವೇ ಜನರ ಪಾಲಿಗೆ. ಹಳ್ಳಿಯ ಜನರಿಗೆ ಅದರ ಕನಸೂ ಕಾಣುವ ಅಧಿಕಾರ ಇಲ್ಲ ಎಂದು ಕಮೆಂಟ್‌ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist