ಶನಿವಾರ, ಜೂನ್ 15, 2024
ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!-HSRP ನಂಬರ್ ಪ್ಲೇಟ್ ಅಳವಡಿಸುವ ಬಗ್ಗೆ ಮಹತ್ವದ ಅಪ್ಡೇಟ್; ಇಲ್ಲಿದೆ ಮಾಹಿತಿ-ಇಂದು ಯುಎಸ್ಎ ಮತ್ತು ಭಾರತ ತಂಡ ಮುಖಾಮುಖಿ; ಯಾರಿಗೆ ಗೆಲುವು..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆ.!-ಉಳ್ಳಾಲ ಬೀಚ್‍ಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಸಮುದ್ರ ಪಾಲು; ಮೂವರ ರಕ್ಷಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Vivo Y200: ಮಾರುಕಟ್ಟೆಗೆ ಬರಲಿದೆ ವಿವೋ Y200 ; ಇಲ್ಲಿದೆ ಈ ಫೋನಿನ ಆಕರ್ಷಕ ಫೀಚರ್ಸ್!

Twitter
Facebook
LinkedIn
WhatsApp
Vivo Y200: ಮಾರುಕಟ್ಟೆಗೆ ಬರಲಿದೆ ವಿವೋ Y200 ; ಇಲ್ಲಿದೆ ಈ ಫೋನಿನ ಆಕರ್ಷಕ ಫೀಚರ್ಸ್!

ಕಳೆದ ಕೆಲವು ವಾರಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿರುವ ಫೋನ್ ಎಂದರೆ ಅದು ವಿವೋ ಕಂಪನಿಯ ವಿವೋ Y200 (Vivo Y200). ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಸ್ಮಾರ್ಟ್​ಫೋನ್​ನ ಬಿಡುಗಡೆ ದಿನಾಂಕವನ್ನು ಇದೀಗ ವಿವೋ ಕಂಪನಿ ಬಹಿರಂಗ ಪಡಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ವಿವೋ Y200 ಫೋನ್ ಇದೇ ಅಕ್ಟೋಬರ್ 23 ರಂದು ಅನಾವರಣಗೊಳ್ಳಲಿದೆ. ಈ ಫೋನ್ ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು ಗೋಲ್ಡ್ ಕಲರ್ ಆಯ್ಕೆಯನ್ನು ಹೊಂದಿದೆ ಎಂದು ಕಂಪನಿ ಖಚಿತಪಡಿಸಿದೆ. ಈ ಸ್ಮಾರ್ಟ್​ಫೋನ್ ಫೀಚರ್ಸ್ ಕುರಿತ ಕೆಲ ಮಾಹಿತಿ ಕೂಡ ಸೋರಿಕೆ ಆಗಿದೆ.

ವಿವೋ Y200 ಭಾರತದ ಬಿಡುಗಡೆ ದಿನಾಂಕ ವಿವರ

ವಿವೋ Y200 ಭಾರತದಲ್ಲಿ ಅಕ್ಟೋಬರ್ 23 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಇದು ಅಮೆಜಾನ್ ಅಥವಾ ಫ್ಲಿಪ್​ಕಾರ್ಟ್​ನಲ್ಲಿ ಸೇಲ್ ಕಾಣುತ್ತದೆ. ಈ ಫೋನ್ ಡೆಸರ್ಟ್ ಗೋಲ್ಡ್ ಮತ್ತು ಜಂಗಲ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸಂವೇದಕಗಳನ್ನು ಹೊಂದಿರುತ್ತದೆ. ಇದರಲ್ಲಿರುವ ಕ್ಯಾಮೆರಾ ಕಡಿಮೆ-ಬೆಳಕಿನಲ್ಲಿ ಕೂಡ ಅತ್ಯುತ್ತಮ ಫೋಟೋ ಸೆರೆ ಹಿಡಿಯುತ್ತದೆ. ಇದಕ್ಕಾಗಿ ಸ್ಮಾರ್ಟ್ ಔರಾ ಲೈಟ್ ಅನ್ನು ಅಳವಡಿಸಲಾಗಿದೆ.

Vivo Y200: ಮಾರುಕಟ್ಟೆಗೆ ಬರಲಿದೆ ವಿವೋ Y200 ; ಇಲ್ಲಿದೆ ಈ ಫೋನಿನ ಆಕರ್ಷಕ ಫೀಚರ್ಸ್!
ವಿವೋ Y200 5G ನಿರೀಕ್ಷಿತ ಫೀಚರ್ಸ್:

ಡಿಸ್‌ಪ್ಲೇ: ವಿವೋ Y200 ಸ್ಮಾರ್ಟ್​ಫೋನ್ 6.67-ಇಂಚಿನ FHD+ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬರುವ ನಿರೀಕ್ಷೆಯಿದೆ.

ಪ್ರೊಸೆಸರ್: ಈ ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 4 Gen 1 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ.

RAM ಮತ್ತು ಸಂಗ್ರಹಣೆ: ಈ ಚಿಪ್‌ಸೆಟ್ ಅನ್ನು 8GB RAM ಮತ್ತು 256GB ಸಂಗ್ರಹಣೆಯೊಂದಿಗೆ ಜೋಡಿಸಬಹುದು. ಜೊತೆಗೆ ಮತ್ತಷ್ಟು ವಿಸ್ತರಿಸಬಹುದು ಆಯ್ಕೆ ಇರುತ್ತದೆ.

OS: ಈ ಫೋನ್ ಆಂಡ್ರಾಯ್ಡ್ 13-ಆಧಾರಿತ FunTouchOS 13 ಮೂಲಕ ರನ್ ಆಗುತ್ತದೆ.

Vivo Y200: ಮಾರುಕಟ್ಟೆಗೆ ಬರಲಿದೆ ವಿವೋ Y200 ; ಇಲ್ಲಿದೆ ಈ ಫೋನಿನ ಆಕರ್ಷಕ ಫೀಚರ್ಸ್!

ಕ್ಯಾಮೆರಾಗಳು: ವಿವೋ Y200 OIS ಜೊತೆಗೆ 64MP ಪ್ರೈಮರಿ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾ ಆಯ್ಕೆ ಇರಲಿದೆ.

ಬ್ಯಾಟರಿ: ವಿವೋ Y200 ಸ್ಮಾರ್ಟ್​ಫೋನ್ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,800mAh ಬ್ಯಾಟರಿಯನ್ನು ಹೊಂದಿರಬಹುದು. ಈ ಫೋಣ್ 5ಜಿ ಸಪೋರ್ಟ್ ಮಾಡುತ್ತದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ