ಯೋಗಿ ಆದಿತ್ಯನಾಥ್ ಜತೆ ‘ಜೈಲರ್’ ವೀಕ್ಷಿಸಲಿದ್ದಾರೆ ರಜನಿಕಾಂತ್
ಲಖನೌ: ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರವು ಬಿಡುಗಡೆಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಶೇಷತೆಗಳಿಂದಾಗಿ ಸಿನಿ ರಸಿಕರ ಗಮನ ಸೆಳೆಯುತ್ತಿದೆ. ಬಾಕ್ಸ್ಆಫೀಸ್ನಲ್ಲಿ ಚಿತ್ರದ ಅಬ್ಬರ ಸದ್ಯಕ್ಕಂತು ನಿಲ್ಲುವ ಯಾವುದೇ ಮುನ್ಸೂಚನೆ ಕಂಡು ಬಂದಿಲ್ಲ. ಬಾಕ್ಸ್ ಆಫೀಸ್ ಪಂಡಿತರ ಪ್ರಕಾರ ಚಿತ್ರವು ಶನಿವಾರ 500 ಕೋಟಿ ರೂಪಾಯಿಯ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಚಿತ್ರ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಸೂಪರ್ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾವನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವೀಕ್ಷಿಸಲಿದ್ದಾರೆ. ಈ ವಿಚಾರವನ್ನು ಖುದ್ದು ರಜನಿಕಾಂತ್ ಅವರೇ ಖಚಿತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ರಜನಿಕಾಂತ್ ದೇವರ ದೆಸೆಯಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶನಿವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಚಿತ್ರ ವೀಕ್ಷಿಸಲಿದ್ದೇನೆ ಎಂದು ಲಖನೌ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ.
#WATCH | Actor Rajinikanth arrives in Uttar Pradesh's Lucknow, says, "I will watch the film (Jailor) with the CM". pic.twitter.com/wsBdkosu18
— ANI (@ANI) August 18, 2023
ಚಿತ್ರ ಪ್ರದರ್ಶನಕ್ಕೂ ಮುನ್ನ ರಜಿನಿಕಾಂತ್ ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜ್ಯಪಾಲರ ಜೊತೆಗಿನ ಭೇಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.
प्रदेश की राज्यपाल श्रीमती आनंदीबेन पटेल से आज राजभवन में प्रसिद्ध अभिनेता व निर्देशक श्री रजनीकान्त ने शिष्टाचार भेंट की। pic.twitter.com/Nr3rVHfPwZ
— Governor of Uttar Pradesh (@GovernorofUp) August 19, 2023
ಕರೀನಾ ಜೊತೆ ಕಾಣಿಸಿಕೊಂಡ ಆಲಿಯಾ ಹೊಸ ಮನವಿ-”ಒಂದೇ ಸಿನಿಮಾದಲ್ಲಿ ನಟಿಸಲು ಚಾನ್ಸ್ ಕೊಡಿ”
ನಟಿ ಆಲಿಯಾ ಭಟ್ ಹಾಗೂ ಕರೀನಾ ಕಪೂರ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಇವರಿಗೆ ಒಟ್ಟಿಗೆ ನಟಿಸೋಕೆ ಅವಕಾಶ ಸಿಕ್ಕಿರಲಿಲ್ಲ. ಈಗ ಇಬ್ಬರೂ ಒಟ್ಟಿಗೆ ಇರೋ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ವಿಶೇಷ ಮನವಿ ಮಾಡಿದ್ದಾರೆ.
ಕರೀನಾ ಕಪೂರ್ ಜೊತೆ ನಿಂತು ಆಲಿಯಾ ಭಟ್ ಪೋಸ್ ನೀಡಿದ್ದಾರೆ. ಈ ಫೋಟೋಗೆ ಅವರು ‘ಒಂದೇ ಸಿನಿಮಾದಲ್ಲಿ ನಟಿಸೋಕೆ ಚಾನ್ಸ್ ಕೊಡಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಈ ಮನವಿಯನ್ನು ಯಾವುದಾದರೂ ನಿರ್ಮಾಪಕರು ಪರಿಗಣಿಸಿ ಒಂದೇ ಸಿನಿಮಾದಲ್ಲಿ ಕಾಸ್ಟ್ ಮಾಡುತ್ತಾರಾ ಅನ್ನೋದನ್ನ ಕಾದು ನೋಡ ಬೇಕಿದೆ.
ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ಕಾಣಿಸಿಕೊಂಡಿದ್ದು ಜಾಹೀರಾತಿಗಾಗಿ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಅವರ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ.
ಆಲಿಯಾ ಭಟ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರ 100+ ಕೋಟಿ ರೂಪಾಯಿ ಮಾಡಿದೆ. ಜೊತೆಗೆ ಅವರ ಮೊದಲ ಇಂಗ್ಲಿಷ್ ಸಿನಿಮಾ ‘ಹಾರ್ಟ್ ಆಫ್ ಸ್ಟೋನ್’ ಒಟಿಟಿಯಲ್ಲಿ ಬಿಡುಗಡೆ ಆಗಿದೆ.