ಬುಧವಾರ, ಮೇ 1, 2024
ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!-ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ-Gold Rate: ಏರಿಳಿತದಲ್ಲಿರುವ ಚಿನ್ನದ ದರ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ವಿವರ-ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಾಟ್ಸಪ್ ನಲ್ಲಿ ಹೊಸ ಫೀಚರ್ ; HD ಕ್ವಾಲಿಟಿ ಫೋಟೋ ಆಯ್ಕೆ- ಇಲ್ಲಿದೆ ಮಾಹಿತಿ

Twitter
Facebook
LinkedIn
WhatsApp
ವಾಟ್ಸಪ್ ನಲ್ಲಿ ಹೊಸ ಫೀಚರ್ ; HD ಕ್ವಾಲಿಟಿ ಫೋಟೋ ಆಯ್ಕೆ- ಇಲ್ಲಿದೆ ಮಾಹಿತಿ

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಬಳಕೆದಾರರಿಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಅನೇಕ ನೂತನ ಫೀಚರ್​ಗಳ ಬಗ್ಗೆ ಘೋಷಣೆ ಮಾಡಿರುವ ವಾಟ್ಸ್​ಆ್ಯಪ್ ವಾರಕ್ಕೊಂದು ಆಯ್ಕೆಯನ್ನು ಪರಿಚಯಿಸುತ್ತದೆ. ಇದೀಗ ಬಳಕೆದಾರರ ಬಹುದಿನಗಳ ಬೇಡಿಕೆಯ ಹೆಚ್​ಡಿ ಫೋಟೋ ಕಳುಹಿಸುವ ಆಯ್ಕೆ ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್ ಶೀಘ್ರದಲ್ಲೇ ಬಳಕೆದಾರರಿಗೆ HD ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ ಎಂದು ಮೆಟಾ-ಮಾಲೀಕತ್ವದ ಮೆಸೇಜಿಂಗ್ ಕಂಪನಿಯು ಘೋಷಿಸಿದೆ.

ವಾಟ್ಸ್​ಆ್ಯಪ್​ನ ಈ ಹೊಸ ಫೀಚರ್, ಬಳಕೆದಾರರು HD (2000×3000 ಪಿಕ್ಸೆಲ್‌ಗಳು) ಅಥವಾ ಸ್ಟ್ಯಾಂಡರ್ಡ್ (1365×2048 ಪಿಕ್ಸೆಲ್‌ಗಳು) ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ. ಇದು ಇಂಟರ್ನೆಟ್ ವೇಗದ ಮೇಲೆ ಅವಲಂಬಿಸಿದೆ. ಇಂಟರ್ನೆಟ್ ನಿಧಾನವಾಗಿದ್ದರೆ HD ನಲ್ಲಿರುವ ಫೋಟೋಗಳನ್ನು ಕಳುಹಿಸಲು ಅಥವಾ ಲೋಡ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ HD ಫೋಟೋಗಳು ಹೆಚ್ಚು ಎಮ್​ಬಿಯಿಂದ ಕೂಡಿರುತ್ತದೆ.

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡ ಫೇಸ್‌ಬುಕ್‌ನಲ್ಲಿ ಈ ಹೊಸ ಅಪ್ಡೇಟ್ ಬಗ್ಗೆ ಹಂಚಿಕೊಂಡಿದ್ದಾರೆ. “ವಾಟ್ಸ್​ಆ್ಯಪ್​ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಇದೀಗ ಅಪ್‌ಗ್ರೇಡ್ ಆಗಿದೆ. ಈಗ ನೀವು HD ನಲ್ಲಿ ಫೋಟೋ ಕಳುಹಿಸಬಹುದು,” ಎಂದು ಬರೆದುಕೊಂಡಿದ್ದಾರೆ. ಈ ಆಯ್ಕೆ ಎಂಡ್-ಟು-ಎಂಡ್ ಎನ್​ಕ್ರಿಪ್ಟ್ ಆಗಿದೆ ಎಂದು ಮೆಟಾ ಹೇಳಿದೆ. ಮುಂದಿನ ಕೆಲವು ವಾರಗಳಲ್ಲಿ ಎಚ್‌ಡಿ ಫೋಟೋ ಆಯ್ಕೆ ಜಾಗತಿಕವಾಗಿ ಎಲ್ಲರಿಗೂ ಸಿಗಲಿದೆಯಂತೆ.

 

 

ಒಂದೇ ವಾಟ್ಸ್​ಆ್ಯಪ್​ನಲ್ಲಿ ಅನೇಕ ಅಕೌಂಟ್:

ಶೀಘ್ರದಲ್ಲೇ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಒಂದು ವಾಟ್ಸ್​ಆ್ಯಪ್ ಅಪ್ಲಿಕೇಶನ್‌ನಲ್ಲಿ ಅನೇಕ ವಾಟ್ಸ್​ಆ್ಯಪ್​ ಖಾತೆಗಳನ್ನು ಸ್ವಿಚ್ ರೀತಿಯಲ್ಲಿ ತೆರೆಯಲು ಅವಕಾಶ ಮಾಡಿಕೊಡಲಿದೆ. ಈಗಾಗಲೇ ಈ ಆಯ್ಕೆ ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್​ನಲ್ಲಿ ಇದೆ. ಪ್ರಸ್ತುತ, ವಾಟ್ಸ್​ಆ್ಯಪ್​ ಬಳಕೆದಾರರಿಗೆ ಒಂದು ಮೊಬೈಲ್​ನಲ್ಲಿ ಒಂದು ಖಾತೆಯೊಂದಿಗೆ ಲಾಗ್ ಇನ್ ಮಾಡಲು ಮಾತ್ರ ಅನುಮತಿಸುತ್ತದೆ. ಆದ್ದರಿಂದ, ವಿಭಿನ್ನ ಫೋನ್ ಸಂಖ್ಯೆಗಳೊಂದಿಗೆ ಎರಡು ವಾಟ್ಸ್​ಆ್ಯಪ್​ ಖಾತೆಗಳನ್ನು ಬಳಸುವ ಬಳಕೆದಾರರು ಎರಡು ಮೊಬೈಲ್​ಗಳನ್ನು ಬಳಸಬೇಕಾಗುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಮತ್ತು ಮುಂಬರುವ ವಾರಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಹೊರತರಲಾಗುವುದು ಎಂದು ವರದಿಗಳು ಹೇಳಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ