ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ; ಸಿಎಂ ಮತ್ತು ಜಮೀರ್ ಐಷಾರಾಮಿ ವಿಮಾನ ಪ್ರಯಾಣಕ್ಕೆ ವಿಜಯೇಂದ್ರ ಟೀಕೆ..!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಸಚಿವ ಜಮೀರ್ ಅಹಮದ್ (Zameer Ahmed Khan), ಕೃಷ್ಣಬೈರೇಗೌಡ ಐಷಾರಾಮಿ ವಿಮಾನ ಪ್ರಯಾಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಟೀಕಿಸಿದ್ದಾರೆ.
ಈ ಸಂಬಂಧ ಎಕ್ಸ್ ಮಾಡಿರುವ ಅವರು, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆಯಂತೆ ಜನರ ದುಡ್ಡು ಆಕಾಶದಲ್ಲಿ ಜಾತ್ರೆ ಎಂದು ಕಿಡಿಕಾರಿದ್ದಾರೆ.
"ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ
— Vijayendra Yediyurappa (@BYVijayendra) December 22, 2023
ಜನರ ದುಡ್ಡು ಆಕಾಶದಲ್ಲಿ ಜಾತ್ರೆ".
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ಬರಗಾಲದಿಂದ ಬೇಯುತ್ತಿದೆ, ರೈತರು ಆತ್ಮ ಹತ್ಯೆಗೆ ಶರಣಾಗುತ್ತಿದ್ದಾರೆ, ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ, ಇಂಥಾ ಗಭೀರ ಪರಿಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು, ಮಸ್ತಿಯೇ ತನ್ನ ಜೀವನ ಶೈಲಿ ಎಂದು… pic.twitter.com/Bx5VLq1hsB
ಎಕ್ಸ್ ನಲ್ಲೇನಿದೆ..?: ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ, ಜನರ ದುಡ್ಡು ಆಕಾಶದಲ್ಲಿ ಜಾತ್ರೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ಬರಗಾಲದಿಂದ ಬೇಯುತ್ತಿದೆ, ರೈತರು ಆತ್ಮ ಹತ್ಯೆಗೆ ಶರಣಾಗುತ್ತಿದ್ದಾರೆ, ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ. ಇಂತಹ ಗಭೀರ ಪರಿಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು, ಮಸ್ತಿಯೇ ತನ್ನ ಜೀವನ ಶೈಲಿ ಎಂದು ಪ್ರದರ್ಶಿಸಿಕೊಳ್ಳುತ್ತಿರುವ ಸಚಿವ ಜಮೀರ್ ಅವರ ಜೊತೆ ಜನರ ತೆರಿಗೆ ಹಣ ವ್ಯಯಿಸಿ ಐಷಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿರುವುದು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೋಜಿನ ಭಾಗವಾಗಿರುವುದು ಈ ರಾಜ್ಯದ ದೌರ್ಭಾಗ್ಯವಲ್ಲದೇ ಮತ್ತಿನ್ನೇನು ಅಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಮತ್ತವರ ಮಂತ್ರಿಮಂಡಲದ ಸದಸ್ಯರ ಆಡಂಬರ, ವೈಭವದ ಪ್ರದರ್ಶನ ಗಳನ್ನು ನೋಡಿದರೆ “ರೋಮ್ ದೊರೆ ನೀರೋ” ಉಲ್ಲೇಖಿಸುವ ಬದಲು “ರಾಜ್ಯ ಬರದಿಂದ ತತ್ತರಿಸುತ್ತಿದ್ದರೆ ದೊರೆ ಆಕಾಶದಲ್ಲಿ ಓಲಾಡುತ್ತ ತೇಲುತ್ತಿದ್ದಾರೆ?.” ಎಂದು ವರ್ಣಿಸಬಹುದಾಗಿದೆ ಎಂದು ವಿಜಯೇಂದ್ರ ಗರಂ ಆಗಿದ್ದಾರೆ.
ಸ"ಮಜಾವಾದಿ" ಸಿದ್ದರಾಮಯ್ಯನವರ ಸಾಮಾನ್ಯ ಜೀವನ!
— Basanagouda R Patil (Yatnal) (@BasanagoudaBJP) December 22, 2023
ಶಾಲಾ ಮಕ್ಕಳು ಬಸ್ಸುಗಳು ಸಿಗದೆ ನೇತಾಡಿಕೊಂಡು ಬಿಎಂಟಿಸಿ/ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಓಡಾಡುವುದು, ಸರ್ಕಾರದ ಯೋಜನೆಗಳಿಗೆ ಅನುದಾನಗಳ ಕೊರತೆ, ಶಾಲೆಗಳ ನವೀಕರಣಕ್ಕೆ ಹಣದ ಕೊರತೆ ಹಾಗು ಕಾಂಗ್ರೆಸ್ ಭಾಗ್ಯಗಳಿಗೇ ಅನುದಾನದ ಕೊರತೆ ಮಧ್ಯೆ ಸಿದ್ದರಾಮಯ್ಯನವರ ವಿಮಾನ ಪ್ರಯಾಣ! https://t.co/pqrgIt6uB1
ಇತ್ತ ಯತ್ನಾಳ್ ಕೂಡ ಟೀಕೆ ವ್ಯಕ್ತಪಡಿಸಿದ್ದು, ಸ”ಮಜಾವಾದಿ” ಸಿದ್ದರಾಮಯ್ಯನವರ ಸಾಮಾನ್ಯ ಜೀವನ!, ಶಾಲಾ ಮಕ್ಕಳು ಬಸ್ಸುಗಳು ಸಿಗದೆ ನೇತಾಡಿಕೊಂಡು ಬಿಎಂಟಿಸಿ/ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಓಡಾಡುವುದು, ಸರ್ಕಾರದ ಯೋಜನೆಗಳಿಗೆ ಅನುದಾನಗಳ ಕೊರತೆ, ಶಾಲೆಗಳ ನವೀಕರಣಕ್ಕೆ ಹಣದ ಕೊರತೆ ಹಾಗೂ ಕಾಂಗ್ರೆಸ್ ಭಾಗ್ಯಗಳಿಗೇ ಅನುದಾನದ ಕೊರತೆ, ಈ ಮಧ್ಯೆ ಸಿದ್ದರಾಮಯ್ಯನವರ ವಿಮಾನ ಪ್ರಯಾಣ ಎಂದು ಟಾಂಗ್ ನೀಡಿದ್ದಾರೆ.
ಮೋದಿ ಓಡಾಡೋದು ಐಷಾರಾಮಿ ಫ್ಲೈಟ್ ಅಲ್ವಾ: ಸಿದ್ದರಾಮಯ್ಯ ಪ್ರಶ್ನೆ
ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಯಾವ ಫ್ಲೈಟ್‍ನಲ್ಲಿ ಓಡಾಡುತ್ತಾರೆ..? ಅದು ಐಷಾರಾಮಿ ಫ್ಲೈಟ್ ಅಲ್ವಾ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗರಂ ಆಗಿದ್ದಾರೆ.
ಜಮೀರ್ ಜೊತೆ ಐಷಾರಾಮಿ ಜೆಟ್‍ನಲ್ಲಿ ಪ್ರಯಾಣ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಯಾವುದೇ ಸ್ಥಿತಿ ಇದ್ದರೂ ಮೋದಿ ಓಡಾಡುವ ಫ್ಲೈಟ್ ಎಂತದ್ದು?. ಮೊದಲು ಅದನ್ನು ಬಿಜೆಪಿಯವರಿಗೆ ಕೇಳಿ ಎಂದು ಸಿಎಂ ಸಿಡಿಮಿಡಿಗೊಂಡರು.
ಏನಿದು ಘಟನೆ..?: ದೆಹಲಿಯಿಂದ ಬೆಂಗಳೂರಿಗೆ ನಮ್ಮ ಹೆಮ್ಮೆಯ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸಂತಸದ ಕ್ಷಣಗಳು ಎಂದು ವೀಡಿಯೋವೊಂದನ್ನು ಜಮೀರ್ ಅಹ್ಮದ್ (Zameer Ahmed Khan) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ವೀಡಿಯೋ ಶೇರ್ ಮಾಡಿಕೊಂಡು ಬಿಜೆಪಿ ನಾಯಕರು ಭಾರೀ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.
ವಿಪಕ್ಷ ನಾಯಕ ಆರ ಅಶೋಕ್ ಅವರು, ರಾಜ್ಯದಲ್ಲಿ ಬರದ ಸಂಕಷ್ಟಕ್ಕೆ ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. 60 ಲಕ್ಷಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಬೆಳೆ ನಷ್ಟ ಆಗಿದೆ. ರೈತರು ಬೇರೆ ರಾಜ್ಯಗಳಿಗೆ ಗುಳೇ ಹೋಗುವ ಪರಿಸ್ಥಿತಿ ಇದೆ. ಮತ್ತೊಂದು ಕಡೆ ಜೆಸಿಬಿಯಲ್ಲಿ ಶಾಲೆ ಮಕ್ಕಳು ಶಾಲೆಗೆ ಹೋಗ್ತಿದ್ದಾರೆ. ಇತ್ತ ಸಿಎಂ, ಸಚಿವರು ಖಾಸಗಿ ಜೆಟ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಬರದ ಛಾಯೆ ಸಂದರ್ಭದಲ್ಲಿ ಐಷಾರಾಮಿ ವಿಮಾನ ಪ್ರಯಾಣ ಬಗ್ಗೆ ಖುಷಿಯಾಗಿದೆ ಅಂತ ಜಮೀರ್ ವಿಡಿಯೋ ಹಂಚಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.