ಮಂಗಳವಾರ, ಮೇ 14, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಂಗಳೂರು : ಬೈಕಿಗೆ ಮೀನು ಸಾಗಿಸುತ್ತಿದ್ದ ಲಾರಿ ಡಿಕ್ಕಿ; ಬೈಕ್ ಸವಾರ ಸಾವು!

Twitter
Facebook
LinkedIn
WhatsApp
ಮಂಗಳೂರು : ಬೈಕಿಗೆ ಮೀನು ಸಾಗಿಸುತ್ತಿದ್ದ ಲಾರಿ ಡಿಕ್ಕಿ; ಬೈಕ್ ಸವಾರ ಸಾವು!

ಮಂಗಳೂರು ಡಿಸೆಂಬರ್ 21: ಬೈಕಿಗೆ ಮೀನು ಸಾಗಿಸುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರಿನಲ್ಲಿ ನಡೆದಿದೆ.

ಮೃತರನ್ನು ಸುರತ್ಕಲ್ ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಅಬ್ದುಲ್ ರವೂಫ್ ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದಾಗ, ಹಿಂದಿನಿಂದ ಬರುತ್ತಿದ್ದ ಮೀನಿನ ಲಾರಿ ಅತಿ ವೇಗದ ಚಾಲನೆಯಿಂದ ಬೈಕಿಗೆ ಡಿಕ್ಕಿಯಾಗಿದೆ.

ಬೈಕಿನ ಮಿರರ್ ಗೆ ತಾಗಿದ್ದರಿಂದ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು ತಲೆ ಮತ್ತು ದೇಹದ ಮೇಲಿನಿಂದಲೇ ಲಾರಿಯ ಚಕ್ರ ಹರಿದು ಹೋಗಿದೆ. ಯುವಕ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಸ್ಥಳದಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು ಕಂಕನಾಡಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತೆರವು ಮಾಡಿದ್ದಾರೆ.

ಕುಂದಾಪುರ – ಹೆಜ್ಜೇನು ದಾಳಿಗೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

ಕುಂದಾಪುರ ಡಿಸೆಂಬರ್ 21: ಹೆಜ್ಜೇನು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ಬಸ್ರೂರಿನಲ್ಲಿ ನಡೆದಿದೆ.

ಮೃತರನ್ನು ಬಸ್ರೂರಿನ ನಿವಾಸಿ ಜಗಜೀವನ್ (76) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಇವರು ಮನೆಯಿಂದ ಬಸ್ರೂರಿನ ಬಸ್ ನಿಲ್ದಾಣ ಬಳಿ ಬರುವಾಗ ಹೆಜ್ಜೇನು ಹಿಂಡು ದಾಳಿ ನಡೆಸಿವೆ. ಬಸ್ ನಿಲ್ದಾಣ ಬಳಿಯಿದ್ದ ಹೆಜ್ಜೇನು ಹಿಂಡಿಗೆ ಯಾವುದೋ ಹಕ್ಕಿ ಬಡಿದ ಕಾರಣ ಹೆಜ್ಜೇನುಗಳು ಅದೇ ದಾರಿಯಲ್ಲಿ ಬರುತ್ತಿದ್ದ ಜಗಜೀವನ್ ಅವರ ಮೇಲೆ ದಾಳಿ ನಡೆಸಿವೆ. ಏಕಕಾಲದಲ್ಲಿ ನೂರಾರು ಹೆಜ್ಜೇನುಗಳು ದಾಳಿ ನಡೆಸಿದ್ದರಿಂದ ಮುಖ, ದೇಹ, ಕೈ-ಕಾಲುಗಳೆಲ್ಲ ಊದಿಕೊಂಡು, ಗಂಭೀರ ಗಾಯಗೊಂಡಿದ್ದರೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ