WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು
ಮುಂಬೈ: ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಕ್ರಿಕೆಟ್ ಟೂರ್ನಿ ವೀಕ್ಷಿಸುವವರಿಗೆ ಬಿಸಿಸಿಐ (BCCI) ಬಂಪರ್ ಆಫರ್ ಕೊಟ್ಟಿದೆ. ಮಹಿಳಾ ಕ್ರಿಕೆಟ್ ಬಗ್ಗೆ ಆಸಕ್ತಿ ಹೆಚ್ಚಿಸಲು ಹಾಗೂ ಸ್ಟೇಡಿಯಂಗಳಲ್ಲಿ ಹೆಚ್ಚಿನ ಜನ ಸೇರುವಂತೆ ಮಾಡಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡಿದೆ.
ಮಾರ್ಚ್ 4 ರಿಂದ ಮಾರ್ಚ್ 26ರ ವರೆಗೆ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಬರುವ ಎಲ್ಲ ಮಹಿಳೆಯರು (Womens) ಹಾಗೂ ಹುಡುಗಿಯರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ.
ಚೊಚ್ಚಲ WPL ಆವೃತ್ತಿಯಲ್ಲಿ ಪ್ಲೆ ಆಫ್, ಫೈನಲ್ ಪಂದ್ಯಗಳು ಸೇರಿದಂತೆ ಒಟ್ಟು 22 ಪಂದ್ಯಗಳು ನಡೆಯಲಿವೆ. ಮಾರ್ಚ್ 4ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಅದಾನಿ ನೇತೃತ್ವದ ಗುಜರಾತ್ ಜೈಂಟ್ಸ್ (Gujarat Giants) ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಸೆಣಸಲಿವೆ.
ಈ ಪಂದ್ಯಗಳನ್ನು ವೀಕ್ಷಿಸಲು ಮಹಿಳೆಯರು ಮತ್ತು ಹುಡುಗಿಯರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಇತ್ತೀಚೆಗೆ ಭಾರತ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡಿದ್ದ ತಮ್ಮ ನಿರ್ಧಾರಕ್ಕೆ ಅನುಗುಣವಾಗಿ ಡಬ್ಲ್ಯೂಪಿಎಲ್ ಸರಣಿಯಲ್ಲೂ ಉಚಿತಪ್ರವೇಶ ನೀಡಲು ನಿರ್ಧರಿಸಿದೆ. ಪುರುಷರು ಹಾಗೂ ಹುಡುಗರಿಗೆ ಕ್ರಮವಾಗಿ 100 ರೂ. ಹಾಗೂ 400 ರೂ. ಟಿಕೆಟ್ ದರ ನಿಗದಿಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
I am delighted to announce the #TataGroup as the title sponsor of the inaugural #WPL. With their support, we're confident that we can take women's cricket to the next level. @BCCI @BCCIWomen @wplt20 pic.twitter.com/L05vXeDx1j
— Jay Shah (@JayShah) February 21, 2023
ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವ ಪಡೆದಿದ್ದ ಟಾಟಾ ಸಮೂಹ ಇದೀಗ ಡಬ್ಲ್ಯೂಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆಯಲು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ನಮಗೆ ಸಂತೋಷ ಉಂಟುಮಾಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಟ್ವೀಟ್ ಮೂಲಕ ತಿಳಿಸಿದ್ದಾರೆ.