ಸೋಮವಾರ, ಮೇ 20, 2024
ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!-ಸಿಎಂ ಸಿದ್ದರಾಮಯ್ಯಗೆ ಸೋಮಾರಿ ಸಿದ್ದು ಎಂದು ನಟ ಚೇತನ್ ಅಹಿಂಸಾ ವ್ಯಂಗ್ಯ..!-Gold Rate: ಇಂದಿನ ಚಿನ್ನಾಭರಣದ ಬೆಲೆ ಹೇಗಿದೆ; ಖರೀದಿಗೆ ಸೂಕ್ತವೇ.?-ಆರ್ಸಿಬಿ ಗೆ ಕಪ್ ಗೆಲ್ಲಲು ಮುಂದಿನ ಪಂದ್ಯ ಯಾವಾಗ; ಎದುರಾಳಿ ತಂಡ ಯಾವುದು.?-ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವರು ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ; ಇರಾನ್ ಮಾದ್ಯಮ ವರದಿ-ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ಮತ; ವೈರಲ್ ವಿಡಿಯೋ ಇಲ್ಲಿದೆ-ಅಭಿಷೇಕ್ ಶರ್ಮರಿಂದ ಕೊಹ್ಲಿ ದಾಖಲೆ ಉಡಿಸ್; ಹೈದರಾಬಾದಿಗೆ ಭರ್ಜರಿ ಗೆಲುವು..!-ಗಗನೇಕ್ಕೇರುತ್ತಿದೆ ಚಿಕನ್ ದರ; ಮೊಟ್ಟೆ ಬೆಲೆಯೂ ಏರಿಕೆ.!-ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನೋ ಕಿಸ್ ಪಾಲಿಸಿ ಹಾಕಿಕೊಂಡು ಲಸ್ಟ್ ಸ್ಟೋರಿಸ್ - 2 ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳನ್ನು ಮಾಡಿ ನಿಯಮ ಮುರಿದ ಬಗ್ಗೆ ಕಾರಣ ತಿಳಿಸಿದ ನಟಿ ತಮನ್ನಾ

Twitter
Facebook
LinkedIn
WhatsApp
120

ನಟಿ ತಮನ್ನಾ (Tamannaah Bhatia ) ಸದ್ಯ ಸುದ್ದಿಯಲ್ಲಿದ್ದಾರೆ. ಅವರ ವೃತ್ತಿ ಜೀವನ ಹಾಗೂ ಖಾಸಗಿ ಜೀವನ ಎರಡೂ ಚರ್ಚೆಯ ಕೇಂದ್ರಬಿಂದು ಆಗಿದೆ. ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಇದರಲ್ಲಿ ಹಸಿಬಿಸಿ ದೃಶ್ಯಗಳಿವೆ. ವಿಜಯ್ ವರ್ಮಾ ಜೊತೆಗಿನ ಲವ್ ವಿಚಾರಕ್ಕೂ ತಮನ್ನಾ ಸುದ್ದಿ ಆಗುತ್ತಿದ್ದಾರೆ. ಈಗ ತಮನ್ನಾ ಅವರು ಮತ್ತೊಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಅವರು ಎಂದಿಗೂ ಕುಟುಂಬದವರ ಜೊತೆ ಹಸಿಬಿಸಿ ದ್ರಶ್ಯಗಳನ್ನು ನೋಡುತ್ತಿರಲಿಲ್ಲವಂತೆ. ಈ ರೀತಿಯ ವಿಚಾರಗಳು ಅವರಿಗೆ ಇರಿಸುಮುರುಸು ತರಿಸುತ್ತಿದ್ದವು. ಈ ಬಗ್ಗೆ ತಮನ್ನಾ ಮಾತನಾಡಿದ್ದಾರೆ.

‘ಲಸ್ಟ್ ಸ್ಟೋರಿಸ್ 2’ ಪ್ರಚಾರ ಕಾರ್ಯದಲ್ಲಿ ತಮನ್ನಾ ಬ್ಯುಸಿ ಆಗಿದ್ದಾರೆ. ಇಷ್ಟು ವರ್ಷಗಳ ಕಾಲ ನೋ ಕಿಸ್ ಪಾಲಿಸಿ ಹಾಕಿಕೊಂಡಿದ್ದ ಅವರು ಇದೇ ಮೊದಲ ಬಾರಿಗೆ ಈ ನಿಯಮ ಮುರಿದಿದ್ದಾರೆ. ವಿಜಯ್ ವರ್ಮಾ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕೆಲವರಿಂದ ಟೀಕೆ ಕೂಡ ವ್ಯಕ್ತವಾಗಿದೆ. ಈಗ ತಮನ್ನಾ ಅವರು ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ.

‘ನಾನು ಆಗಿನ್ನೂ ಪ್ರೇಕ್ಷಕನಾಗಿದ್ದೆ. ನನ್ನ ಕುಟುಂಬದೊಂದಿಗೆ ಕುಳಿತು ಹಸಿಬಿಸಿ ದೃಶ್ಯಗಳನ್ನು ನೋಡುತ್ತಿರಲಿಲ್ಲ. ನನಗೆ ಇರಿಸುಮುರುಸು ಆಗುತ್ತಿತ್ತು. ಆ ರೀತಿಯ ದೃಶ್ಯ ಬಂದಾಗ ನಾನು ಬೇರೆ ಕಡೆ ನೋಡಲು ಪ್ರಾರಂಭಿಸುತ್ತಿದ್ದೆ. ನನ್ನ ವೃತ್ತಿಜೀವನದಲ್ಲಿ ಎಂದಿಗೂ ಆ ರೀತಿಯ ಸಿನಿಮಾ ಮಾಡಿರಲಿಲ್ಲ’ ಎಂದಿದ್ದಾರೆ ತಮನ್ನಾ.

‘ಈಗ ನನ್ನ ಪ್ರೇಕ್ಷಕರಿಗೆ ಹಾಗೆಯೇ ಆಗಬೇಕೆಂದು ನಾನು ಬಯಸುವುದಿಲ್ಲ. ಆ ಭ್ರಮೆ ನನಗೆ ಮುರಿದುಹೋಗಿದೆ. ಹೀಗಾಗಿ ನಾನು ಕಲಾವಿದನಾಗಿ ನನ್ನನ್ನು ಅನ್ವೇಷಿಸಲು ಮತ್ತು ವಿವಿಧ ರೀತಿಯ ಪಾತ್ರಗಳನ್ನು ಮತ್ತು ಕೆಲಸಗಳನ್ನು ಮಾಡುತ್ತಾ ಖುಷಿ ಪಡುತ್ತೇನೆ’ ಎಂದಿದ್ದಾರೆ ತಮನ್ನಾ. ಈ ಕಾರಣಕ್ಕೆ ಅವರು ‘ಲಸ್ಟ್​ ಸ್ಟೋರಿಸ್ 2’ ಚಿತ್ರದಲ್ಲಿ ನಟಿಸಿದರು ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ